ಬಂಡಾಯದ ಪೆಟ್ಟು ತಡೆಯಲು ಬಿಜೆಪಿಯಿಂದ ಹಂತ ಹಂತವಾಗಿ ಅಭ್ಯರ್ಥಿ ಪಟ್ಟಿ ಬಿಡುಗಡೆ

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ ದೊಡ್ಡ ಸಾಲಾಗಿ ಪರಿಣಮಿಸಿದೆ. ಟಿಕೆಟ್ ಆಕಾಂಕ್ಷಿಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಬಂಡಾಯದ ಕೂಗು ಜೋರಾಗಿಯೇ ಇದೆ. ಇದರಿಂದಾಗಿಯೇ ಕಾಂಗ್ರೆಸ್ ಅನೇಕ ಗೊಂದಲಗಳಿಂದ ಕಳೆದ ಭಾನುವಾರ 218 ಕ್ಷೇತ್ರಗಳಿಗೂ ಒಮ್ಮೆಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿತು. ಆದರೆ ಈ ವಿಚಾರದಲ್ಲಿ ಬಿಜೆಪಿ ತಂತ್ರಗಾರಿಕೆ ಬೇರೆಯದೇಗಿದೆ. ಮೂರು ಹಂತಗಳಲ್ಲಿ ಅಬ್ಯರ್ಥಿ ಪಟ್ಟಿ ಬಿಡುಗಡೆ ಮಾಡಿ ಹಂತ ಹಂತವಾಗಿ ಅತೃಪ್ತರನ್ನು ಸಮಾಧಾನಪಡಿಸಲು ನಿರ್ಧರಿಸಿದೆ. ಆದರೆ ಇದು ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎಂಬುದನ್ನು ಕಾದು ನೋಡಬೇಕು.

ಕಳೆದ ವಾರ 72 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಮಲ ಪಡೆ ಬಂಡಾಯದ ಕೆಂಡವನ್ನು ಸೆರಗಿನಲ್ಲಿಟ್ಟುಕೊಂಡಿತ್ತು. ಸೋಮವಾರ 82 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಉಳಿದ 70 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಕಗ್ಗಂಟಾಗಿರುವುದರಿಂದ ಇನ್ನೆರಡು ದಿನಗಳ ಕಾಲಾವಕಾಶ  ಪಡೆದಿದೆ. ಈ ಪೈಕಿ ಗಾಂಧಿನಗರ, ಚಾಮರಾಜಪೇಟೆ, ಯಶವಂತಪುರ, ವರುಣಾ, ವಿರಾಜಪೇಟೆ ಕ್ಷೇತ್ರದ ಅಭ್ಯರ್ಥಿಗಳನ್ನು ಅಂತಿಮವಾಗಿಲ್ಲ.  ಎರಡನೇ ಪಟ್ಟಿಯಲ್ಲೂ ಯಡಿಯೂರಪ್ಪ ಆಪ್ತರಿಗೆ ಮಣೆ  ಹಾಕಲಾಗಿದ್ದು, ನಿರೀಕ್ಷೆಯಂತೆಯೇ ವಲಸಿಗರಿಗೆ, ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಲಾಗಿದೆ.

