ಲಿಂಗಾಯತರ ಕೋಪಕ್ಕೆ ಗುರಿಯಾದರೇ ಅಮಿತ್ ಶಾ?

ಡಿಜಿಟಲ್ ಕನ್ನಡ ಟೀಮ್:

ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆಗಾಗಿ ಹೋರಾಟ ಮಾಡಿದ ನಾಯಕರು ಹೇಳುತ್ತಿದ್ದದ್ದು ಒಂದೇ ಮಾತು, ‘ವೀರಶೈವರು ಬಸವಣ್ಣನ ಆರಾಧಕರಲ್ಲ, ಅವರು ಬಸವಣ್ಣ ಅವರನ್ನು ಪೂಜಿಸಿ ಗೌರವಿಸುವುದಿಲ್ಲ. ಅವರಿಗೆ ಹಾನಗಲ್ ಕುಮಾರಸ್ವಾಮಿ ಹಾಗೂ ರೇಣುಕಾಚಾರ್ಯರು ಮಾತ್ರ ಧರ್ಮ ಸ್ಥಾಪಕರು’ ಎಂದು. ಲಿಂಗಾಯತ ಹೋರಾಟಗಾರ ಆರೋಪ ಎಷ್ಟು ಸತ್ಯ ಅನ್ನೋ ಪ್ರಶ್ನೆ ಮೂಡ್ತಿತ್ತಾದರೂ ಈಗ ಇವರ ಆರೋಪಕ್ಕೆ ಮತ್ತಷ್ಟು ಪುಷ್ಠಿ ಸಿಗುತ್ತಿದೆ. ಅದಕ್ಕ್ಕೆ ಕಾರಣ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಾರಣ.

ಹೌದು, ಬಸವಣ್ಣನ ಐಕ್ಯ ಸ್ಥಳವಾದ ಕೂಡಲ ಸಂಗಮಕ್ಕೆ ಹಲಾವರು ಜನರು ಭಕ್ತಿ ಸಮರ್ಪಣೆಗಾಗಿಯೇ ತೆರಳುತ್ತಾರೆ. ಅದೆಷ್ಟೋ ಶಾಲಾ ಕಾಲೇಜು ಮಕ್ಕಳು ಬಸವಣ್ಣನವರು ಐಕ್ಯವಾದ ಸ್ಥಳದ ದರ್ಶನ ಮಾಡಿ ಪುನೀತರಾಗ್ತಾರೆ. ಆದ್ರೆ ಶನಿವಾರ ಕೂಡಲ ಸಂಗಮಕ್ಕೆ ಭೇಟಿ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಚುನಾವಣಾ ಚಾಣಕ್ಯ ಅಮಿತ್ ಷಾ ಕೂಡಲ ಸಂಗಮಕ್ಕೆ ತೆರಳಿದ್ರು. ಆದ್ರೆ ಬಸವಣ್ಣ ಐಕ್ಯವಾದ ಸ್ಥಳಕ್ಕೆ ತೆರಳಿ ದರ್ಶನ ಪಡೆಯದ ಅಮಿತ್ ಶಾ, ಕೇವಲ ಮೇಲಿಂದಲೇ ಒಂದು ನಮಸ್ಕಾರ ಹಾಕಿ, ಸಂಗಮನಾಥನ ದರ್ಶನಕ್ಕೆ ತೆರಳಿದ್ರು. ಆ ಬಳಿಕ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಭಾಗಿಯಾದ್ರು.

ಅಮಿತ್ ಷಾ ಓರ್ವ ರಾಷ್ಟೀಯ ಪಕ್ಷದ ಅಧ್ಯಕ್ಷರಾಗಿದ್ದು, ಪ್ರತಿಯೊಂದು ನಡೆಯೂ ವಿಮರ್ಶೆ ಆಗಲಿದೆ. ಈಗಾಗಲೇ ಕರ್ನಾಟಕದಲ್ಲಿ ವೀರಶೈವ, ಲಿಂಗಾಯತ, ಬಸವಣ್ಣ ಎಂದು ವಿವಾದ ಸೃಷ್ಟಿಯಾಗಿರುವ ಸಮಯದಲ್ಲಿ ಮನೆ ಮುಂದೆ ಬಂದ ನೆಂಟರು ಮನೆಯೊಳಕ್ಕೆ ಬಾರದೆ ಹೋದರೆ ಜನ ಏನೆಂದುಕೊಳ್ತಾರೆ ಅನ್ನೋ ಅರಿವು ಇರಬೇಕಿತ್ತು. ಬಸವಣ್ಣನಿಗೆ ಅವರು ಮನಸೋತಿದ್ದಾರೋ ಇಲ್ಲವೋ ಅನ್ನೋ ವಿಚಾರ ಬೇರೆ, ಆದರೆ ಕೂಡಲ ಸಂಗಮಕ್ಕೆ ಬಂದೂ ಅಣ್ಣನ ಐಕ್ಯವಾದ ಸ್ಥಳಕ್ಕೆ ತೆರಳದೆ ಹೋಗಿರೋದು ಅನುಯಾಯಿಗಳ ಪಾಲಿಗೆ ಸಹಿಸಲಾಗದ ವಿಚಾರ. ಒಂದು ವೇಳೆ ಸಮಯದ ಅಭಾವ ಇದ್ದರೆ ಅಲ್ಲಿಗೆ ತೆರಳುವ ಕಾರ್ಯಕ್ರಮವನ್ನೇ ರದ್ದು ಮಾಡಬೇಕಿತ್ತು. ಬಂದು ಬಾರದೇ ಇರೋದು ಗಣ್ಯ ನಾಯಕರಾದವರಿಗೆ ಶೋಭೆಯಲ್ಲ ಅನ್ನೋದು ಕೂಡಲಸಂಗಮದ ಮಾತು. ಈಗಾಗಲೇ ಲಿಂಗಾಯತ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಮಾತೆ ಮಹಾದೇವಿ ಬಸವಣ್ಣನಿಗೆ ಮಾಡಿದ ಅವಮಾನ ಎಂದು ಅಮಿತ್ ಶಾ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಬಸವಣ್ಣನಿಗೆ ಅವಮಾನ ಮಾಡಲೆಂದೇ ಹೀಗೆ ಮಾಡಿದರಾ ಅಥವಾ ಕಾಲಾವಕಾಶ ಕಡಿಮೆ ಇತ್ತಾ..!? ಊರಿಗೆ ಬಂದವಳು ನೀರಿಗೆ ಯಾಕೆ ಬರಲಿಲ್ಲ ಅನ್ನೋ ಕಾರಣವನ್ನು ಅಮಿತ್ ಅಥವಾ ಬಿಜೆಪಿ ಸ್ಪಷ್ಟವಾಗಿ ಹೇಳಬೇಕಿದೆ.

Leave a Reply