ಅಲ್ಟಿಯಸ್ ನಿಂದ ವಾರ್ಷಿಕ ವೈದ್ಯಕೀಯ ಸಮ್ಮೇಳನ ಮತ್ತು ಕಾರ್ಯಾಗಾರ

ಡಿಜಿಟಲ್ ಕನ್ನಡ ಟೀಮ್:
ರಾಜಾಜಿನಗರದ ಅಲ್ಟಿಯಸ್ ಹಾಸ್ಪಿಟಲ್ ನೇತೃತ್ವದಲ್ಲಿ ‘ಗೈನಕಾಲಾಜಿ, ಎಂಡೋಸ್ಕೋಪಿಯಲ್ಲಿ ಇತ್ತೀಚಿನ ಆವಿಷ್ಕಾರಗಳ’ ಕುರಿತು ವಾರ್ಷಿಕ ವೈದ್ಯಕೀಯ ಸಮ್ಮೇಳನವನ್ನು ಇದೇ ತಿಂಗಳು 27ರಿಂದ 29ರವರೆಗೆ ಆಯೋಜಿಸಲಾಗಿದೆ.
ರೇಜಸ್ ಸಂಘವು ಅಲ್ಟಿಯಸ್ ಆಸ್ಪತ್ರೆ ಸಹಯೋಗದಲ್ಲಿ ಬೆಂಗಳೂರಿನಲ್ಲಿಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಹೋಟೆಲ್ ಲಲಿತ್ ಅಶೋಕ್‍ನಲ್ಲಿ ಮೂರು ದಿನಗಳ ವಾರ್ಷಿಕ ವೈದ್ಯಕೀಯ ಸಮ್ಮೇಳನವನ್ನು ಆಯೋಜಿಸುತ್ತಿದೆ.
ಸ್ತ್ರೀರೋಗ ತಜ್ಞರಾದ ಡಾ.ಬಿ.ರಮೇಶ್‍ರವರು ಲ್ಯಾಪ್ರೋಸ್ಕೋಪಿ ಪ್ರವರ್ಧನೆ ಮಾಡಲು ರೇಜಸ್ ವಾರ್ಷಿಕ ಸಮ್ಮೇಳನ ಏರ್ಪಡಿಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ 3ಡಿ ಲ್ಯಾಪರೋಸ್ಕೋಪಿ ಶಸ್ತ್ರಚಿಕಿತ್ಸೆಯನ್ನು ನೇರ ಪ್ರಸಾರ ಮಾಡಲಾಗುವುದು. ಈ ರೀತಿಯ ಚಿಕಿತ್ಸಾ ವಿಧಾನವು ಭಾರತದಲ್ಲೇ ಪ್ರಪ್ರಥಮ ಸ್ವರೂಪದ್ದಾಗಿದ್ದು, ಅಲ್ಟಿಯಸ್ ಆಸ್ಪತ್ರೆಯಲ್ಲಿ ನಡೆಯುವ ಶಸ್ತ್ರಚಿಕಿತ್ಸೆಯನ್ನು ಹೋಟೆಲ್ ಲಲಿತ್ ಅಶೋಕ್‍ನಲ್ಲಿ ನೇರ ಪ್ರಸಾರ ಮಾಡಲಾಗುವುದು.
ವಿವಿಧ ಹೆಸರಾಂತ ಗೈನೆಕ್ ಲ್ಯಾಪರೋಸ್ಕೋಪಿಸ್ಟ್‍ರುಗಳು ಶಸ್ತ್ರಚಿಕಿತ್ಸೆಗಳನ್ನು ನಡೆಸುವರು. ಗರ್ಭಕೋಶದ ತೊಂದರೆಗಳಾದಂತಹ ಪೈಬ್ರಾಯಿಡ್ ಗಡ್ಡೆಗಳು, ಕ್ಯಾನ್ಸರ್, ಗರ್ಭಕೋಶದ ಜಾರುವಿಕೆ, ಹಿಸ್ಟೆರೆಕ್ಟಮಿ, 50ಕ್ಕೂ ಹೆಚ್ಚು ರೋಗಿಗಳಿಗೆ ಉಚಿತವಾಗಿ ರೋಗಕ್ಕೆ ಸಂಬಂಧಪಟ್ಟಂತೆ ವಿವಿಧ ಕುತೂಹಲಕಾರಿ ಶಸ್ತ್ರ ಚಿಕಿತ್ಸೆಗಳನ್ನು ಇಲ್ಲಿ ಮಾಡಲಾಗುವುದು.
