ಪ್ರಧಾನಿ ಮೋದಿಗೂ ರಾಹುಲ್‌ಗೂ ವ್ಯತ್ಯಾಸ ಏನು?

ಡಿಜಿಟಲ್ ಕನ್ನಡ ಟೀಮ್:
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಸಮೃದ್ಧ ಭಾರತ ಸಂವಾದ ಹೆಸರಿನಲ್ಲಿ ರಾಹುಲ್ ಗಾಂಧಿ ವಿವಿಧ ಕ್ಷೇತ್ರಗಳಲ್ಲಿನ ಗಣ್ಯರ ಜೊತೆಗೆ ಚರ್ಚೆ ನಡೆಸಲು ವೇದಿಕೆ ಸಜ್ಜಾಗಿತ್ತು. ರಾಹುಲ್ ಗಾಂಧಿಯ ಸಂವಾದ ಕಾರ್ಯಕ್ರಮಕ್ಕೆ ಮಾಧ್ಯಮಗಳಿಗೂ ಕೆಪಿಸಿಸಿ ವತಿಯಿಂದ ಆಹ್ವಾನ ಕೊಡಲಾಗಿತ್ತು. ಅದರಂತೆ ಮಾಧ್ಯಮ ಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಬಂದಿದ್ದರು. ಆದ್ರೆ ಕಾರ್ಯಕ್ರಮ ಆರಂಭಕ್ಕೂ ಮುನ್ನ ರಾಹುಲ್ ಗಾಂಧಿ ಮಾಧ್ಯಮದವರನ್ನು ಹೊರಗೆ ಕಳುಹಿಸಲು ಸೂಚಿಸಿದ್ರು. ಅದರಂತೆ ಎಸ್‌ಪಿಜಿ ಅಧಿಕಾರಿಗಳು ಮಾಧ್ಯಮ ಪ್ರತಿನಿಧಿಗಳನ್ನು ಹೋಟೆಲ್‌ನಿಂದ ಹೊರಕ್ಕೆ ಕಳುಹಿಸಿದ್ರು. ಇದೇ ವೇಳೆ ರಾಹುಲ್ ಗಾಂಧಿಗೆ ಪ್ರಶ್ನೆ ಕೇಳಲು ಮುಂದಾದ ಗಣ್ಯ ವ್ಯಕ್ತಿಗೆ ರಾಹುಲ್ ಉತ್ತರ “ಮೊದಲು ಮಾಧ್ಯಮದವರು ಹೊರಗಡೆ ಹೋಗಲಿ ಆಮೇಲೆ ಸಂವಾದ ಆರಂಭ ಮಾಡೋಣ” ಎನ್ನುವುದಾಗಿತ್ತು..
ರಾಹುಲ್ ಗಾಂಧಿ ಚುನಾವಣಾ ಘೋಷಣೆ ಆರಂಭದಲ್ಲಿ ಮೈಸೂರು ಪ್ರವಾಸ ಮಾಡಿದ್ರು. ಈ ವೇಳೆ ಮೈಸೂರಿನ ಮಹಾರಾಣಿ ಕಾಲೇಜು ವಿದ್ಯಾರ್ಥಿನಿಗಳ ಜಿತೆ ಸಂವಾದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಓರ್ವ ವಿದ್ಯಾರ್ಥಿನಿ ಎನ್‌‌ಎಸ್‌‌ಎಸ್ ಕ್ಯಾಂಪ್ ಬಗ್ಗೆ ಪ್ರಶ್ನೆ ಕೇಳಿದ್ರು, ಆ ಬಗ್ಗೆ ಉತ್ತರಿಸುವಲ್ಲಿ ಎಡವಿದ ರಾಹುಲ್ ಗಾಂಧಿ ಸಾವರಿಸಿಕೊಂಡು, ನನಗೆ ಆ ಬಗ್ಗೆ ನನಗೆ ಗೊತ್ತಿಲ್ಲ, ತಿಳಿದುಕೊಂಡು ಉತ್ತರಿಸುತ್ತೇನೆ ಅಂದ್ರು. ಅದರಲ್ಲಿ ಯಾವುದೇ ತಪ್ಪಿಲ್ಲ. ಎಲ್ಲವನ್ನು ಎಲ್ಲರೂ ತಿಳಿದಿರುವುದಕ್ಕೆ ಸಾಧ್ಯವಿಲ್ಲ. ಆದರೆ ಕಾಂಗ್ರೆಸ್ ಸಮರ್ಥವಾಗಿ ಸಮರ್ಥನೆ ಮಾಡಿಕೊಳ್ಳಲು ಎಡವಿದ್ರಿಂದ ದೇಶಾದ್ಯಂತ ವಿಷಯ ಚರ್ಚೆ ಆಯ್ತು. ಇದ್ರಿಂದ ಮುಜುಗರಕ್ಕೆ ಒಳಗಾದ ಕಾಂಗ್ರೆಸ್ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದಿನ ಸಂವಾದದಿಂದ ಮಾಧ್ಯಮ ಪ್ರತಿನಿಧಿಗಳನ್ನೇ ಹೊರಕ್ಕೆ ಕಳುಹಿಸುವ ಮೂಲಕ ಬಿಟ್ಟಿ ಪ್ರಚಾರಕ್ಕೆ ಕೊಡಲಿ ಏಟು ಹಾಕಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮಾಧ್ಯಮಗಳಲ್ಲಿ ಪ್ರಚಾರ ಪಡೆಯುತ್ತಾರೆ. ಅದಕ್ಕೆ ಅವರು ಹಣ ಕೊಟ್ಟಿರ‌್ತಾರೆ ಅನ್ನೋ ಆರೋಪವನ್ನು ಕಾಂಗ್ರೆಸ್‌ ಪಕ್ಷದವರು ಮಾಡ್ತಾರೆ. ಆದ್ರೆ ಮೋದಿ ಮಾಡುವ ಪ್ಲಾನಿಂಗ್ ಆ ರೀತಿ ಇರುತ್ತದೆಯೇ ವಿನಃ, ಮಾಧ್ಯಮಗಳಿಗೆ ಹಣ ಕೊಟ್ಟು ಖರೀದಿ ಮಾಡಿರುವುದಿಲ್ಲ. ಅದು ಸಾಧ್ಯವೂ ಇಲ್ಲ. ಯಾಕಂದ್ರೆ ಇಂದು ರಾಜ್ಯದಲ್ಲಿಯೇ 15 ನ್ಯೂಸ್ ಚಾನೆಲ್‌ಗಳಿದ್ದು ಎಲ್ಲಾ ಚಾನೆಲ್‌ನಲ್ಲೂ ಏಕಕಾಲಕ್ಕೆ ಮೋದಿ ಭಾಷಣ ಪ್ರಸಾರ ಮಾಡ್ತಾರೆ ಅಂದ್ರೆ ಎಲ್ಲಾ ಚಾನೆಲ್‌ಗಳಿಗೂ ಹಣ ಕೊಡಲು ಸಾಧ್ಯವಿಲ್ಲ, ಬದಲಿಗೆ ಅಲ್ಲಿ ವೀಡಿಯೋ ರೆಕಾರ್ಡಿಂಗ್ ಅವರೇ ಮಾಡಿಸಿ ಎಲ್ಲರಿಗೂ ಒಂದೇ ಕ್ವಾಲಿಟಿ ವೀಡಿಯೋ ಸಿಗುವ ರೀತಿ ವ್ಯವಸ್ಥೆ ಮಾಡುತ್ತಾರೆ. ಮಾಧ್ಯಮಗಳನ್ನು ಸ್ನೇಹಿತರಂತೆ ಭಾವಿಸ್ತಾರೆ. ಹಾಗಾಗಿ ಮೋದಿ ಎಲ್ಲೇ ಹೋಗಲಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಆಗುತ್ತೆ. ಸಂವಾದ ಕಾರ್ಯಕ್ರಮದಲ್ಲಿಯೂ ಮೋದಿ ಪ್ರಚಾರ ಪಡೆಯುತ್ತಾರೆ. ವಿದೇಶದಲ್ಲಿ ಸಂವಾದ ನಡೆದರೂ ಭಾರತೀಯ ಮಾಧ್ಯಮಗಳಿಗೆ ಅನುಗುಣವಾಗಿ ಕಾರ್ಯಕ್ರಮ ಫಿಕ್ಸ್ ಮಾಡಿರುತ್ತಾರೆ. ಆದ್ರೆ ಇಲ್ಲೇ ನಡೆಯುವ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಮಾಧ್ಯಮದವರನ್ನು ಹೊರಕ್ಕೆ ಕಳುಹಿಸುತ್ತಾರೆ. ಮಾಧ್ಯಮಗಳಲ್ಲಿ ಬರುವ ಸಕಾರಾತ್ಮಕ, ನಕಾರಾತ್ಮಕ ಸುದ್ದಿಗಳನ್ನು ಎದುರಿಸಲು ಮೋದಿ ಸಿದ್ದರಿದ್ದಾರೆ. ಅದೇ ರಾಹುಲ್ ಗಾಂಧಿ ಹೆದರುತ್ತಾರೆ. ಇಷ್ಟೇ ಇವರಿಬ್ಬರ ನಡುವಿನ ವ್ಯತ್ಯಾಸ

Leave a Reply