ಕೃತಕ ಗರ್ಭಧಾರಣೆಯಲ್ಲಿ ಲೇಸರ್ ಬಳಕೆ, ನೀವು ತಿಳಿದುಕೊಳ್ಳಿ ಇದರ ಪ್ರಯೋಜನ

ಲೇಖಕರು :ಡಾ.ಬಿ.ರಮೇಶ್

ಇತ್ತೀಚಿನ ವರ್ಷಗಳಲ್ಲಿ ಸಂತಾನಹೀನ ದಂಪತಿಗಳ ಸಂಖ್ಯೆ ಹೆಚ್ಚುತ್ತಲೇ ಹೊರಟಿದೆ. ಅದಕ್ಕೆ ಹತ್ತು ಹಲವು ಕಾರಣಗಳಿವೆ. ಸಂತಾನದ ಕೊರತೆಯನ್ನು ನೀಗಿಸಲು ದಂಪತಿಗಳು ಐವಿಎಫ್ ಅಂದರೆ ಕೃತಕ ಗರ್ಭಧಾರಣೆ ಪ್ರಕ್ರಿಯೆಗೆ ಮೊರೆ ಹೋಗುತ್ತಿದ್ದಾರೆ. ಸಾಕಷ್ಟು ಜನರು ಅದರಲ್ಲಿ ಯಶಸ್ಸನ್ನು ಕಂಡುಕೊಳ್ಳುವುದರ ಮೂಲಕ ಅವರ ಕುಟುಂಬದಲ್ಲಿ ಕಂದನ ಕಲರವ ಕೇಳುವುದು ಸಾಧ್ಯವಾಗಿದೆ.

ಕೆಲವರು ಐವಿಎಫ್ ಪ್ರಕ್ರಿಯೆಗೆ ಒಳಗಾದರೂ ಅದರಲ್ಲಿ ಯಶಸ್ಸು ಕಾಣದೆ ಕೊರಗುವಂತಾಗಿದೆ. ಸಣ್ಣ ಪುಟ್ಟ ಲೋಪ ಕೂಡ ಒಮ್ಮೊಮ್ಮೆ ದಂಪತಿಗಳನ್ನು ನಿರಾಶೆಯಲ್ಲಿ ಮುಳುಗುವಂತೆ ಮಾಡುತ್ತದೆ. ಐವಿಎಫ್’ನಲ್ಲಿ ಲೇಸರ್ ಬಳಕೆ ಮಾಡುವುದರ ಮೂಲಕ ಸಂತಾನಹೀನ ದಂಪತಿಗಳಲ್ಲಿ ಅದರ ಯಶಸ್ಸಿನ ಪ್ರಮಾಣ ಹೆಚ್ಚುವಂತೆ ಮಾಡುವುದು ಸಾಧ್ಯವಾಗಿದೆ.

ಪ್ರಕ್ರಿಯೆ ಹೇಗೆ?

ಅಂಡಾಣು – ವೀರ್ಯಾಣು ಮಿಲನವಾಗಿ ಭ್ರೂಣ ರಚನೆಗೊಂಡ 6ರಿಂದ 10 ದಿನಗಳೊಳಗೆ ಅದು ಗರ್ಭಕೋಶದಲ್ಲಿ ಪ್ರತಿಷ್ಠಾಪನೆಗೊಳ್ಳುತ್ತದೆ. ಇದು ನೈಸರ್ಗಿಕ ಗರ್ಭಧಾರಣೆಯ ಪ್ರಕ್ರಿಯೆ.

ಕೃತಕ ಗರ್ಭಧಾರಣೆಯ ವಿಧಾನದಲ್ಲಿ ಅಂಡಾಣು ವೀರ್ಯಾಣುವನ್ನು ಪ್ರಯೋಗಾಲಯದಲ್ಲಿ ಮಿಲನಗೊಳಿಸಿ ಬಳಿಕ ನಿಶ್ಚಿತ ಅವಧಿಯಲ್ಲಿ ಅದನ್ನು ಗರ್ಭಕೋಶದಲ್ಲಿ ಸೇರಿಸಲಾಗುತ್ತದೆ. ಈ ಪ್ರಕ್ರಿಯೆ ಸಮರ್ಪಕವಾಗಿ ನೆರವೇರಿದರೆ ಮಾತ್ರ ಸಂತಾನ ಪ್ರಾಪ್ತಿಯಲ್ಲಿ ಯಶಸ್ಸು ಕಾಣಬಹುದು.

