ಅಮಿತ್ ಶಾ ದೆಹಲಿಗೆ ವಾಪಸ್ ಆಗದೆ ಉಳಿದುಕೊಂಡಿದ್ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ಪ್ರವಾಸದಲ್ಲಿ ಇರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೋಮವಾರ ಸಂಜೆ ದೆಹಲಿಗೆ ವಾಪಸ್ ಆಗಬೇಕಿತ್ತು. ಆದ್ರೆ ಸೋಮವಾರ ಬೆಳಗ್ಗೆ ಅಮಿತ್ ಏಕಾಏಕಿ ಪ್ರವಾಸ ರದ್ದು ಮಾಡಿದ್ದರು.

ಕೋಲಾರದಲ್ಲಿ ನಡೆಯಬೇಕಿದ್ದ ತಂತ್ರಗಾರಿಕೆ ಸಭೆ ಕೂಡ ರದ್ದಾಗಿತ್ತು. ಇದಕ್ಕೆ ಕಾರಣ ಏನು ಅನ್ನೋದನ್ನು ಮಾತ್ರ ಅಮಿತ್ ಶಾ ಬಿಟ್ಟು ಕೊಟ್ಟಿರಲಿಲ್ಲ. ಆದ್ರೆ ಮಧ್ಯಾಹ್ನದ ಬಳಿಕ ಅಮಿತ್ ಶಾ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದು ಯಾಕೆ ಅನ್ನೋ ಕಾರಣ ಗೊತ್ತಾಗಿದೆ.

ಅಮಿತ್ ಶಾ ಲೆಕ್ಕಾಚಾರ ಬಿಜೆಪಿ ಮಾತೃ ಸಂಸ್ಥೆ ಮಾತನ್ನು ಮೀರಿ ನಡೆಯುತ್ತಿದ್ದು, ಇದ್ರಿಂದ ಆರ್‌ಎಸ್‌ಎಸ್ ಗರಂ ಆಗಿದೆ. ನೇರವಾಗಿ ಸಂದೇಶ ರವಾನಿಸಿರುವ ಆರ್‌ಎಸ್‌ಎಸ್ ಮುಖಂಡರು ತರಾಟೆಗೆ ತೆಗೆದುಕೊಂಡಿದ್ದಾರೆ. ಇದ್ರಿಂದ ಇಕ್ಕಟ್ಟಿಗೆ ಸಿಲುಕಿದ ಅಮಿತ್ ಶಾ, ಎದ್ನೋ ಬಿದ್ನೋ ಅನ್ನೋ ಹಾಗೆ ಕೇಶವ ಕೃಪದ ಹಾದಿ ಹಿಡಿದಿದ್ದಾರೆ.

ಬೆಳಗ್ಗೆಯಿಂದ ಫೈರ್ ಫೀಲ್ಡ್ ಮನೆ ಬಿಟ್ಟು ಹೊರಗೆ ಬಾರದ ಅಮಿತ್ ಶಾ ಮಧ್ಯಾಹ್ನದ ಬಳಿಕ ಚಾಮರಾಜಪೇಟೆಯ ಆರ್‌ಎಸ್‌ಎಸ್ ಮುಖ್ಯಕಚೇರಿ ಕೇಶವಕೃಪಾ ಕಡೆಗೆ ಪ್ರಯಾಣ ಬೇಳೆದಿದ್ರು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೊದಲೇ ಗರಂ ಆಗಿದ್ದ ಆರ್‌ಎಸ್‌ಎಸ್ ಮುಖಂಡರ ಬಳಿ ಬಿಜೆಪಿ ಪಕ್ಷದ ತಂತ್ರಗಾರಿಕೆ ಬಗ್ಗೆ ವರದಿ ಒಪ್ಪಿಸಿದ್ದಾರೆ. ಆ ಬಳಿಕ ಚುನಾವಣೆಯಲ್ಲಿ ಬಿಜೆಪಿ ಅಲೆ ಕಾಣುತ್ತಿಲ್ಲ.

