ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ, ನವ ಕರ್ನಾಟಕ ನಿರ್ಮಾಣದ ಭರವಸೆಯಲ್ಲಿ ಏನೇನಿದೆ?

ಡಿಜಿಟಲ್ ಕನ್ನಡ ಟೀಮ್:

ಇದೇ ಮೊದಲ ಬಾರಿಗೆ ಕಾಂಗ್ರೆಸ್ ಬೆಂಗಳೂರು ಬಿಟ್ಟು ಬೇರೆ ಕಡೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಮಂಗಳೂರಿನಲ್ಲಿ ಚುನಾವಣ ಪ್ರಚಾರ ನಡೆಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷದ ಚುನಾವಣ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಟಿ.ಎಂ.ಎ ಪೈ ಸಭಾಭವನದಲ್ಲಿ ನಡೆದ ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಕಾಂಗ್ರೆಸ್ ನಾಯಕ ಜನಾರ್ಧನ ಪೂಜಾರಿ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಸಹಿತ ಇತರೆ ಕಾಂಗ್ರೆಸ್ ಮುಖಂಡರು ಪ್ರಣಾಳಿಕೆ ಬಿಡುಗಡೆ ಮಾಡಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವೀರಪ್ಪ ಮೋಯ್ಲಿ ಹೇಳಿದಿಷ್ಟು… ‘ಕರ್ನಾಟಕ ಹೆಮ್ಮೆ, ಕಾಂಗ್ರೆಸ್ ಮತ್ತೊಮ್ಮೆ’ ಎಂದು ಪ್ರಣಾಳಿಕೆಗೆ ಹೆಸರಿಡಲಾಗಿದ್ದು, ಎಲ್ಲಾ ವರ್ಗಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಲಾಗಿದೆ, ಈ ರಾಷ್ಟ್ರದ ಅಭಿವೃದ್ಧಿಗೆ ಹೊಸ ಅಧ್ಯಾಯ ಬರೆಯುವಂತಹ ಅಂಶಗಳು ಈ ಪ್ರಣಾಳಿಕೆಯಲ್ಲಿವೆ. ಪ್ರತಿ ಜಿಲ್ಲೆ ಹಾಗೂ ತಾಲೂಕುಗಳಿಗೆ ಹೋಗಿ ಅಲ್ಲಿನ ಸಮಸ್ಯೆ ಹಾಗೂ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರಣಾಳಿಕೆ ರಚಿಸಲಾಗಿದೆ. ಮಂಗಳೂರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ವೀರಪ್ಪ ಮೊಯ್ಲಿ ಹೇಳಿದ್ದಾರೆ.

ರಾಹುಲ್ ಗಾಂಧಿ ಮಾತನಾಡಿ, ‘ನಾಲ್ಕು ತಿಂಗಳು ಸಮಯ ತೆಗೆದುಕೊಂಡು, ಸಮಾಜದ ಎಲ್ಲಾ ವರ್ಗದ ಜನರ ಆಶೋತ್ತರಗಳನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪ್ರಣಾಳಿಕೆ ತಯಾರಿಸಿದೆ. ಬಿಜೆಪಿಯ ಪ್ರಣಾಳಿಕೆಯನ್ನು ಮೂರು ನಾಲ್ಕು ಜನ ಮಾತ್ರ ತೀರ್ಮಾನ ಮಾಡುತ್ತಾರೆ. ಅವರ ಪ್ರಣಳಿಕೆಯಲ್ಲಿ ಭ್ರಷ್ಟಾಚಾರ ಮತ್ತು ಲೂಟಿ ಹೊಡೆಯುವದರ ಬಗ್ಗೆ ಇರುತ್ತದೆ. ಆರೆಸ್ಸೆಸ್ ಪ್ರಭಾವದಲ್ಲಿ ಪ್ರಣಾಳಿಕೆ ತಯಾರು ಮಾಡಲಾಗುತ್ತದೆ. ಈ ಪ್ರಣಾಳಿಕೆ ಜನರ ಮನ್ ಕೀ ಬಾತ್’ ಎಂದರು.

