ಭಾರತೀಯ ಯೋಧರ ಮಾನವೀಯತೆ ಬಗ್ಗೆ ಬಾಯ್ಬಿಟ್ಟ ಉಗ್ರ, ಈಗ ಸೆಕ್ಯುಲರ್ ವಾದಿಗಳು ಏನಂತಾರೆ?

ಡಿಜಿಟಲ್ ಕನ್ನಡ ಟೀಮ್:
ದೇಶವನ್ನು ರಕ್ಷಿಸಲು ಪ್ರಾಣವನ್ನೇ ಪಣಕ್ಕಿಟ್ಟಿರುವ ಯೋಧರ ವಿರುದ್ಧ ಸೋ ಕಾಲ್ಡ್ ಸೆಕ್ಯುಲರ್ ವಾದಿಗಳು ಮಾನವ ಹಕ್ಕು ಉಲ್ಲಂಘನೆ ಸೇರಿದಂತೆ ಅನೇಕ ಆರೋಪ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಯೋಧರ ಕೈಗೆ ಸಿಕ್ಕಿ ಬಿದ್ದ ಉಗ್ರ ನಮ್ಮ ಸೈನಿಕರ ಮಾನವೀಯ ಮೌಲ್ಯಗಳನ್ನು ಬಿಡಿಸಿಟ್ಟಿದ್ದಾನೆ.
ಹೌದು, ಕಳೆದ ಏಪ್ರಿಲ್ 30ರಂದು ಜಮ್ಮು ಕಾಶ್ಮೀರದ ಬರಾಮುಲ್ಲಾದಲ್ಲಿ ಮೂವರು ನಾಗರೀಕರನ್ನು ಹತ್ಯೆ ಮಾಡಿದ ಲಷ್ಕರ್ ಉಗ್ರ ಅಜಾಜ್ ಗುಜ್ರಿ ಎಂಬಾತನನ್ನು ಸೇನೆ ಇತ್ತೀಚೆಗೆ ಬಂಧಿಸಿತ್ತು. ಆತನನ್ನು ಸ್ಥಳದಲ್ಲೇ ಹತ್ಯೆ ಮಾಡಬಹುದಾಗಿತ್ತಾದರೂ ಯೋಧರು ಆತನನ್ನು ಸೆರೆ ಹಿಡಿದಿದೆ. ಕಾಶ್ಮೀರ ಪೊಲೀಸರ ವಶದಲ್ಲಿರುವ ಈತ ಈಗ ತಪ್ಪೊಪ್ಪಿಗೆ ವಿಡಿಯೋದಲ್ಲಿ ಭಾರತ ಸೇನೆಯ ಮಾನವೀಯತೆಯನ್ನು ಹೊಗಳುವುದರ ಜತೆಗೆ, ಪಾಕಿಸ್ತಾನದ ಕುತಂತ್ರ ಹಾಗೂ ಯುವಕರು ಭಯೋತ್ಪಾದನೆ ಹಾದಿ ಹಿಡಿಯದಂತೆ ಸಂದೇಶ ರವಾನಿಸಿದ್ದಾನೆ. ಈ ವಿಡಿಯೋದಲ್ಲಿ ಈತ ಹೇಳಿರುವುದಿಷ್ಟು…
‘ಭಾರತೀಯ ಸೇನೆ ಕಾರ್ಯಾಚರಣೆ ನಡೆಸಿದ ವೇಳೆ ನಾನು ಬಸ್ ನಲ್ಲಿ ಅವಿತು ಕುಳಿತಿದ್ದೆ. ಆಗ ಅವರು ಏಕಾಏಕೆ ನನ್ನನ್ನು ಹತ್ಯೆ ಮಾಡಬಹುದಿತ್ತು. ಆದರೆ ಅವರು ನನ್ನ ಪ್ರಾಣಕ್ಕೆ ಬೆಲೆ ಕೊಟ್ಟಿದ್ದಾರೆ. ನಮ್ಮನ್ನು ಬಂಧಿಸಿದ ದಿನ ಹಿಂಸಾಚಾರ ನಡೆಸುವಂತೆ ಪಾಕಿಸ್ತಾನ ಸಂದೇಶ ರವಾನಿಸಿತ್ತು. ಭಾರತೀಯ ಸೇನೆ ಕ್ರೂರಿಗಳು ಎಂದು ಪಾಕಿಸ್ತಾನ ತಿಳಿಸಿತ್ತು. ಆದರೆ ಅದು ಸುಳ್ಳು. ಯಾರೆಲ್ಲ ತಮ್ಮ ಕುಟುಂಬವನ್ನು ತ್ಯಜಿಸಿ ಬಂದೂಕು ಹಿಡಿದಿದ್ದಾರೋ ಅವರೆಲ್ಲರು ಮತ್ತೆ ವಾಪಸ್ಸಾಗಿ ತಮ್ಮ ಕುಟುಂಬದೊಂದಿಗೆ ನೆಮ್ಮದಿಯ ಜೀವನ ನಡೆಸಲು ಎಂದು ಕರೆ ನೀಡುತ್ತೇನೆ. ‘

Leave a Reply