ಅಂಬರೀಶ್ ರೆಬಲ್ ಗೆ ಕಾಂಗ್ರೆಸ್ ಪರದಾಟ, ಕಡೆಗೂ ಭರ್ತಿಯಾಯ್ತು ಕಾಂಗ್ರೆಸ್ ಪಟ್ಟಿ

ಡಿಜಿಟಲ್ ಕನ್ನಡ ಟೀಮ್:

ಚಿತ್ರರಂಗದಲ್ಲಿ ತಮ್ಮ ನಟನೆ ಮೂಲಕ ರೆಬಲ್ ಸ್ಟಾರ್ ಎಂಬ ಬಿರುದು ಪಡೆದಿರೋ ಅಂಬರೀಶ್ ಸದ್ಯ ಕಾಂಗ್ರೆಸ್ ನಾಯಕರಿಗೆ ತಮ್ಮ ರೆಬಲ್ ತನವನ್ನು ಚೆನ್ನಾಗಿಯೇ ಪರಿಚಿಸಿದ್ದಾರೆ. ಅಂಬಿಯ ರೆಬಲ್ ಆಟಕ್ಕೆ ಸಿಎಂ ಸಿದ್ದರಾಯ್ಯರಿಂದ ಅನೇಕ ನಾಯಕರು ಸುಸ್ತಾಗಿದ್ದಾರೆ. ಮಂಡ್ಯದಿಂದ ಸ್ಪರ್ಧಿಸಲು ಕಾಂಗ್ರೆಸ್ ನಾಯಕರು ಟಿಕೆಟ್ ನೀಡಲು ನಿರ್ಧರಿಸಿದರೂ ಅಂಬಿ ಮಾತ್ರ ಸಾಸಿವೆ ಕಾಳಷ್ಟು ತಮ್ಮ ಸ್ವಾಭಿಮಾನ ಬಿಡದೇ ಬೇರೆ ನಾಯಕರನ್ನುತಕತಕನೆ ಕುಣಿಸಿದ್ದಾರೆ.

ಅಂಬರೀಶ್ ಮಾತ್ರವಲ್ಲದೇ ಬೇರೆ ಕಡೆಗಳಲ್ಲಿನ ಬಂಡಾಯದ ಬಿಸಿಗೆ ಕೈ ಸುಟ್ಟುಕೊಂಡಿದ್ದ ಕಾಂಗ್ರೆಸ್ ಆರು ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಿಸಿದೆ. ಉಳಿದಂತೆ ಬಾಕಿ ಇದ್ದ ಐದು ಸ್ಥಾನಗಳಿಗೂ ಅಭ್ಯರ್ಥಿ ಆಯ್ಕೆ ಮಾಡಿದ್ದು, ಮೇಲು ಕೋಟೆ ಹೊರತುಪಡಿಸಿ ಉಳಿದ 223 ಕ್ಷೇತ್ರಗಳಿಗೂ ಕಾಂಗ್ರೆಸ್ ಅಭ್ಯರ್ಥಿಗಳು ಅಂತಿಮವಾಗಿದ್ದಾರೆ.

ಬಾದಾಮಿ ಕ್ಷೇತ್ರದಲ್ಲೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿದ್ದು, ಬಿ ಫಾರಂ ಪಡೆದಿದ್ದಾರೆ.

ಆರು ಕ್ಷೇತ್ರಗಳಲ್ಲಿನ ಬದಲಾವಣೆ

 • ಬಾದಾಮಿ- ಡಾ. ದೇವರಾಜ್ ಪಾಟೀಲ್ ಬದಲಿಗೆ ಸಿದ್ದರಾಮಯ್ಯ
 • ಜಗಳೂರು(ಎಸ್ಟಿ)- ಎ.ಎಲ್ ಪುಷ್ಪಾ ಲಕ್ಷ್ಮಣ್ ಬದಲಿಗೆ ಎಚ್.ಪಿ ರಾಜೇಶ್
 • ತಿಪಟೂರು- ಬಿ.ನಂಜಮರಿ ಬದಲಿಗೆ ಕೆ. ಷಡಕ್ಷರಿ
 • ಮಲ್ಲೇಶ್ವರ- ಎಂ.ಆರ್ ಸೀತಾರಾಂ ಬದಲಿಗೆ ಕೆಂಗಲ್ ಶ್ರೀಪಾದ್ ರೇಣು
 • ಪದ್ಮನಾಭ ನಗರ- ಗುರಪ್ಪ ನಾಯ್ಡು ಬದಲಿಗೆ ಎಂ. ಶ್ರೀನಿವಾಸ್
 • ಮಡಿಕೇರಿ- ಎಚ್.ಎಸ್ ಚಂದ್ರಮೌಳಿ ಬದಲಿಗೆ ಕೆ.ಪಿ.ಚಂದ್ರಕಲಾ

ತಡೆಹಿಡಿದಿದ್ದ ಕ್ಷೇತ್ರಗಳಲ್ಲಿ ಆಯ್ಕೆಯಾದವರು

 • ಶಾಂತಿನಗರ- ಎನ್.ಎ ಹ್ಯಾರಿಸ್
 • ಕಿತ್ತೂರು- ಡಿ.ಬಿ.ಇನಾಂದಾರ್
 • ನಾಗಠಾಣ- ವಿಠ್ಠಲ್ ಡಿ.ಕೆ.
 • ಸಿಂಧಗಿ- ಎಂ.ಎನ್ ಸಾಲಿ
 • ರಾಯಚೂರು- ಸಯ್ಯದ್ ಯಾಸಿನ್

Leave a Reply