ಭಾರತದಿಂದ ಪದಕಗಳ ಭರ್ಜರಿ ಬೇಟೆ, ಮೇರಿ ಕೋಮ್- ಸಂಜೀವ್- ಗೌರವ್ ಸೇರಿ ಒಟ್ಟು 8 ಚಿನ್ನ

ಡಿಜಿಟಲ್ ಕನ್ನಡ ಟೀಮ್:

ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತೀಯ ಅಥ್ಲೀಟ್ ಗಳ ಪದಕದ ಬೇಟೆ ಭರ್ಜರಿಯಾಗಿ ಮುಂದುವರಿದಿದೆ. ಶನಿವಾರ ಭಾರತಕ್ಕೆ ಮೂರು ಚಿನ್ನದ ಪದಕ ಲಭಿಸಿದ್ದು, ಮಹಿಳೆಯರ ಬಾಕ್ಸಿಂಗ್ ನಲ್ಲಿ ಮೇರಿ ಕೋಮ್, ಪುರುಷರ ಬಾಕ್ಸಿಂಗ್ ನಲ್ಲಿ ಗೌರವ್ ಸೋಲಂಕಿ ಹಾಗೂ ಶೂಟಿಂಗ್ ನಲ್ಲಿ ಸಂಜೀವ್ ರಜಪೂತ್ ಸ್ವರ್ಣಕ್ಕೆ ಕೊರಳೊಡ್ಡಿದ್ದಾರೆ.

ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ಮೇರಿ ಕೋಮ್ ತಮ್ಮ ಪ್ರತಿಸ್ಪರ್ಧಿ ಐರ್ಲೆಂಡ್ ನ ಕ್ರಿಸ್ಟೀನಾ ಒಹಾರ ವಿರುದ್ಧ ಜಯಿಸಿದರು. ಪುರುಷರ 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಸಂಜೀವ್ ರಜಪೂತ್ 454.5 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಇನ್ನು ಪುರುಷರ 52 ಕೆ.ಜಿ ಬಾಕ್ಸಿಂಗ್ ನಲ್ಲಿ ಗೌರವ್ ಸೋಲಂಕಿ ತಮ್ಮ ಎದುರಾಳಿ ಐರ್ಲೆಂಡ್ ನ ಬ್ರೆಂಡನ್ ಇರ್ವಿನ್ ವಿರುದ್ಧ ಗೆದ್ದರು.

ಪುರುಷರ ಜಾವ್ಲಿನ್ ಥ್ರೋ ವಿಭಾಗದಲ್ಲಿ ನೀರಜ್ ಚೋಪ್ರಾ, 125 ಕೆ.ಜಿ  ಪುರುಷರ ಕುಸ್ತಿಯಲ್ಲಿ ಸುಮಿತ್ ಮಲಿಕ್, 50 ಕೆ.ಜಿ ಮಹಿಳೆಯರ ಕುಸ್ತಿಯಲ್ಲಿ ವಿನೇಶ್ ಫೋಗತ್, ಮಹಿಳೆಯರ ಟೇಬಲ್ ಟೆನಿಸ್ ಸಿಂಗಲ್ಸ್ ನಲ್ಲಿ ಮನಿಕಾ ಬಾತ್ರಾ, 75 ಕೆ.ಜಿ ಬಾಕ್ಸಿಂಗ್ ನಲ್ಲಿ ವಿಕಾಸ್ ಕ್ರಿಶನ್ ಯಾದವ್ ಚಿನ್ನದ ಪದಕ ಬಾಚಿಕೊಂಡರು.

ಪುರುಷರ 60 ಕೆ.ಜಿ ಬಾಕ್ಸಿಂಗ್ ನಲ್ಲಿ ಮನಿಷ್ ಕೌಶಿಕ್, 49 ಕೆ.ಜಿ ವಿಭಾಗದಲ್ಲಿ ಅಮಿತ್ ಪಂಘಲ್, 91+ ಕೆ.ಜಿ ವಿಭಾಗದಲ್ಲಿ ಸತೀಶ್ ಕುಮಾರ್, ಸ್ಕ್ವಾಷ್ ಮಿಶ್ರ ಡಬಲ್ಸ್ ನಲ್ಲಿ ದೀಪಿಿಕಾ ಪಳ್ಳಿಕಲ್- ಸೌರವ್ ಘೋಷಾಲ್ ಜೋಡಿ, ಪುರುಷರ ಟೇಬಲ್ ಟೆನಿಸ್ ಡಬಲ್ಸ್ ನಲ್ಲಿ ಶರತ್ ಮತ್ತು ಸಾಥಿಯನ್ ಜೋಡಿ ಬೆಳ್ಳಿ ಪದಕ ಪಡೆಯಿತು.

ಮಹಿಳೆಯರ 62 ಕೆ.ಜಿ ವಿಭಾಗದಲ್ಲಿ ಸಾಕ್ಷಿ ಮಲಿಕ್, ಪುರುಷರ 86 ಕೆ.ಜಿ ಕುಸ್ತಿಯಲ್ಲಿ ಸೋಮ್ ವೀರ್ ಕದಿಯನ್, ಬ್ಯಾಡ್ಮಿಂಟನ್ ಮಹಿಳೆಯರ ಡಬಲ್ಸ್ ನಲ್ಲಿ ಅಶ್ವಿನಿ-ಸಿಕ್ಕಿ ಜೋಡಿ, ಟೇಬಲ್ ಟೆನಿಸ್ ಪುರುಷರ ಡಬಲ್ಸ್ ನಲ್ಲಿ ಹರ್ಮೀತ್-ಸನಿಲ್ ಜೋಡಿ ಕಂಚಿನ ಪದಕ ಪಡೆಯಿತು.

ಬ್ಯಾಡ್ಮಿಂಟನ್ ನಲ್ಲಿ ಸೈನಾ ನೆಹ್ವಾಲ್ ಹಾಗೂ ಕೆ.ಶ್ರೀಕಾಂತ್ ಕ್ರಮವಾಗಿ ಮಹಿಳೆಯರ ಹಾಗೂ ಪುರುಷರ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಶ್ರೀಕಾಂತ್ ಇಂಗ್ಲೆಂಡ್ ರಾಜೀವ್ ಔಸೆಫ್ ವಿರುದ್ಧ 21-10, 21-17 ಗೇಮ್ ಗಳಿಂದ ಗೆದ್ದರು. ಮಹಿಳೆಯರ ಸಿಂಗಲ್ಸ್ ನಲ್ಲಿ ಸೈನಾ ನೆಹ್ವಾಲ್ ತಮ್ಮ ಪ್ರತಿಸ್ಪರ್ಧಿ ಸ್ಕಾಟ್ಲೆಂಡ್ ನ ಕ್ರಿಸ್ಟಿ ಗಿಲ್ಮೋರ್ ವಿರುದ್ಧ 21-14, 18-21, 21-17 ಗೇಮ್ ಗಳಿಂದ ಗೆದ್ದರು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ಪಿ.ವಿ ಸಿಂಧು ಕೆನಡಾದ ಮಿಚೆಲ್ ಲೀ ವಿರುದ್ಧ 21-18, 21-08 ಗೆದ್ದು ಫೈನಲ್ ಪ್ರವೇಶಿಸಿದ್ದಾರೆ. ಇದರೊಂದಿಗೆ ಸೈನಾ ಮತ್ತು ಸಿಂಧು ಪರಸ್ಪರ ಎದುರಾಗಲಿದ್ದು, ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿ ಖಚಿತವಾಗಿದೆ.

Leave a Reply