ಪ್ರಯೋಗಾಲಯದಲ್ಲಿ ಭ್ರೂಣವನ್ನು ರೂಪಿಸಿ ಗರ್ಭಕೋಶಕ್ಕೆ ಸೇರಿಸುವ ಪ್ರಕ್ರಿಯೆ ಅತ್ಯಂತ ಸೂಕ್ಷ್ಮವಾದುದು. ಅದನ್ನು ಬರಿಗಣ್ಣಿನಿಂದ ನೋಡಲು ಸಾಧ್ಯವಿಲ್ಲ.

ಭ್ರೂಣದ ಸುತ್ತಲು ಒಂದು ಬಗೆಯ ಲೋಳೆಯಂತಹ ಪೊರೆ ಆವರಿಸಿಕೊಂಡಿರುತ್ತದೆ. ಅದನ್ನು ವೈದ್ಯಭಾಷೆಯಲ್ಲಿ ‘ಝೋನಾ ಪೆಲೂಸಿಡಾ (Zona pellucida) ಎಂದು ಕರೆಯುತ್ತಾರೆ. ಈ ಲೋಳೆಯಂತಹ ಪೊರೆಯನ್ನು ಕಳಚಿದಾಗ ಮಾತ್ರ ಭ್ರೂಣ ಯಶಸ್ವಿಯಾಗಿ ಗರ್ಭಕೋಶದಲ್ಲಿ ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ. ಲೇಸರ್ ಭ್ರೂಣದ ಮೇಲಿದ ಮೇಲಿನ ಲೋಳೆಯಂಥ ಪೊರೆಯನ್ನು ನಿವಾರಿಸಲು ನೆರವಾಗುತ್ತದೆ.

ಭ್ರೂಣತಜ್ಞರು ಭ್ರೂಣವನ್ನು ನಳಿಕೆಯಂತಹ ಒಂದು ಸಾಧನದಲ್ಲಿ ಇಟ್ಟು ಲೇಸರ್’ನಿಂದ ಅದಕ್ಕೆ ಶೂಟ್ ಮಾಡುತ್ತಾರೆ. ಆ ಬಳಿಕವೇ ಅದನ್ನು ಗರ್ಭಕೋಶದ ಆವರಣದಲ್ಲಿ ಸೇರ್ಪಡೆ ಮಾಡುತ್ತಾರೆ. ಈ ರೀತಿ ಯಶಸ್ವಿ ಕೃತಕ ಗರ್ಭದ ಪ್ರಕ್ರಿಯೆ ನೆರವೇರುತ್ತದೆ. ಒಂದು ವೇಳೆ ಭ್ರೂಣದ ಆವರಣ ಕಳಚದೇ ಇದ್ದರೆ ಗರ್ಭಧಾರಣೆ ಪ್ರಕ್ರಿಯೆ ವಿಫಲತೆಯ ಹಾದಿ ಹಿಡಿಯುತ್ತದೆ.

ಐವಿಎಫ್ ಲೇಸರ್ ಯಾರಿಗೆ ಸೂಕ್ತ?

