ಮೋದಿ ಭೇಟಿಯಾದ ಪವರ್ ಸ್ಟಾರ್!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.

ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರಕ್ಕೆ ಆಗಮಿಸಿರುವ ಮೋದಿ ಅವರನ್ನು ಪುನೀತ್ ರಾಜಕುಮಾರ್ ಹಾಗೂ ಅವರ ಪತ್ನಿ ಅಶ್ವಿನಿಯೊಂದಿಗೆ ಭೇಟಿಯಾಗಿ ತಾವು ಡಾ.ರಾಜಕುಮಾರ್ ಅವರ ಕುರಿತು ಬರೆದಿರುವ ಪುಸ್ತಕ (Dr. Rajkumar: The person behind the personality)ವನ್ನು ನೀಡಿದರು.

ಈ ಬಗ್ಗೆ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿರುವ ಪುನೀತ್, ‘ಇಂದು ಪತ್ನಿ ಅಶ್ವಿನಿ ಜೊತೆ ಸನ್ಮಾನ್ಯ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಅವಕಾಶ ಸಿಕ್ಕಿತು. ಅಪ್ಪಾಜಿ ಕುರಿತು ಬರೆದ ಪುಸ್ತಕವನ್ನು ನೀಡಿದೆ. ಅವರು ಅದನ್ನು ಬಹಳ ಆಸಕ್ತಿಯಿಂದ ಸ್ವೀಕರಿಸಿದರು. ಇಡೀ ವಿಶ್ವವೇ ಮೆಚ್ಚಿರುವ ಮೋದಿ ಅವರನ್ನು ಭೇಟಿ ಮಾಡಿರುವುದು ಬಹಳ ಖುಷಿ ನೀಡಿದೆ’ ಎಂದು ತಿಳಿಸಿದ್ದಾರೆ.

Leave a Reply