ತಮ್ಮದೇ ಆದ ಕ್ಷೇತ್ರದಲ್ಲಿ ಪರಿಣತರಾದ ವೈದ್ಯರು ಶಸ್ತ್ರಚಿಕಿತ್ಸೆಗಳನ್ನು ಮಾಡುವುದರಿಂದ ಈ ಕಾರ್ಯಾಗಾರದಿಂದ ರೋಗಿಗಳಿಗೆ ಬಹಳ ಅನುಕೂಲವಾಗುವುದು. ಇಲ್ಲಿನ ಮತ್ತೊಂದು ವಿಶೇಷವೇನೆಂದರೆ ಬಡ ರೋಗಿಗಳಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಈ ರೋಗಿಗಳನ್ನು ಕಳೆದ 3 ತಿಂಗಳುಗಳಿಂದ  ಪಾವಗಡ, ಕೊಳ್ಳೇಗಾಲ ಮತ್ತು ಚಿಕ್ಕಬಳ್ಳಾಪುರ ಮುಂತಾದ ಸ್ಥಳಗಳಲ್ಲಿ ನಡೆಸಿದ ಶಿಬಿರಗಳ ಮೂಲಕ ಆಯ್ಕೆ ಮಾಡಲಾಗಿದೆ.
ಆಸ್ಪತ್ರೆಯಲ್ಲಿ ನಡೆಸುವ ಈ ಶಸ್ತ್ರಚಿಕಿತ್ಸೆಗಳನ್ನು 600ಕ್ಕೂ ಹೆಚ್ಚು ಸ್ತ್ರೀರೋಗ ತಜ್ಞರು ನೋಡುವರು. ಇಂತಹ ಕಾರ್ಯಾಗಾರದಿಂದ ಹೆಚ್ಚಿನ ಅರಿವು ಸಿಗಲಿದ್ದು, ಜ್ಞಾನ ವೃದ್ಧಿ ಮತ್ತು ಸಾರ್ವಜನಿಕರಲ್ಲಿ ಲ್ಯಾಪರೋಸ್ಕೋಪಿಯ ಬಗ್ಗೆ ಮಾಹಿತಿ ಸಿಗಲಿದೆ.
ಇನ್ನು ರೇಜಸ್ ಕಾನ್ಫರೇನ್ಸ್‍ನ ಮುಖ್ಯ ಆಕರ್ಷಣೆಯಾಗಿ ನರರೋಗಶಾಸ್ತ್ರ ಎಂಬ ಹೊಸ ವಿಶೇಷತೆಯನ್ನು ಪರಿಚಯಿಸಲಾಗುತ್ತಿದೆ. ನರಗಳ ಅಧ್ಯಯನ ಮತ್ತು ಚಿಕಿತ್ಸೆಯ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ನರರೋಗ ತಜ್ಞರಾದ Dr. Antonio Setubal ಅವರು ಶಸ್ತ್ರಚಿಕಿತ್ಸೆ ಮತ್ತು ಪ್ರಭಂದವನ್ನು ಮಂಡಿಸುತ್ತಾರೆ. ಇದರಿಂದ ಭಾರತದಲ್ಲಿರುವ ಎಲ್ಲ ತಜ್ಞರಿಗೂ ಸಹಕಾರಿಯಾಗಲಿದೆ.
ಕಾರ್ಯಕ್ರಮದ ವಿವರ:
ದಿನಾಂಕ: 29/04/2018 ಸಮಯ: 12-00 to 01-00 PM
ಗೈನಕಾಲಜಿ, ಎಂಡೋಸ್ಕೋಪಿ ಮತ್ತು ಯುರೋಗೈನಕಾಲಜಿಯಲ್ಲಿ ‘ಇತ್ತೀಚಿನ ಆವಿಷ್ಕಾರಗಳು’
ಸ್ಥಳ : ಹೋಟೆಲ್ ಲಲಿತ್ ಅಶೋಕ್, ಹಾಲ್ ಕಳಿಂಗ, ಬೆಂಗಳೂರು
ಮುಖ್ಯ ಅತಿಥಿಗಳು : ಶ್ರೀ ಎನ್.ಸಂತೋಷ್ ಹೆಗ್ಡೆ (ನಿವೃತ್ತ ನ್ಯಾಯಾಧೀಶರು ಸುಪ್ರಿಮ್ ಕೋರ್ಟ್ ಮತ್ತು ಲೋಕಾಯುಕ್ತ)
ಶ್ರೀ ರವೀಂದ್ರ ಹೆಚ್.ಎನ್ ( IMA President Karnataka Chapter )
ಡಾ. ಮಲ್ಲೇಶ್ ಹುಳಮನಿ ( Director & Gynecologist City Hospital Shimoga )
ಡಾ.ಬಿ.ರಮೇಶ್ & ಡಾ.ಚೈತ್ರ ಟಿ.ಎಮ್. ರವರು ಬರೆದಿರುವ ಈ ಪುಸ್ತಕವನ್ನು “ Everything about Fibroids’’ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು.

Leave a Reply