35 ವಯಸ್ಸು ದಾಟಿದ ಮಹಿಳೆಯರಲ್ಲಿ ಗರ್ಭಧರಿಸುವ ಸಾಧ್ಯತೆ ಕಡಿಮೆಯಾಗುತ್ತ ಹೋಗುತ್ತದೆ. ಅಂಥವರು ಕೃತಕ ಗರ್ಭಧಾರಣೆ ಪ್ರಕ್ರಿಯೆ ಐವಿಎಫ್’ಗೆ ಮೊರೆ ಹೋಗುತ್ತಾರೆ. ಮೊದಲ ಋತುಚಕ್ರದ ಅವಧಿಯ ಎಷ್ಟು ಅಂಡಾಣುಗಳು ದೊರೆತಿವೆ. ಅದರಲ್ಲಿ ಎಷ್ಟು ಗುಣಮಟ್ಟದ್ದಾಗಿವೆ ಕೃತಕ ಗರ್ಭಧಾರಣೆಯ ಪ್ರಕ್ರಿಯೆಯಲ್ಲಿ ಎಷ್ಟು ಅಂಡಾಣುಗಳನ್ನು ಬಳಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸುತ್ತಾರೆ.

ಮೊದಲು ವೈದ್ಯರು ಸೂಜಿಯ ಮುಖಾಂತರ ಭ್ರೂಣದ ಮೇಲಿನ ಲೋಳೆಯ ಆವರಣ ತೆಗೆಯಲು ಬಳಸುತ್ತಿದ್ದರು. ಅದು ಅಷ್ಟೊಂದು ನಿಖರವಾಗಿ ಆಗುತ್ತಿರಲಿಲ್ಲ. ಹೀಗಾಗಿ ಆ ಪ್ರಕ್ರಿಯೆ ವಿಫಲವಾಗುವ ಸಾಧ್ಯತೆಗಳು ಹೆಚ್ಚಾಗುತ್ತಿತ್ತು. ಲೇಸರ್ ಕಿರಣಗಳನ್ನು ಬಳಸಿಕೊಳ್ಳುವುದರ ಮೂಲಕ ಯಶಸ್ವಿನ ಪ್ರಮಾಣ ಹೆಚ್ಚಿಸಬಹುದಾಗಿದೆ.

ಲೇಸರ್’ನಿಂದ ಏನೇನು ಲಾಭ?

ಐವಿಎಫ್ ವಿಧಾನದಲ್ಲಿ ಲೇಸರ್ ಕಿರಣಗಳ ಬಳಕೆ ಮಾಡಿಕೊಳ್ಳುವುದರ ಮೂಲಕ ಭ್ರೂಣವನ್ನು ರೋಗಮುಕ್ತಗೊಳಿಸುವುದು ಈಗ ಸಾಧ್ಯವಿದೆ. ಭ್ರೂಣತಜ್ಞರು ಭ್ರೂಣದ ಒಂದೇ ಒಂದು ಜೀವಕೋಶವನ್ನು ಸ್ಯಾಂಪಲ್ ತೆಗೆದುಕೊಂಡು ಅದು ರೋಗಗ್ರಸ್ಥವೇ, ರೋಗಮುಕ್ತವೇ ಎಂದು ಪರಿಶೀಲನೆ ಮಾಡುತ್ತಾರೆ.(PGS)

ಒಂದು ವೇಳೆ ಭ್ರೂಣದಲ್ಲಿ ಏನಾದರೂ ಕ್ರೋಮೋಜೋಮ್ ಸಮಸ್ಯೆ ಇದ್ದರೆ, ಅನುವಂಶೀಯ ತೊಂದರೆ ಕಂಡುಬಂದಲ್ಲಿ, ಬುದ್ಧಮಾಂದ್ಯತೆ ಬರುವ ಸಾಧ್ಯತೆ ಇದ್ದಲ್ಲಿ ಅಂತಹ ಭ್ರೂಣವನ್ನು ಗರ್ಭಕೋಶಕ್ಕೆ ಸೇರ್ಪಡೆ ಮಾಡುವುದನ್ನು ತಡೆಹಿಡಿಯುತ್ತಾರೆ. ಅಂತಹ ಸಂದರ್ಭದಲ್ಲಿ ಐವಿಎಫ್ ಪ್ರಕ್ರಿಯೆಯನ್ನು ಮುಂದಿನ ಸೈಕಲ್’ಗೆ ಮೂಂದೂಡಲಾಗುತ್ತದೆ.

