ಯಾರ ಬಾಯಿಗೆ ಬೀಳುತ್ತೆ ದುಬಾರಿ ಬಾದಾಮಿ?

ಡಿಜಿಟಲ್ ಕನ್ನಡ ಟೀಮ್:

ಮೈಸೂರು ಮೂಲದ ಸಿಎಂ ಸಿದ್ದರಾಮಯ್ಯ, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದು, ಇದು ಕೊನೆಯ ಚುನಾವಣೆ ಎಂದಿದ್ದಾರೆ. ಸೋಲಿನ ಮೂಲಕ ಸಿದ್ದರಾಮಯ್ಯ ರಾಜಕಾರಣ ಮುಕ್ತಾಯ ಮಾಡಲು ಪ್ಲಾನ್ ಮಾಡಿದ ಜೆಡಿಎಸ್ ಹಾಲಿ ಶಾಸಕ ಜಿ.ಟಿ ದೇವೇಗೌಡರನ್ನು ಅಖಾಡ ಇಳಿಸಿ ಪ್ರಬಲ ಪೈಪೋಟಿ ನೀಡುತ್ತಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗು ಸಿಎಂ ಸಿದ್ದರಾಮಯ್ಯ ಮಾಡಿಸಿರುವ ಸರ್ವೇಗಳಲ್ಲಿ ಜೆಡಿಎಸ್ ಮುನ್ನಡೆ ಸಾಧಿಸಿರುವುದನ್ನು ಮನಗಂಡು ಬೇರೊಂದು ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಲು ಸಿಎಂ ಆಲೋಚಿಸಿದ್ರು. ಅದರಂತೆ ಕುರುಬ ಸಮುದಾಯದ ಜನರು ಹೆಚ್ಚಿನ ಪ್ರಮಾಣದಲ್ಲಿರುವ ಬಾಗಲಕೋಟೆಯ ಬಾದಾಮಿಯಲ್ಲಿ ಸ್ಪರ್ಧಿಸಲು ನಿರ್ಧಾರ ಮಾಡಿದ್ರು. ಆದರೆ ಹೈಕಮಾಂಡ್ ಅವಕಾಶ ನೀಡಿರಲಿಲ್ಲ. ಆ ಬಳಿಕ ಮುನಿಸಿಕೊಂಡಿದ್ದ ಸಿಎಂ ಜಾಂಡಾ ಹೂಡಿದ್ರು. ಆ ಬಳಿಕ ಸಿದ್ದರಾಮಯ್ಯ ಕೊನೆಗೂ ಹೈಕಮಾಂಡ್ ಮಣಿಸಿ ಬಾದಾಮಿ ಸ್ಪರ್ಧೆಗೆ ಒಕೆ ಮಾಡಿಸಿಕೊಂಡು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಆದ್ರೆ ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಮತ್ತೊಂದು ಸೋಲು ಅನುಭವಿಸುತ್ತಾರೆ ಎನ್ನಲಾಗುತ್ತಿದೆ..

ಬಿಜೆಪಿ ಸಂಸದ ಶ್ರೀರಾಮುಲು ಅವರನ್ನ ಕಣಕ್ಕಿಳಿಸಿದ್ದು, ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಿಜೆಪಿಗೆ ಬಾದಾಮಿಯಲ್ಲಿ ಹೇಳಿಕೊಳ್ಳುವಂತಹ ಕಾರ್ಯಪಡೆ ಇಲ್ಲದಿದ್ದರೂ ಜಾತಿ ಲೆಕ್ಕಾಚಾರದ ಮೇಲೆ ಗೆಲುವು ಸಾಧಿಸುವ ಯೋಜನೆ ಹಾಕಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಕೂಡ ಬಾದಾಮಿಯಲ್ಲಿ ನಾನು ಪ್ರಚಾರ ಮಾಡದೇ ಇದ್ರೂ ಗೆಲ್ತೇನೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗಿದ್ರೆ ಬಾದಾಮಿಯಲ್ಲಿರುವ ಮತದಾರರ ಜಾತಿ ಬಲಾ ಬಲಾ ಹೇಗಿದೆ ಅನ್ನೋದನ್ನು ನೋಡಿ..