ಕಾಂಗ್ರೆಸ್ ಪ್ರಣಾಳಿಕೆ ಪ್ರಮುಖ ಅಂಶಗಳು…

 • ರಾಜ್ಯದಲ್ಲಿ ಒಂದು ಕೋಟಿ ಉದ್ಯೋಗ ಸೃಷ್ಠಿಯ ಭರವಸೆ.
 • 2025ರೊಳಗೆ ನವ ಕರ್ನಾಟಕ ನಿರ್ಮಾಣಕ್ಕೆ ಸಂಕಲ್ಪ.
 • ರಾಜ್ಯದ ಉದ್ದಗಲಕ್ಕೂ ರಸ್ತೆ ಅಭಿವೃದ್ಧಿ.
 • ರೈತರ ಆದಾಯ ದ್ವಿಗುಣಗೊಳಿಸಲು ಒತ್ತು.
 • ಪ್ರತೀ 3 ಜಿಲ್ಲೆಗೆ 1 ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ
 • ಹುಬ್ಬಳ್ಳಿ, ಧಾರವಾಡ, ಹಾವೇರಿ, ಗದಗ ಜಿಲ್ಲೆಗಳಿಗೆ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ.
 • ಮುಂದಿನ 5 ವರ್ಷಗಳಲ್ಲಿ ಕೃಷಿಗೆ 1.25 ಕೋಟಿ ಮೀಸಲು
 • ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಮನೆ ನಿರ್ಮಾಣ.
 • ದ.ಕ. ಉ.ಕ ಹಾಗೂ ಉಡುಪಿ ಜಿಲ್ಲೆಗಳಿಗೆ ಪಶ್ಚಿಮ ವಾಹಿನಿ ಯೋಜನೆ.
 • ರಾಜ್ಯದ 4 ಕಡೆ ಅಕ್ಕಿ ಸಂಶೊಧನ ಕೇಂದ್ರ.
 • ಬೆಂಗಳೂರು ನಗರ, ಗ್ರಾಮೀಣ ಹಾಗೂ ಇತರ ಐದು ಜಿಲ್ಲೆಗಳಿಗೆ ಕಾವೇರಿ 5ನೇ ಹಂತದ ನೀರಾವರಿ ಯೋಜನೆ.
 • ಕೃಷ್ಣ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯಯುತ ಪರಿಹಾರ.
 • ಭದ್ರ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಕ್ರಮ.
 • ಪ್ರತಿ ಜಿಲ್ಲೆಗೆ 50 ಹಾಸಿಗೆಯ ಆಯುಷ್ ಆಸ್ಪತ್ರೆ.
 • ರಾಜ್ಯಾದ್ಯಂತ 24 ಗಂಟೆ ವಿದ್ಯುತ್ ಕೊಡಿಸುವ ಭರವಸೆ.
 • ಪ್ರತಿ ವರ್ಷ 15-20 ಲಕ್ಷ ಉದ್ಯೋಗ ಸೃಷ್ಟಿಯ ಭರವಸೆ.
 • ತಳ ಮಟ್ಟದಲ್ಲಿ ಐದು ಸಾವಿರ ಸ್ತ್ರೀ ಶಕ್ತಿ ಸಂಘ ರಚನೆ.
 • ಕರ್ನಾಟಕಕ್ಕೆ ಕೃಷಿ ಕಾರಿಡಾರ್‌ ನಿರ್ಮಾಣ.
 • 12-20 ಸಾವಿರ ಹೊಸ ಅಂಗನವಾಡಿ ನಿರ್ಮಾಣ.
 • ರಾಜ್ಯದ ನಾಲ್ಕು ವಿಭಾಗಗಲ್ಲೂ ಸೈನಿಕ್ ಶಾಲೆ ನಿರ್ಮಾಣ.
 • ಕೃಷಿ ಬೆಲೆ ನಾಶಕ್ಕೆ “ಅನ್ನದಾತ ಫಂಡ್” ಸ್ಥಾಪನೆ.
 • ಪ್ರತಿ ಜಿಲ್ಲೆಯಲ್ಲೂ ಐಎಎಸ್. ಕೆಎಎಸ್ ಕೋಚಿಂಗ್ ಸೆಂಟರ್‌ ಸ್ಥಾಪನೆ.
 • ನಾಗರಿಕ ಹಕ್ಕು ರಕ್ಷಣೆಗೆ ಸಿವಿಲ್ ರೈಟ್ಸ್ ಕ್ಲಬ್ ರಚನೆ.
 • ಕಾಲೇಜು, ಯೂನಿವರ್ಸಿಟಿಗಳಲ್ಲಿ ಉಚಿತ ವೈ-ಫೈ