  • ಹಿಂದಿನ ಸಲ ಮಹಿಳೆಯೊಬ್ಬಳಿಗೆ ಬುದ್ಧಮಾಂದ್ಯ ಮಗು ಜನಿಸಿದ್ದರೆ ಐವಿಎಫ್’ನಲ್ಲಿ ಆರೋಗ್ಯವಂತ ಮಗು ಜನಿಸಲು ಲೇಸರ್ ತಂತ್ರಜ್ಞಾನ ನೆರವಾಗುತ್ತದೆ. (PGS)
  • ಒಂದೆರಡು ಸಲದ ಪ್ರಕ್ರಿಯೆಯಲ್ಲಿ ದಂಪತಿಗಳ ವೀರ್ಯಾಣು ಅಂಡಾಣುಗಳು ಐವಿಎಫ್ ಪ್ರಕ್ರಿಯೆಯಲ್ಲಿ ಸರಿಹೊಂದದೆ ಇದ್ದಲ್ಲಿ ದಾನಿಗಳ ಅಂಡಾಣು ವೀರ್ಯಾಣು ಪಡೆದು ಪ್ರಕ್ರಿಯೆ ನೆರವೇರಿಸಲಾಗುತ್ತದೆ.
  • ಈ ಪ್ರಕ್ರಿಯೆಯಿಂದ ಯಾವುದೇ ಹಾನಿಯಿಲ್ಲ.
  • ಇನ್’ಫ್ರಾರೆಡ್ ಲೇಸರ್ ಬಳಕೆ ಸುರಕ್ಷಿತ ವಿಧಾನ.
  • ಲೇಸರ್ ಕಿರಣದ ಬಳಕೆಯಿಂದ ಅನುವಂಶೀಯ ತೊಂದರೆಗಳು ಉಂಟಾಗುವ ಸಾಧ್ಯತೆ ಇರುವುದಿಲ್ಲ.
  • ಭ್ರೂಣದ ಗುಣಮಟ್ಟ ಕಡಿಮೆಯಾಗುವುದಿಲ್ಲ.
  • ಮಗುವಿನ ಜನನದ ಬಳಿಕವೂ ಯಾವುದೇ ತೊಂದರೆಯಿಲ್ಲ.
  • ಲೇಸರ್ ಪ್ರಕ್ರಿಯೆಗೆ ಹೆಚ್ಚು ಅವಧಿ ತಗಲುವುದಿಲ್ಲ. ಕೆಲವೇ ಸೆಕೆಂಡುಗಳಲ್ಲಿ ನಡೆಸುವ ಈ ಪ್ರಕ್ರಿಯೆ ದಂಪತಿಗಳಲ್ಲಿ ಸಾಕಷ್ಟು ಉತ್ತಮ ಫಲಿತಾಂಶ ಬರಲು ಕಾರಣವಾಗುತ್ತದೆ.

ಈ ಕುರಿತ ಮತ್ತಷ್ಟು ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಆಲ್ಟಿಯಸ್ ಹಾಸ್ಪಿಟಲ್:

#915, 1ನೇ ಮಹಡಿ, ಧನುಷ್ ಪ್ಲಾಜಾ, ಐಡಿಯಲ್ ಹೋಮ್ಸ್ ಟೌನ್‍ಶಿಪ್, ಗೋಪಾಲನ್ ಮಾಲ್ ಸಮೀಪ, ರಾಜರಾಜೇಶ್ವರಿನಗರ, ಬೆಂಗಳೂರು.

ದೂರವಾಣಿ ಸಂಖ್ಯೆ: 9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್, ಎಂ.ಇ.ಐ.ಪಾಲಿಟೆಕ್ನಿಕ್ ಎದುರು, ರಾಮಮಂದಿರದ ಹತ್ತಿರ, ರಾಜಾಜಿನಗರ, ಬೆಂಗಳೂರು-10,

ದೂರವಾಣಿ ಸಂಖ್ಯೆ: 9900031842/ 080-23151873

altiushospital@yahoo.com, www.altiushospital.com

Leave a Reply