ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಕೊಲೆಗೆ ಯತ್ನ

ಡಿಜಿಟಲ್ ಕನ್ನಡ ಟೀಮ್:

ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಮೇಲೆ ಮಂಗಳವಾರ ರಾತ್ರಿ ಕೊಲೆ ಯತ್ನ ನಡೆದಿರುವ ಅನುಮಾನ ವ್ಯಕ್ತವಾಗಿದೆ.

ಶಿರಸಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಹಾವೇರಿ ಜಿಲ್ಲೆ ರಾಣೆ ಬೆನ್ನೂರು ತಾಲೂಕು ಹಲಗೇರಿ ಕ್ರಾಸ್ ಬಳಿ ಈ ಘಟನೆ ನಡೆದಿದೆ.

ಈ ಘಟನೆ ಕುರಿತು ಸಚಿವ ಹೆಗಡೆ ಟ್ವೀಟ್ ಕೂಡ ಮಾಡಿದ್ದು, ‘ಅಪಘಾತದ ರೀತಿ ನೋಡಿದರೆ ನನ್ನ ಕೊಲೆ ಪ್ರಯತ್ನ ನಡೆದಿದೆ. ಲಾರಿ ಚಾಲಕ ಉದ್ದೇಶಪೂರ್ವಕವಾಗಿ ನನ್ನ ಕಾರಿಗೆ ಡಿಕ್ಕಿ ಹೊಡೆಯುವ ಪ್ರಯತ್ನ ನಡೆದಿದ್ದು, ಎಸ್ಕಾರ್ಟ್ ವಾಹನಕ್ಕೂ ಲಾರಿ ಡಿಕ್ಕಿ ಹೊಡೆದಿದೆ’ ಎಂದಿದ್ದಾರೆ.

ಲಾರಿ ಚಾಲಕ ನಾಸಿರ ಹುಸೇನ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಘಟನೆಯಲ್ಲಿ Asi ಪ್ರಭು ತಳವಾರಗೆ ಗಾಯವಾಗಿದೆ.

Leave a Reply