 • ಸ್ಯಾನಿಟರಿ ಪ್ಯಾಡ್ ಮೇಲಿನ ತೆರಿಗೆ ಹಿಂತೆಗೆತ.
 • ಸರಕಾರಿ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಶೇ. 50 ರಷ್ಟು ಉದ್ಯೋಗ ಹೆಚ್ಚಳ.
 • ಪ್ಲಾಂಟೇನ್ ಕಾರ್ಮಿಕರ ಮಕ್ಕಳಿಗೆ ಸ್ಕಾಲರ್‌ಶಿಪ್.
 • ಉಚಿತ ಮಾಂಗಲ್ಯ ಭಾಗ್ಯ.
 • ಹಳ್ಳಿಗಳಿಗೆ 24 ಗಂಟೆ ವಿದ್ಯುತ್ ಪೂರೈಕೆ.
 • 3 ಜಿಲ್ಲೆಗಳಲ್ಲಿ 2 ಕಡೆ ಮೀನು ಸಂಸ್ಕರಣ ಪಾರ್ಕ್‌ ಸ್ಥಾಪನೆ.
 • ಕೃಷಿ ಉತ್ಪನ್ನಗಳಿಗೆ ಶೇ. 100 ತೆರಿಗೆ ಸಬ್ಸಿಡಿ
 • ಕ್ರೀಡೆ, ಯೋಗ ಶಿಕ್ಷಣ ಕಡ್ಡಾಯ ಪಠ್ಯ.
 • ಗ್ರಾಮ ಹಾಗೂ ತಾಲೂಕ್ ಪಂಚಾಯತ್‌ಗಳಿಗೆ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ.
 • ಇಪ್ಪತ್ತು ಸಾವಿರ ಐಟಿ ಸ್ಟಾರ್ಟಪ್‌ ಆರಂಭಿಸುವ ಭರವಸೆ.
 • ಒಂದರಿಂದ ಹನ್ನೆರಡನೇ ತರಗತಿ ವರೆಗೆ ಉಚಿತ ಹಾಗೂ ಗುಣಮಟ್ಟದ ಶಿಕ್ಷಣ.
 • ಬಡ ಮಕ್ಕಳ ಶೈಕ್ಷಣಿಕ ವೆಚ್ಚ ನೇರ ನಗದು ಮೂಲಕ ವರ್ಗಾವಣೆ.
 • ಉನ್ನತ ಶಿಕ್ಷಣಕ್ಕೆ ಪ್ರವೇಶಾತಿ ಪರೀಕ್ಷೆಗಳು
 • 18 ವರ್ಷಗಳ ಕಾಲ ಉಚಿತ ಶಿಕ್ಷಣ (3-18 ವರ್ಷದದ ವರೆಗೆ ಆರ್‌ಟಿಇ ಕಾಯಿದೆಯಲ್ಲಿ ಶಿಕ್ಷಣ).
 • ಪ್ರತಿ ವರ್ಷ 1000 ಮಹಿಳಾ ಅಭಿವೃದ್ಧಿ ಕೇಂದ್ರ ಸ್ಥಾಪನೆ.
 • 15 ಟಿಎಂಸಿ ಕಾವೇರಿ ನೀರನ್ನು ಹೆಚ್ಚುವರಿಯಾಗಿ ಬಳಸಲು ನೀಲನಕಾಶೆ.
 • ಎಲ್ಲಾ ತಾಲೂಕುಗಳಲ್ಲೂ ಕ್ರೀಡಾ ಕೇಂದ್ರ.
 • 2000 ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಗ್ರಾಮಕ್ಕೆ ಕುಡಿಯುವ ನೀರಿನ ಯೋಜನೆ.
 • 165 ಎಪಿಎಂಸಿಗಳ ಪೈಕಿ 159 ಎಪಿಎಂಸಿಗಳಲ್ಲಿ ಆನ್‌ಲೈನ್ ವ್ಯವಸ್ಥೆ.
 • ಶಾಲೆ ಬಿಟ್ಟ ಮಕ್ಕಳಿಗೆ ರೆಸಿಡೆನ್ಸಿಯಲ್ ಸ್ಕೂಲ್ ಸ್ಥಾಪನೆ.
 • ದೇವನಹಳ್ಳಿಯಲ್ಲಿ ಐಟಿ ಪಾರ್ಕ್ ಸ್ಥಾಪನೆ.
 • ವಸತಿ ಸೌಲಭ್ಯ ಸಹಿತ ಕ್ರೀಡಾ ಅಕಾಡೆಮಿ ಸ್ಥಾಪನೆ.
 • ಖೋ-ಖೋ ಕಬ್ಬಡಿ ಸೇರಿದಂತೆ ದೇಶೀಯ ಕ್ರೀಡೆಗಳಿಗೆ ಒತ್ತು.
 • ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದರೆ 1 ಕೋಟಿ ನಗದು ಬಹುಮಾನ.

Leave a Reply