ಮಗನಿಗಾಗಿ ಬಿಜೆಪಿ ಜೊತೆ ಸಿದ್ದರಾಮಯ್ಯ ರಾಜಿ!?

ಡಿಜಿಟಲ್ ಕನ್ನಡ ಟೀಮ್:

ಮೈಸೂರಿನ ವರುಣಾ ಕ್ಷೇತ್ರದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಮಗನನ್ನು ಗೆಲ್ಲಿಸಲೇ ಬೇಕಾದ ಅನಿವಾರ್ಯತೆ ಸಿದ್ದರಾಮಯ್ಯ ಮೇಲಿದೆ. ಯತೀಂದ್ರ ವಿರುದ್ಧ ಅಖಾಡಕ್ಕೆ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಇಳಿದಿದ್ದರಿಂದ ಕಂಗಾಲಾಗಿದ್ದ ಸಿದ್ದರಾಮಯ್ಯ, ಬಿಜೆಪಿ ನಾಯಕರನ್ನು ಸಂಪರ್ಕ ಮಾಡಿದ್ರಂತೆ. ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ ಬಳಿಕವಷ್ಟೇ ವರುಣಾದಲ್ಲಿ ವಿಜಯೇಂದ್ರಗೆ ಟಿಕೆಟ್ ಇಲ್ಲ ಅಂತ ಹೈಕಮಾಂಡ್ ಸೂಚಿಸಿದೆ ಅನ್ನೋದು ಕುಮಾರಸ್ವಾಮಿ ಅವರ ಆರೋಪ.

ವಿಜಯೇಂದ್ರ ಟಿಕೆಟ್ ಕೈ ತಪ್ಪಿದ ವಿಚಾರದ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ಅವರ ಮಗ ವಿಜಯೇಂದ್ರಗೆ ಟಿಕೆಟ್ ತಪ್ಪಿಸಲು ಸಿಎಂ ಸಿದ್ದರಾಮಯ್ಯ ಯಾರ‌್ಯಾರ ಜೊತೆ ಮಾತುಕತೆ ನಡೆಸಿದ್ದಾರೆ ಎಂಬುದು ನನಗೆ ಗೊತ್ತಿದೆ. ಅಂತು ಇಂತೂ ವಿಜಯೇಂದ್ರಗೆ ಟಿಕೆಟ್ ತಪ್ಪಿಸುವ ಮೂಲಕ ತಮ್ಮ ಮಗ ಯತೀಂದ್ರನನ್ನ ಸೇಫ್ ಮಾಡಿದ್ದಾರೆ ಎಂದು ಹೆಚ್‌ಡಿಕೆ ವಾಗ್ದಾಳಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಜೆಡಿಎಸ್ ಹಾಗೂ ಬಿಜೆಪಿ ಒಳೊಪ್ಪಂದ ಮಾಡಿಕೊಂಡಿವೆ ಅಂತಾ ಆರೋಪ ಮಾಡುವ ಇವರು ಬಿಜೆಪಿ ಪಕ್ಷದ ಜೊತೆ ಎಂತಹ ಸಂಬಂಧ ಹೊಂದಿದ್ದಾರೆ ಅನ್ನೋದು ಗೊತ್ತಿದೆ ಎಂದು ಮುಖ್ಯಮಂತ್ರಿಯನ್ನು ಕಿಚಾಯಿಸಿದ್ದಾರೆ.

