ಬಿಎಸ್‌ವೈಗೆ ಬಿಜೆಪಿಯಲ್ಲೇ ಮುಖಭಂಗ..!?

ಡಿಜಿಟಲ್ ಕನ್ನಡ ಟೀಮ್:

ಸೋಮಣ್ಣ ಬಿಎಸ್‌ವೈಗೆ ಸವಾಲು ಹಾಕಿ ಟಿಕೆಟ್ ಪಡೆದಿದ್ರು ಅನ್ನೋ ಸ್ಟೋರಿಯನ್ನ ಡಿಜಿಟಲ್ ಕನ್ನಡದಲ್ಲೇ ಈ ಮೊದಲು ಓದಿದ್ರಿ. ಇದೀಗ ಮತ್ತೊಮ್ಮೆ ಮುಖಭಂಗ ಅನುಭವಿಸಿದ್ದಾರೆ ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ. ಮೈಸೂರಿನ ವರುಣಾ ಕ್ಷೇತ್ರದಿಂದ ಟಿಕೆಟ್ ಕೊಡುವಂತೆ ಅಮಿತ್ ಶಾಗೆ ಸ್ಥಳೀಯ ಬಿಜೆಪಿ ಮುಖಂಡರು ಮನವಿ ಮಾಡಿದ ಮಾರನೇ ದಿನವೇ ವರುಣಾ ಪ್ರವೇಶ ಮಾಡಿದ್ದ ಬಿಎಸ್‌ವೈ ಪುತ್ರ ವಿಜಯೇಂದ್ರ ಭರ್ಜರಿ ತಯಾರಿ ಶುರು ಮಾಡಿದ್ದರು. ಕಾರ್ಯಕರ್ತರ ಸಭೆ, ಮುಖಂಡರುಗಳ ಸೇರ್ಪಡೆ ಸೇರಿದಂತೆ ಸ್ಥಳೀಯ ಮಠ ಮಾನ್ಯಗಳಿಗೂ ಭೇಟಿ ನೀಡಿದ್ರು. ಆದ್ರೆ ಬಿಜೆಪಿ ಟಿಕೆಟ್ ಪಟ್ಟಿ ಒಂದರ ಮೇಲೆ ಒಂದರಂತೆ ಮೂರು ಪಟ್ಟಿ ಬಿಡುಗಡೆ ಆದರೂ ವಿಜಯೇಂದ್ರ ಹೆಸರು ಮಾತ್ರ ಕಾಣಿಸಲಿಲ್ಲ. ಕೊನೆಗೆ ಧೈರ್ಯ ಮಾಡಿ ಇಂದು ನಾಮಪತ್ರ ಸಲ್ಲಿಕೆಗೆ ವೇದಿಕೆ ಮಾಡಿಕೊಂಡು ನಂಜುಂಡೇಶ್ವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಮಾಡಿಸಿ ಬೃಹತ್ ಸಮಾವೇಶ ನಡೆಸಿದ್ರು.

ನಾಮಪತ್ರ ಸಲ್ಲಿಕೆ ಮಾಡುವ ಹುಮ್ಮಸ್ಸಿನಲ್ಲಿದ್ದ ವಿಜಯೇಂದ್ರ, ನಂಜನಗೂಡಿನಲ್ಲಿ ಬೃಹತ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ್ರು. ಈ ವೇಳೆ ಬಿಎಸ್‌ವೈ ಪುತ್ರ ವಿಜಯೇಂದ್ರ, ಕಾಂಗ್ರೆಸ್ ದುರಾಡಳಿತದಿಂದ ಬೇಸತ್ತು, ಬಿಜೆಪಿ ನಾಯಕರು ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದಾರೆ ಎಂದು ಅಬ್ಬರಿದ್ರು. ಆ ಬಳಿಕ ಶ್ರೀನಿವಾಸ್ ಪ್ರಸಾದ್ ಕೂಡ ಸಿದ್ದರಾಮಯ್ಯ ಹಾಗು ಕಾಂಗ್ರೆಸ್ ವಿರುದ್ಧ ಮೊನಚು ಮಾತುಗಳಲ್ಲಿ ಟೀಕಿಸಿದ್ರು. ಅಷ್ಟೊಳಗೆ ಬಿಎಸ್ ಯಡಿಯೂರಪ್ಪ ಮುಖಭಾವ ಬದಲಾವಣೆಯ ಗಾಳಿ ಸೇವಿಸಿದ ಹಾಗೆ ಬೆವೆತು ಹೋಗಿತ್ತು. ನೆರೆದಿದ್ದ ಜನರನ್ನು ಉದ್ದೇಶಿಸಿ ಭಾಷಣ ಶುರು ಮಾಡಿದ ಬಿಎಸ್‌ವೈ, ನನ್ನ ಮಗ ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಿಲ್ಲ. ಇಲ್ಲಿ ಓರ್ವ ಸಾಮಾನ್ಯ ಅಭ್ಯರ್ಥಿಯನ್ನು ನಿಲ್ಲಿಸಿ ಗೆಲ್ಲಿಸಿಕೊಂಡು ಬರ‌್ತೇವೆ ಅಂತ ಘೋಷಿಸಿದ್ರು. ಹೀಗೆ ಹೇಳ್ತಿದ್ದ ಹಾಗೆ ಕಾರ್ಯಕರ್ತರು ಕುರ್ಚಿಗಳನ್ನು ಮುರಿದು ಆಕ್ರೋಶ ವ್ಯಕ್ತಪಡಿಸಿದ್ರು. ವಿಜಯೇಂದ್ರ ಕಾರಿಗೆ ಮುತ್ತಿಗೆ ಹಾಕಿದ್ರಿಂದ ಪೊಲೀಸರ ಜೀಪಲ್ಲಿ ವಿಜಯೇಂದ್ರ ಅವರನ್ನು ಸ್ಥಳದಿಂದ ಹೊರಕ್ಕೆ ಕರೆದೊಯ್ತಲಾಯ್ತು.

