ಬೆಂಗಳೂರಿನ ಅಪಾರ್ಟ್ಮೆಂಟಲ್ಲಿ 10 ಸಾವಿರ ಮತದಾರರ ಚೀಟಿ ವಿವರ ಪತ್ತೆ- ತನಿಖೆಗೆ ಆದೇಶ

ಡಿಜಿಟಲ್ ಕನ್ನಡ ಟೀಮ್:

ರಾಜರಾಜೇಶ್ವರಿ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚಿನ ಮತದಾರರ ಗುರುತಿನ ಚೀಟಿ ಪತ್ತೆಯಾಗಿದ್ದು, ಈ ಕುರಿತಾಗಿ ಚುನಾವಣಾ ಆಯೋಗ ತನಿಖೆಗೆ ಆದೇಶ ನೀಡಿದೆ.

ಬಾಡಿಗೆಗಾಗಿ ಪಡೆಯಲಾಗಿದ್ದ ಅಪಾರ್ಟ್ಮೆಂಟ್ ನಲ್ಲಿ ಬಹುತೇಕ ಮತದಾರರ ಗುರುತಿನ ಚೀಟಿ ಕೊಳೆಗೇರಿ ಪ್ರದೇಶದ ಜನರದ್ದಾಗಿದ್ದು, ಇದರ ಜತೆಗೆ ಮತದಾರರ ಪಟ್ಟಿ ಮಾಹಿತಿ ಇರುವ ಕೌಂಟರ್ ಪೇಪರ್ ಗಳು ಲಭ್ಯವಾಗಿವೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಈ ಅಪಾರ್ಟ್ಮೆಂಟ್ ಕಾಂಗ್ರೆಸ್ ಶಾಸಕ ಮುನಿರತ್ನ ಅವರಿಗೆ ಸೇರಿದ್ದು ಎಂದು ಬಿಜೆಪಿ ಕಾರ್ಯಕರ್ತರು ಆರೋಪಿಸಿದರೆ, ಈ ಮನೆಯನ್ನು ಬಿಜೆಪಿ ನಾಯಕರೊಬ್ಬರ ಪುತ್ರ ರಾಕೇಶ್ ಎಂಬುವವರಿಗೆ ಬಾಡಿಗೆಗೆ ನೀಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚುನಾವಣ ಆಯೋಗದ ಮುಖ್ಯಸ್ಥ ಸಂಜೀವ್ ಕುಮಾರ್ ಹೇಳಿದಿಷ್ಟು…

‘ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಚುನಾವಣಾ ಆಯೋಗದ ಅಧಿಕಾರಿ ಹಾಗೂ ಮೂವರು ಪರಿವೀಕ್ಷಕರನ್ನೊಳಗೊಂಡ ಸಮಿತಿ ತನಿಖೆ ನಡೆಸಲಿದೆ.’

Leave a Reply