ಬಾದಾಮಿ ಮತ ಲೆಕ್ಕ

ಒಟ್ಟು ಮತದಾರರು – 2,12,184
ಪುರುಷರು – 1,17,074
ಮಹಿಳೆಯರು – 1,05,110

ಬದಾಮಿ ಜಾತಿ ಲೆಕ್ಕ

ಕುರುಬ – 46,000
ಲಿಂಗಾಯತ – 32,000
ಗಾಣಿಗ – 26,000
ಪರಿಶಿಷ್ಟ ಪಂಗಡ – 25,000
ವಾಲ್ಮೀಕಿ – 13,000
ಅಲ್ಪಸಂಖ್ಯಾತರು – 12,000
ಮರಾಠಾ ಕ್ಷತ್ರೀಯ – 9,000
ಬಂಜಾರ – 6,000
ರೆಡ್ಡಿ – 10,0000

ಇದು ಜಾತಿ ಲೆಕ್ಕಾಚಾರ ಆದರೆ, ಕಳೆದ ಬಾರಿ ಚುನಾವಣೆಯಲ್ಲಿ ಮತದಾರ ಪ್ರಭು ಯಾರಿಗೆ ಆಶೀವರ್ದಿಸಿದ್ದ ಅನ್ನೋದನ್ನು ನೋಡೋದಾದ್ರೆ, 1 ಲಕ್ಷದ 39 ಸಾವಿರದ 76 ಮತಗಳು ಚಲಾವಣೆ ಆಗಿದ್ದು ಕಾಂಗ್ರೆಸ್ ಅಭ್ಯರ್ಥಿ ಬಿ.ಬಿ. ಚಿಮ್ಮನಕಟ್ಟಿ 57, 446 ಮತ ಪಡೆದಿದ್ರು.. ಜೆಡಿಎಸ್‌ನ ಮಹಾಂತೇಶ್ ಮಮದಾಪುರ 42 ಸಾವಿರದ 333 ಮತ ಪಡೆದು ಎರಡನೇ ಸ್ಥಾನ ಗಳಿಸಿದ್ರು. ಆ ಬಳಿಕ ಬಿಜೆಪಿಯ ಎಂ.ಕೆ. ಪಟ್ಟಣಶೆಟ್ಟಿ 30 ಸಾವಿರದ 310 ಮತ, ಕೆಜೆಪಿಯ ಬಸಯ್ಯ ಪ್ರಭಯ್ಯ ಅಲ್ಲೂರ 3 ಸಾವಿರದ 95 ಮತ, ಬಿಎಸ್‌ಆರ್ ಎಂ.ಎಸ್. ಪಾಟೀಲ್ 1 ಸಾವಿರದ 807 ಮತ ಪಡೆದಿದ್ರು.. ಆದ್ರೀಗ ಬಿಜೆಪಿ, ಕಾಂಗ್ರೆಸ್ ಜಾತಿ ಲೆಕ್ಕಾಚಾರ ಮಾಡಿಕೊಂಡು ಚುನಾವಣೆಗೆ ಹೋಗ್ತಿದ್ದು, ಜೆಡಿಎಸ್ ಕೂಡ ಗೆಲುವು ನಮ್ಮದೇ ಎನ್ನುತ್ತಿದೆ.

ಜೆಡಿಎಸ್ ಅಭ್ಯರ್ಥಿ ಗೆದ್ದರೂ ಅಚ್ಚರಿಯಿಲ್ಲ..!

ಯಾಕಂದ್ರೆ ಕಳೆದ ಬಾರಿ ಜೆಡಿಎಸ್ ಅಭ್ಯರ್ಥಿ ಎರಡನೇ ಸ್ಥಾನ ಗಳಿಸಿದ್ದ ಮೇಲೆ ಜೆಡಿಎಸ್ ಅಲ್ಪಸ್ವಲ್ಪನೆಲೆ ಉಳಿಸಿಕೊಂಡಿದೆ. ಇದೀಗ ಎರಡು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಬಂದಿರೋದು ತಮ್ಮ ತೆವಲಿಗಾಗಿ ಒಂದು ವೇಳೆ ಅವರು ಸ್ಪರ್ಧಿಸಿರೋ ಬೇರೊಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ರೆ ಬಾದಾಮಿಗೆ ಬಗಣಿ ಗೂಟವಿಟ್ಟು ಬೈ ಬೈ ಹೇಳ್ತಾರೆ. ಹಾಗಾಗಿ ಸ್ಥಳೀಕನಾದ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿಕೊಳ್ಳೋಣವೆಂದು ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿದರೆ ಬಾದಾಮಿ ಜನರ ಬುದ್ಧಿವಂತಿಕೆ ಜಗತ್ಪ್ರಸಿದ್ಧ ಆಗಲಿದೆ..

Leave a Reply