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ

 • ಚಿಕ್ಕೋಡಿ- ಸದಲಗಾ ಅಣ್ಣಾ ಸಾಹೇಬ್ ಜೊಲ್ಲೆ
 • ಗೋಕಾಕ್- ಅಶೋಕ ಪೂಜಾರಿ
 • ಯಮಕನ ಮರಡಿ(ಎಸ್‌ಟಿ)- ಮಾರುತಿ ಅಸ್ತಗಿ
 • ರಾಮದುರ್ಗ- ಮಹಾದೇವಪ್ಪ.ಎಸ್
 • ತೇರದಾಳ- ಸಿದ್ದು ಸವದಿ
 • ಬೀಳಗಿ- ಮುರುಗೇಶ್ ನಿರಾಣಿ
 • ಬಾಗಲಕೋಟೆ- ವೀರಣ್ಣ ಚರಂತಿಮಠ
 • ಹುನಗುಂದ- ದೊಡ್ಡನಗೌಡ ಜಿ.ಪಾಟೀಲ್
 • ದೇವರಹಿಪ್ಪರಗಿ- ಸೋಮನಗೌಡ ಪಾಟೀಲ್
 • ಇಂಡಿ- ದಯಾಸಾಗರ್ ಪಾಟೀಲ್
 • ಜೇವರ್ಗಿ- ದೊಡ್ಡಪ್ಪಗೌಡ ಪಾಟೀಲ್ ನರಿಬೊಲ್
 • ಯಾದಗಿರಿ- ವೆಂಕಟರೆಡ್ಡಿ ಮುದ್ನಾಳ್
 • ಗುರುಮಿಟ್ಕಲ್- ಸಾಯಿಬಣ್ಣ ಬೋರ್ಬಂದ
 • ಸೇಡಂ- ರಾಜಕುಮಾರ್ ಪಾಟೀಲ್ ತೇಲ್ಕೂರ್
 • ಕಲಬುರಗಿ- ಉತ್ತರ ಚಂದ್ರಕಾಂತ ಬಿ ಪಾಟೀಲ್
 • ಬೀದರ್- ಸೂರ್ಯಕಾಂತ್ ನಾಗಮಾರಪಲ್ಲಿ
 • ಭಾಲ್ಕಿ- ಡಿ.ಕೆ.ಸಿದ್ದರಾಮ
 • ಮಸ್ಕಿ(ಎಸ್‌ಟಿ)-  ಬಸವನಗೌಡ ತುರವಿಹಾಳ್
 • ಕನಕಗಿರಿ(ಎಸ್‌ಸಿ)- ಬಸವರಾಜ್ ದಡೆಸಾಗುರ್
 • ಗಂಗಾವತಿ- ಪರಣ್ಣ ಮುನವಳ್ಳಿ
 • ಯಲಬುರ್ಗ- ಹಾಲಪ್ಪ ಬಸಪ್ಪ ಆಚಾರ್
 • ಕೊಪ್ಪಳ- ಸಿ.ವಿ.ಚಂದ್ರಶೇಖರ್
 • ಶಿರಹಟ್ಟಿ(ಎಸ್‌ಸಿ)-  ರಾಮಣ್ಣ ಲಮಾಣಿ
 • ಗದಗ- ಅನಿಲ್ ಮೆಣಸಿನಕಾಯಿ
 • ರೋಣ- ಕಳಕಪ್ಪಬಂಡಿ
 • ನರಗುಂದ- ಸಿ.ಸಿ.ಪಾಟೀಲ್
 • ನವಲಗುಂದ- ಶಂಕರಗೌಡಪಾಟೀಲ್ ಮುನೇನಕೊಪ್ಪ
 • ಕಲಗಟಗಿ- ಮಹೇಶ್ ತೆಂಗಿನಕಾಯಿ
 • ಹಲಿಯಾಳ- ಸುನೀಲ್ ಹೆಗ್ಡೆ
 • ಭಟ್ಕಳ- ಸುನೀಲ್ ನಾಯ್ಕ
 • ಯಲ್ಲಾಪುರ- ವಿ.ಎಸ್.ಪಾಟೀಲ್
 • ಬ್ಯಾಡಗಿ- ವಿರೂಪಾಕ್ಷಪ್ಪ ಬಳ್ಳಾರಿ
 • ಹಡಗಲಿ(ಎಸ್‌ಸಿ)- ಚಂದ್ರಾನಾಯ್ಕ
 • ಹಗರಿಬೊಮ್ಮನಹಳ್ಳಿ(ಎಸ್‌ಸಿ)- ನೇಮಿರಾಜ್ ನಾಯ್ಕ
 • ಶಿರುಗುಪ್ಪ (ಎಸ್‌ಟಿ)- ಎಂ.ಎಸ್. ಸೋಮಲಿಂಗಪ್ಪ
 • ಬಳ್ಳಾರಿ(ಎಸ್‌ಟಿ)- ಸಣ್ಣ ಫಕೀರಪ್ಪ
 • ಬಳ್ಳಾರಿ- ಸಿಟಿ ಜಿ.ಸೋಮಶೇಖರ ರೆಡ್ಡಿ
 • ಚಳ್ಳಕೆರೆ(ಎಸ್‌ಟಿ)- ಕೆ.ಟಿ.ಕುಮಾರಸ್ವಾಮಿ
 • ಹೊಳಲ್ಕೆರೆ(ಎಸ್‌ಸಿ)-  ಎಂ.ಚಂದ್ರಪ್ಪ