ಅಧಿಕಾರ ಹಿಡಿಯೋ ಸಾಧ್ಯತೆಗಳೂ ಕಡಿಮೆ ಇದ್ದು ಮ್ಯಾಜಿಕ್ ನಂಬರ್ ತಲುಪಲು ಮಾಡಬೇಕಿರುವ ತಂತ್ರಗಾರಿಕೆ ಏನು ಅನ್ನೋದನ್ನು ಕೇಳಿದ್ರು. ಜೊತೆಗೆ ಚುನಾವಣಾ ಅಂತಿಮ ಹಂತದಲ್ಲಿ ಏನೇನು ಮಾಡಬೇಕು ಏನೆಲ್ಲಾ ಮಾಡಬಾರದು ಅನ್ನೋ ಸಲಹೆ ಸೂಚನೆಗಳೂ ಕೇಶವಕೃಪಾ ಕಡೆಯಿಂದ ಬಂತು. ಸದ್ಯ ಆರ್‌ಎಸ್‌ಎಸ್ ನಾಯಕರ ಕೋಪದಿಂದ ಪಾರಾದ ಅಮಿತ್ ಶಾ ಕೆಜಿಎಫ್‌ಗೆ ತೆರಳಿದ್ದು, ಅಲ್ಲಿನ ಅಭ್ಯರ್ಥಿ ಮಾಜಿ ಶಾಸಕ‌ ಸಂಪಗಿ ಪುತ್ರಿ ಅಶ್ವಿನಿ ಸಂಪಂಗಿ ಪರವಾಗಿ ಪ್ರಚಾರ ನಡೆಸಿದ್ದಾರೆ. ಬಳಿಕ ಅಲ್ಲಿಂದ ಗೌರಿಬಿದನೂರಿಗೆ ಪ್ರಯಾಣ ಬೆಳೆಸಿದ್ದು, ರಾತ್ರಿ ಬೆಂಗಳೂರಿನಲ್ಲೇ ವಾಸ್ತವ್ಯ ಹೂಡಲಿದ್ದಾರೆ.

ಆರ್‌ಎಸ್‌ಎಸ್ ಒಂದು ಸ್ವಾತಂತ್ರ ಸಂಸ್ಥೆಯಾಗಿದ್ದು, ಅದು ನೇರವಾಗಿ ಚುನಾವಣಾ ಅಖಾಡಕ್ಕೆ ಇಳಿಯೋದಿಲ್ಲ. ಆದರೆ ಬಿಜೆಪಿ ಪಕ್ಷದ ಮೂಲಕ ರಾಜಕಾರ ಮಾಡುತ್ತದೆ. ಆರ್‌ಎಸ್‌ಎಸ್ ಸಂಘಟನೆಯಲ್ಲಿ ಶಿಸ್ತಿನಿಂದ ಬೆಳೆದ ಯುವಕರು ರಾಜಕೀಯಕ್ಕೆ ಧುಮುಕುವಾಗ ಬಿಜೆಪಿ ಮೂಲಕ ಅದೃಷ್ಟ ಪರೀಕ್ಷೇ ಮಾಡ್ತಾರೆ. ಆರ್‌ಎಸ್‌ಎಸ್ ಮೂಲದವರು ಎಂದರೆ ಬಿಜೆಪಿ ನಾಯಕರೂ ಕೂಡ ಬೇರೊಂದು ಮಾತನಾಡದೆ ಟಿಕೆಟ್ ನೀಡ್ತಾರೆ. ನೀಡಲೇ ಬೇಕು ಕೂಡ. ಯಾಕಂದ್ರೆ ಆರ್‌ಎಸ್‌ಎಸ್ ಸಂಘಟನೆ ಮಾಡುವುದರಲ್ಲಿ ನಿಸ್ಸಿಮರು. ಆರ್‌ಎಸ್‌ಎಸ್ ಅಜೆಂಡಾವನ್ನೇ ಬಿಜೆಪಿಯೇ ಪಾಲಿಸುತ್ತಿರೋದ್ರಿಂದ ಆರ್‌ಎಸ್‌ಎಸ್ ಮಾತನ್ನು ಮೀರುವಷ್ಟು ಸಾಹಸ ಮಾಡುವುದಿಲ್ಲ.

Leave a Reply