ನಾಮಪತ್ರ ಸಲ್ಲಿಕೆಗೆಗೂ ಮುನ್ನ ನಡೆಯುತ್ತಿದ್ದ ಸಮಾವೇಶದ ವೇದಿಕೆ ಮೇಲೆ ಬಿಎಸ್‌ವೈ ಆಸೀನರಾಗಿದ್ರು. ಶ್ರೀರಾಮುಲು ಸೇರಿದಂತೆ ಹಲವು ರಾಜ್ಯ ನಾಯಕರುಗಳು ವೇದಿಕೆಯಲ್ಲಿದ್ರು. ಆ ಸಮಯದಲ್ಲೇ ಹೈಕಮಾಂಡ್ ಕರೆ ಮಾಡಿ ಕರಾಬ್ ವಾರ್ನಿಂಗ್ ನೀಡಿದೆ. ನೀವು ನಿಮ್ಮ ಮಗನಿಗೆ ಟಿಕೆಟ್ ಸಿಗದೇ ಇದ್ರು ಹೇಗೆ ನಾಮಪತ್ರ ಸಲ್ಲಿಕೆ ಮಾಡ್ತಿದ್ದೀರಿ..?
ನಿಮ್ಮ ಕುಟುಂಬಸ್ಥ ಸಾಲಾಗಿ ಸ್ಪರ್ಧೆ ಮಾಡ್ತಿದ್ರೆ ಪಕ್ಷದ ಮೇಲೆ ಕೆಟ್ಟ ಪರಿಣಾಮ ಬೀರುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಈ ವೇಳೆ ಹೈಕಮಾಂಡ್ ನಾಯಕರ ಮನವೊಲಿಕೆಗೆ ಯಡಿಯೂರಪ್ಪ ಯತ್ನ ನಡೆಸಿದ್ದು, ಈ ಕ್ಷೇತ್ರದಲ್ಲಿ ಯತೀಂದ್ರ ವಿರುದ್ಧ ಸ್ಪರ್ಧೆ‌ಮಾಡಿದ್ರೆ‌ ಕನಿಷ್ಠ ಆರೇಳು ಕ್ಷೇತ್ರದಲ್ಲಿ ಬಿಜೆಪಿಗೆ ಸಹಾಯವಾಗಲಿದೆ ಎಂದು ಹೇಳಿದ್ದಾರೆ. ಆದ್ರೆ ಇದ್ಯಾವುದಕ್ಕೂ ಸೊಪ್ಪು ಹಾಕದ ಹೈಕಮಾಂಡ್ ನೀವು ನಾಮಪತ್ರ ಸಲ್ಲಿಕೆ ಮಾಡಿಸಬಾರದು, ಒಂದು ವೇಳೆ ನೀವು ಬಿ ಫಾರಂ ಕೊಟ್ಟು ನಾಮಪತ್ರ ಸಲ್ಲಿಕೆ ಮಾಡಿಸಿದ್ರೆ ನಾವು ಸಿ ಫಾರಂ ಕೊಟ್ಟು ಬೇರೊಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ ಅನ್ನೋ ಖಡಕ್ ವಾರ್ನಿಂಗ್ ಸಿಗ್ತಿದ್ದ ಹಾಗೆ ಬೆವೆತು ಹೋದ ಬಿಎಸ್‌ವೈ ಸರಿ ಅನ್ನದೆ ಬೇರೆ ಮಾರ್ಗವಿರಲಿಲ್ಲ ಅನ್ನೋದು ಮಾಜಿ‌ ಸಿಎಂ ಬಿಎಸ್‌ವೈ ಆಪ್ತರ ಮಾತು. ಒಟ್ಟಾರೆ‌ ಸಿಎಂ ಅಂತ ಕನಸು ಕಾಣ್ತಿದ್ದ ಬಿಎಸ್ ಯಡಿಯೂರಪ್ಪ ಅವರ ಕನ್ನಡಿ ಬಿರುಕು ಬಿಟ್ಟಿರೋದಂತೂ ಸತ್ಯ.

Leave a Reply