ಕಡೆಗೂ ಮುಗಿತು ಮಂಡ್ಯ ಟಿಕೆಟ್ ಡ್ರಾಮಾ! ಅಮರಾವತಿ ಸ್ಪರ್ಧೆ ಖಚಿತ

ಡಿಜಿಟಲ್ ಕನ್ನಡ ಟೀಮ್:

ಮಂಡ್ಯ ಕ್ಷೇತ್ರದ ಸ್ಪರ್ಧೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಲ್ಲಿ ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಾ ಮುಕ್ತಾಯಗೊಂಡಿದೆ. ಚುನಾವಣೆಯಲ್ಲ ಸ್ಪರ್ಧಿಸಲು ಸಿದ್ಧರಿಲ್ಲವೆಂದು ಅಂಬರೀಶ್ ತಿಳಿಸಿದ್ದು, ಅವರ ಬದಲಿಗೆ ಪರಮಾಪ್ತ ಅಮರಾವತಿ ಚಂದ್ರಶೇಖರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ನಲ್ಲಿ ಸಿದ್ಧತೆ ನಡೆಸಲಾಗಿದೆ.

ಟಿಕೆಟ್‌ ಬೇಕೆಂದು ಅಂಬರೀಶ್ ಅರ್ಜಿ ಸಲ್ಲಿಸದಿದ್ದರೂ ಅವರಿಗೆ ಬಿ ಫಾರಂ ನೀಡಲಾಗಿತ್ತು. ಈಗ ಉಲ್ಟಾ ಹೊಡೆದಿರೋ ಅಂಬಿ ಅನಾರೋಗ್ಯದ ಕಾರಣ ಮುಂದಿಟ್ಟು,ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಅಂಬರೀಶ್ ಸ್ಪರ್ಧೆಯಿಂದ ಹಿಂದೆ ಸರಿದಿರುವುದರಿಂದ ಮಂಡ್ಯದಲ್ಲಿ ಪಕ್ಷಕ್ಕೆ ಆಗಬಹುದಾದ ನಷ್ಟ ಹಾಗೂ ಒಂದು ವೇಳೆ ಅಂಬರೀಶ್ ಅವರಿಗೆ ಬೇರೆ ಪಕ್ಷಗಳು ಗಾಳ ಹಾಕಿದರೆ ಕಥೆ ಏನು ಎಂಬ ಲೆಕ್ಕಾಚಾರ ಹಾಕಿದ ಕಾಂಗ್ರೆಸ್, ಇಂತಹ ಸಮಸ್ಯೆ ಎದುರಾಗದೇ ಇರಲಿ ಎಂಬ ಕಾರಣಕ್ಕೆ ಅಂಬಿ ಆಪ್ತನಿಗೇ ಮಣೆ ಹಾಕುತ್ತಿದೆ.

ಅಂಬರೀಶ್ ಕೇವಲ ಚುನಾವಣೆಯಲ್ಲಿ ಸ್ಪರ್ಧೆ ಮಾಡದಿರುವ ತೀರ್ಮಾನಕ್ಕೆ ಬಂದಿದ್ದಾರೆಯೇ ಹೊರತು ಪಕ್ಷ ತ್ಯಜಿಸಲು ಮುಂದಾಗಿಲ್ಲ. ಮಂಡ್ಯದಲ್ಲಿ ಒಕ್ಕಲಿಗರ ಪ್ರಾಬಲ್ಯವಿರುವುದರಿಂದ ಅಂಬಿ ಪಕ್ಷ ಬಿಟ್ಟರೆ ದೊಡ್ಡ ಹೊಡೆತವೇ ಬೀಳಲಿದೆ. ಹೀಗಾಗಿ ಅಂಬಿ ಸಿಟ್ಟನ್ನು ಸಮಾಧಾನಗೊಳಿಸಲು ಎಲ್ಲ ಕಸರತ್ತು ಮಾಡಲಾಗುತ್ತಿದೆ.

Leave a Reply