ಅತ್ಯಾಚಾರಿಗಳಿಗೆ ಗಲ್ಲು: ರಾಷ್ಟ್ರಪತಿಗಳಿಂದ ಸುಗ್ರೀವಾಜ್ಞೆಗೆ ಅಂಕಿತ

ಡಿಜಿಟಲ್ ಕನ್ನಡ ಟೀಮ್:
ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದವರ ವಿರುದ್ಧ ಮರಣದಂಡನೆ ಹಾಗೂ ಕಠಿಣ ಶಿಕ್ಷೆ ವಿಧಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಸಚಿವ ಸಂಪುಟ ತೆಗೆದುಕೊಂಡಿದ್ದ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳಾದ ರಾಮನಾಥ ಕೋವಿಂದ್ ಅಂಕಿತ ಹಾಕಿದ್ದಾರೆ.
12 ವರ್ಷದೊಳಗಿನ ಬಾಲಕಿಯರ ಮೇಲಿನ ಅತ್ಯಾಚಾರಕ್ಕೆ ಮರಣ ದಂಡನೆ ಹಾಗೂ 16 ವರ್ಷದೊಳಗಿನ ಬಾಲಕಿಯರ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯಕ್ಕೆ 20 ವರ್ಷ ಕಠಿಣ ಜೈಲಿಂದ ಜೀವಾವಧಿವರೆಗೂ ಶಿಕ್ಷೆ ಪ್ರಮಾಣವನ್ನು ನಿಗದಿಪಡಿಸಿ ಶನಿವಾರ ಕೇಂದ್ರ ಸಚಿವ ಸಂಪುಟ ಶನಿವಾರ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿತ್ತು.
ಕಥುವಾ ಹಾಗೂ ಉನ್ನಾವ್ ಪ್ರಕರಣಗಳ ನಂತರ ದೇಶಾದ್ಯಂತ ಆಂಧೋಲನದಿಂದ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣ ಕಾಯ್ದೆಗೆ ಸುಗ್ರೀವಾಜ್ಞೆ ಮೂಲಕ ಕೇಂದರ ತಿದ್ದುಪಡಿ ತಂದಿದೆ.

Leave a Reply