‘ನಾನು ಅನುಮತಿ ನೀಡಿದರೆ ಮಾತ್ರ ಮೈತ್ರಿ’ ಕೇವಲ ಹೆಚ್ಡಿಕೆಗೆ ಮಾತ್ರವಲ್ಲ ಬಿಜೆಪಿ-ಕಾಂಗ್ರೆಸ್ಗೂ ಗೌಡ್ರ ವಾರ್ನಿಂಗ್!

ಡಿಜಿಟಲ್  ಕನ್ನಡ ಟೀಮ್:

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ ಮತ್ತೆ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದೇ ಆದ್ರೆ ಅವರನ್ನು ನಮ್ಮ ಕುಟುಂಬದಿಂದಲೇ ಬಹಿಷ್ಕರಿಸುತ್ತೇನೆ… ಇದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಕೊಟ್ಟಿರುವ ವಾರ್ನಿಂಗ್.

ಮುಂದಿನ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಾರೆ. ಎಚ್ಡಿಕೆ ಮತ್ತು ಅಮಿತ್ ಶಾ ದೆಹಲಿಯಲ್ಲಿ ಭೇಟಿಯಾಗಿದ್ದರು ಎಂಬ ಚರ್ಚೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ದೇವೇಗೌಡರು ಹೇಳಿದಿಷ್ಟು…

‘ಬಿಜೆಪಿ ಜತೆ ಮೈತ್ರಿ ಮಾಡುವುದಕ್ಕೆ ನನ್ನ ಅನುಮತಿ ಬೇಕು. ನನ್ನ ಅನುಮತಿ ಇಲ್ಲದೇ ಯಾವುದೇ ಮೈತ್ರಿ ಸಾಧ್ಯವಿಲ್ಲ. ಅದು ಕಾಂಗ್ರೆಸ್ ಆದರೂ ಸರಿಯೇ ಬಿಜೆಪಿಯೊಂದಿಗೆ ಆದರೂ ಸರಿಯೇ. ನನ್ನ ಅನುಮತಿ ಇಲ್ಲದೇ ಯಾವುದೇ ವೇಳೆ ಮೈತ್ರಿ ಮಾಡಿಕೊಂಡರೆ ಕುಮಾರಸ್ವಾಮಿ ನನ್ನ ಮಗನೇ ಅಲ್ಲ. ಈ ಹಿಂದೆ ಮೈತ್ರಿ ಮಾಡಿಕೊಂಡು ಬಹಳಷ್ಟು ಅನುಭವಿಸಿದ್ದೇವೆ. ಹೀಗಾಗಿ ಮತ್ತೆ ಯಾರ ಜತೆಯೂ ಮೈತ್ರಿ ಇಲ್ಲ. ನಾವೇ ಬಹುಮತ ಪಡೆದು ಸ್ವಂತ ಬಲದಿಂದ ಅಧಿಕಾರಕ್ಕೆ ಬರುತ್ತೇವೆ. ನಾವೇ ಮುಂದೆ ಸರಕಾರ ರಚಿಸುತ್ತೇವೆ. ಮೈತ್ರಿ ಸರಕಾರದ ಪ್ರಶ್ನೆಯೇ ಇಲ್ಲ. ಸಿದ್ದರಾಮಯ್ಯ ನಾವು ಬಿಜೆಪಿ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಹೇಳುತ್ತಿದ್ದಾರೆ. ಆದ್ರೆ ಅದೆಲ್ಲಾ ಸುಳ್ಳು.

Leave a Reply