ಸೈನಾಗೆ ಚಿನ್ನ, ಸಿಂಧು- ಶ್ರೀಕಾಂತ್ ಗೆ ಬೆಳ್ಳಿ

ಡಿಜಿಟಲ್ ಕನ್ನಡ ಟೀಮ್:

ಪ್ರಸಕ್ತ ಕಾಮನ್ವೆಲ್ತ್ ಕ್ರೀಡಾಕೂಟ ಅಂತಿಮ ಘಟ್ಟಕ್ಕೆ ಬಂದು ನಿಂತಿದ್ದು, ಭಾರತೀಯ ಸ್ಪರ್ಧಿಗಳು ಅಮೋಘ ಪ್ರದರ್ಶನ ನೀಡಿದ್ದಾರೆ. ಇಂದು ಭಾರತದ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ಹಾಗೂ ಪಿ.ವಿ ಸಿಂಧು ಪ್ರಶಸ್ತಿ ಸುತ್ತಿನಲ್ಲಿ ಸೆಣಸಿದ್ದು, ಸೈನಾ ಚಿನ್ನ ಹಾಗೂ ಸಿಂಧು ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ. ಇನ್ನು ಪುರುಷರರ ಸಿಂಗಲ್ಸ್ ವಿಭಾಗದಲ್ಲಿ ಕಿಡಂಬಿ ಶ್ರೀಕಾಂತ್ ಪ್ರಶಸ್ತಿ ಸುತ್ತಿನಲ್ಲಿ ಮಲೇಷ್ಯಾದ ಲೀ ಚಾಂಗ್ ವಿ ವಿರುದ್ಧ 21-19, 14-21, 14-21 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟರು.

ಸ್ಕ್ವಾಷ್ ನ ಮಹಿಳೆಯರ ಡಬಲ್ಸ್ ನಲ್ಲಿ ಭಾರತದ ದೀಪಿಕಾ ಪಳ್ಳಿಕಲ್ ಹಾಗೂ ಜೋಷ್ನಾ ಚಿನ್ನಪ್ಪ ಜೋಡಿ ಪ್ರಶಸ್ತಿ ಸುತ್ತಿನಲ್ಲಿ ಸೋತು ಬೆಳ್ಳಿ ಪಡೆದರೆ, ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ರಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಜೋಡಿ ಪ್ರಶಸ್ತಿಿ ಸುತ್ತಿನಲ್ಲಿ ಸೋತು ಬೆಳ್ಳಿ ಪದಕ ಪಡೆಯಿತು.

ಟೇಬಲ್ ಟೆನಿಸ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಶರತ್ ಅಚಂತ್ ಕಂಚಿನ ಪದಕ ಪಡೆದಿದ್ದಾರೆ. ಅದರೊಂದಿಗೆ ಭಾನುವಾರ ಭಾರತಕ್ಕೆ 1 ಚಿನ್ನ, 4 ಬೆಳ್ಳಿ, 1 ಕಂಚು ಲಭಿಸಿದ್ದು, ಈವರೆಗೂ ಕ್ರೀಡಾಕೂಟದಲ್ಲಿ 26 ಚಿನ್ನ, 20 ಬೆಳ್ಳಿ, 20 ಕಂಚು ಸೇರಿದಂತೆ ಒಟ್ಟು 66 ಪದಕ ಸಿಕ್ಕಿದೆ.

Leave a Reply