 • ಚನ್ನಗಿರಿ- ಮಾಡಾಳು ವಿರೂಪಾಕ್ಷಪ್ಪ
 • ಹೊನ್ನಾಳಿ- ಎಂ.ಪಿ.ರೇಣುಕಾಚಾರ್ಯ
 • ಶಿವಮೊಗ್ಗ ಗ್ರಾಮಾಂತರ(ಎಸ್‌ಸಿ)- ಅಶೋಕ್ ನಾಯ್ಕ
 • ತೀರ್ಥಹಳ್ಳಿ- ಅರಗ ಜ್ಞಾನೇಂದ್ರ
 • ಸೊರಬ- ಕುಮಾರ್ ಬಂಗಾರಪ್ಪ
 • ಸಾಗರ- ಹರತಾಳು ಹಾಲಪ್ಪ
 • ಬೈಂದೂರು- ಬಿ.ಸುಕುಮಾರ್ ಶೆಟ್ಟಿ
 • ಕಡೂರು- ಬೆಳ್ಳಿ ಪ್ರಕಾಶ್
 • ಚಿಕ್ಕನಾಯಕನಹಳ್ಳಿ-  ಜೆ.ಸಿ.ಮಾಧುಸ್ವಾಮಿ
 • ತಿಪಟೂರು- ಬಿ.ಸಿ.ನಾಗೇಶ್
 • ತುರುವೆಕೆರೆ- ಮಸಾಲೆ ಜಯರಾಮ
 • ತುಮಕೂರು ನಗರ- ಜಿ.ಬಿ.ಜ್ಯೋತಿ ಗಣೇಶ್
 • ಕೊರಟಗೆರೆ(ಎಸ್‌ಸಿ)- ವೈ.ಹುಚ್ಚಯ್ಯ
 • ಗುಬ್ಬಿ- ಬೆಟ್ಟಸ್ವಾಮಿ
 • ಸಿರಾ- ಬಿ.ಕೆ ಮಂಜುನಾಥ
 • ಮಧುಗಿರಿ- ಎಂ.ಆರ್.ಹುಲಿನಾಯ್ಕರ್
 • ಚಿಕ್ಕಬಳ್ಳಾಪುರ- ಮಂಜುನಾಥ್
 • ಬಂಗಾರಪೇಟೆ(ಎಸ್‌ಸಿ)-  ಬಿ.ಪಿ.ವೆಂಕಟಮುನಿಯಪ್ಪ
 • ಕೋಲಾರ- ಓಂ ಶಕ್ತಿ ಛಲಪತಿ
 • ಮಾಲೂರು- ಎಸ್.ಎನ್.ಕೃಷ್ಣಯ್ಯ ಶೆಟ್ಟಿ
 • ಕೆ.ಆರ್.ಪುರ- ನಂದೀಶ್ ರೆಡ್ಡಿ
 • ಬ್ಯಾಟರಾಯನಪುರ- ಎ.ರವಿ
 • ಮಹಾಲಕ್ಷ್ಮಿ ಲೇಔಟ್- ಎನ್.ಎಲ್. ನರೇಂದ್ರಬಾಬು
 • ಶಿವಾಜಿನಗರ- ಕಟ್ಟಾ ಸುಬ್ರಮಣ್ಯ ನಾಯ್ಡು
 • ವಿಜಯನಗರ- ಎಚ್.ರವೀಂದ್ರ
 • ದೊಡ್ಡಬಳ್ಳಾಪುರ- ಜೆ.ನರಸಿಂಹಸ್ವಾಮಿ
 • ಮಾಗಡಿ- ಹನುಮಂತರಾಜು
 • ಮಳವಳ್ಳಿ(ಎಸ್‌ಸಿ)-  ಬಿ.ಸೋಮಶೇಖರ್
 • ಅರಕಲಗೂಡು- ಎಚ್.ಯೋಗ ರಮೇಶ್
 • ಬೆಳ್ತಂಗಡಿ- ಹರೀಶ್ ಪೂಂಜ
 • ಮೂಡಬಿದಿರೆ- ಉಮಾನಾಥ್ ಕೋಟ್ಯಾನ್
 • ಬಂಟ್ವಾಳ- ಯು.ರಾಜೇಶ್ ನಾಯ್ಕ
 • ಪುತ್ತೂರು- ಸಂಜೀವ್ ಮಟ್ಟಂದೂರು
 • ಪಿರಿಯಾಪಟ್ಟಣ- ಎಸ್.ಮಂಜುನಾಥ
 • ಹೆಗ್ಗಡದೇವನಕೋಟೆ (ಎಸ್‌ಟಿ)- ಸಿದ್ದರಾಜು
 • ನಂಜನಗೂಡು(ಎಸ್‌ಸಿ)- ಹರ್ಷವರ್ಧನ
 • ನರಸಿಂಹರಾಜ- ಎಸ್.ಸತೀಶ್ (ಸಂದೇಶ್ ಸ್ವಾಮಿ)
 • ಹನೂರು- ಪ್ರೀತಮ್ ನಾಗಪ್ಪ
 • ಕೊಳ್ಳೇಗಾಲ(ಎಸ್‌ಸಿ)- ಜಿ.ಎನ್.ನಂಜುಂಡಸ್ವಾಮಿ
 • ಚಾಮರಾಜನಗರ- ಮಲ್ಲಿಕಾರ್ಜುನಪ್ಪ
 • ಗುಂಡ್ಲುಪೇಟೆ- ಎಚ್.ಎಸ್.ನಿರಂಜನ ಕುಮಾರ್

Leave a Reply