ಸಿದ್ದರಾಮಯ್ಯ ಹಿರಿಯ ಪುತ್ರ ರಾಕೇಶ್ ರಾಜಕೀಯವಾಗಿ ಬೆಳೆದಿದ್ರು. ರಾಕೇಶ್ ಇಂದು ಇದ್ದಿದ್ರೆ ಈ ಬಾರಿ ಚುನಾವಣೆಗೆ ಸಿದ್ದರಾಮಯ್ಯ ಸ್ಪರ್ಧೆ ಮಾಡ್ತಿರಲಿಲ್ಲ. ವರುಣಾ ಕ್ಷೇತ್ರವನ್ನು ರಾಕೇಶ್‌ಗೆ ಬಿಟ್ಟುಕೊಟ್ಟು ಸಿದ್ದರಾಮಯ್ಯ ವಿಶ್ರಾಂತ ಜೀವನಕ್ಕೆ ತೆರಳ್ತಿದ್ರು. ಈ ಬಗ್ಗೆ ಹಲವಾರು ಬಾರಿ ಸಿದ್ದರಾಮಯ್ಯ ಅವರೇ ಹೇಳಿಕೊಂಡಿದ್ದಾರೆ. ಆದ್ರೆ ರಾಕೇಶ್ ಅವರ ಅಕಾಲಿಕ ನಿಧನದಿಂದ ಕಂಗಾಲಾದ ಸಿದ್ದರಾಮಯ್ಯ ವೈದ್ಯ ವೃತ್ತಿ ಮಾಡ್ತಿದ್ದ ಡಾ. ಯತೀಂದ್ರ ಅವರನ್ನು ರಾಜಕೀಯಕ್ಕೆ ಕರೆತಂದ್ರು. ಆದ್ರೆ ರಾಕೇಶ್ ಸಿದ್ದರಾಮಯ್ಯ ಅಷ್ಟು ರಾಜಕೀಯ ಪಟ್ಟು ಯತೀಂದ್ರ ಅವರಿಗೆ ಗೊತ್ತಿಲ್ಲದ ಕಾರಣ ಇನ್ನೈದು ವರ್ಷ ಜೊತೆಯಲ್ಲಿದ್ದು ರಾಜಕಾರಣ ಕಲಿಸುವ ನಿರ್ಧಾರಕ್ಕೆ ಬಂದಿದ್ದು ಈ ಬಾರಿಯೂ ಸ್ಪರ್ಧೆ ಮಾಡಿದ್ದಾರೆ. ಅದರಂತೆ ಯತೀಂದ್ರ ಅವರನ್ನು ಗೆಲ್ಲಿಸಿ ಒಮ್ಮೆ ಶಾಸಕನ್ನಾಗಿ ಮಾಡಿದರೆ ಮುಂದಿನ ರಾಜಕಾರಣ ಅವರೇ ಮಾಡಿಕೊಳ್ತಾರೆ ಅನ್ನೋದು ಸಿದ್ದರಾಮಯ್ಯ ಲೆಕ್ಕಾಚಾರ. ಒಂದು ವೇಳೆ ಯತೀಂದ್ರ ಸೋಲನ್ನನುಭವಿಸಿದ್ರೆ ಮಗನನ್ನ ವೃತ್ತಿ ಬಿಡಿಸಿ ಕರೆತಂದು ಸಿದ್ದರಾಮಯ್ಯ ಏನು ಮಾಡಿದ್ರು ಅನ್ನೋ ಮಾತು ಬರಬಾರದು ಅನ್ನೋ ಕಾರಣಕ್ಕೆ ಗೆಲ್ಲಿಸಲೇ ಬೇಕಾದ ಒತ್ತಡಕ್ಕೆ ಸಿಲುಕಿದ್ದಾರೆ. ಮಗನ ಗೆಲುವಿಗಾಗಿ ಸಿದ್ದರಾಮಯ್ಯ ಮಾತ್ರವಲ್ಲ ಆ ಸ್ಥಾನದಲ್ಲಿ ಯಾರೇ ಇದ್ದರು ಎಷ್ಟೆಲ್ಲಾ ತಂತ್ರಗಾರಿಕೆ ಮಾಡಬೇಕೋ ಅಷ್ಟೆಲ್ಲಾ ತಂತ್ರಗಾರಿಕೆ ಮಾಡಿಯೇ ಮಾಡ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಸಿದ್ದರಾಮಯ್ಯ ಅವರಿಗೂ ಕೂಡ ಬಿಜೆಪಿಯಲ್ಲಿ ಸ್ನೇಹಿತರಿದ್ದು ಅವರ ಮೂಲಕ ದಾಳ ಉರುಳಿಸಿಯೂ ಇರಬಹುದು. ಅವರ ಪ್ಲಾನ್ ವರ್ಕೌಟ್ ಆಗಿರಬಹುದು ಅದರಲ್ಲಿ ಅಚ್ಚರಿಯಿಲ್ಲ

Leave a Reply