ಸ್ಟಾರ್ ಪ್ರಚಾರದ ಹಿಂದಿನ ಸತ್ಯ ಏನು?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ ಚುನಾವಣಾ ಬಿರುಗಾಳಿಯಲ್ಲಿ ಅಂತಿಮ ಘಟ್ಟ ತಲುಪಿದೆ. ಇಂದು ಸಂಜೆ ಆರು ಗಂಟೆ ತನಕ ಬಹಿರಂಗ ಪ್ರಚಾರಕ್ಕೆ ಅವಕಾಶವಿದ್ದು, ಆ ಬಳಿಕ ಬಹಿರಂಗ ಪ್ರಚಾರ ಮಾಡುವಂತಿಲ್ಲ. ಯಾವುದೇ ಪಕ್ಷಗಳು ಮಾಧ್ಯಮಗಳಲ್ಲಿಯೂ ಪ್ರಚಾರ ಮಾಡುವಂತಿಲ್ಲ. ಯಾವ ಮಾಧ್ಯಮಗಳೂ ರಾಜಕಾರಣಿಗಳ ಮಾತನ್ನು ಪ್ರಸಾರ ಮಾಡುವಂತಿಲ್ಲ ಎಂದು ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ಮಾಡಿದೆ. ಆದರೆ ಚುನಾವಣಾ ಅಖಾಡದಲ್ಲಿ ಸಿನಿಮಾ ಸ್ಟಾರ್‌ಗಳು ಈ ಬಾರಿ ಬಿರುಸಿನ ಪ್ರಚಾರ ಮಾಡಿದ್ದಾರೆ. ಕೆಲವೊಂದು ಪಕ್ಷದ ಪರವಾಗಿ, ಕೆಲವೊಂದು ವ್ಯಕ್ತಿಗಳ ಪರವಾಗಿ ಮತಯಾಚಿಸಿದ್ದು ಸಾರ್ವಜನಿಕರಲ್ಲಿ‌ ಅಚ್ಚರಿ‌ ತರಿಸಿದೆ.

ಸಿನಿಮಾ ಸ್ಟಾರ್‌ಗಳು ಮುಖ್ಯವಾಗಿ ಬೆಂಗಳೂರಿನ ಬೊಮ್ಮನಹಳ್ಳಿಯ ಸತೀಶ್ ರೆಡ್ಡಿ, ಮೊಳಕಾಲ್ಮೂರಿನ ಶ್ರೀರಾಮುಲು, ಚಾಮುಂಡೇಶ್ವರಿಯ ಸಿದ್ದರಾಮಯ್ಯ, ಬಳ್ಳಾರಿ, ಕಂಪ್ಲಿಯ ರೆಡ್ಡಿ ಬ್ರದರ್ಸ್, ನೆಲಮಂಗಲ ಎಂ.ವಿ ನಾಗರಾಜ್, ದೇವದುರ್ಗದ ಮಾನಪ್ಪ ವಜ್ಜಲ್, ಬಬಲೇಶ್ವರದಲ್ಲಿ ಎಂ.ಬಿ ಪಾಟೀಲ್ ಪರವಾಗಿಯೂ ಮತ ಯಾಚಿಸಿದ್ದಾರೆ. ಆದ್ರೆ ಸ್ಟಾರ್ ನಟರು ಕೊಟ್ಟಿರೋ ಹೇಳಿಕೆ ಅಂದ್ರೆ ಇವರು ನಮ್ಮ ಸ್ನೇಹಿತರು. ಹಾಗಾಗಿ ನಾನು ಪ್ರಚಾರ ಮಾಡ್ತಿದ್ದೇನೆ ಎಂದಿದ್ದರು. ಇನ್ನೂ ಕೆಲವರು ನಾನು ವ್ಯಕ್ತಿಗಳನ್ನು ನೋಡಿ ಪ್ರಚಾರ ಮಾಡ್ತೇನೇ ಎಂದೂ ಕೂಡ ಹೇಳಿದ್ರು. ಕೊನೆಯದಾಗಿ ಅವರು ಪ್ರಚಾರ ಮಾಡಿದ್ದು ಮಾತ್ರ ತಮ್ಮ ಖಜಾನೆಗೆ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ. ಕೆಲವರು ಸ್ನೇಹಕ್ಕಾಗಿಯೇ ಪ್ರಚಾರ ಮಾಡಿರಬಹುದು ಇಲ್ಲ ಎಂದು ಕೂಡ ಸಾರಸಗಟಾಗಿ ತಿರಸ್ಕರಿಸಲು ಸಾಧ್ಯವಿಲ್ಲ. ಆದರೇ ಬಹುತೇಕ ಪ್ರಚಾರ ನಡೆದಿದ್ದು ಪಗಾರಕ್ಕಾಗಿ ಅನ್ನೋದೆ ಸತ್ಯ..

ಇನ್ನೊಂದು ಮಾತು ಏನಂದ್ರೆ ಸ್ಟಾರ್‌ಗಳು ಬಂದು ನಮ್ಮೂರಿನಲ್ಲಿ ಪ್ರಚಾರ ಮಾಡಿದರೆ ಜನರೆಲ್ಲಾ ನಮಗೇ ವೋಟ್ ಹಾಕ್ತಾರೆ ಅನ್ನೋವಷ್ಟು ಮೂರ್ಖರು ಅಭ್ಯರ್ಥಿಗಳು ಅಲ್ಲ. ಆದರೆ ಸ್ಟಾರ್‌ಗಳನ್ನು ನೋಡುವ ನೆಪದಲ್ಲಿ ಜನಸಾಗರ ಸೇರಿದ ಮೇಲೆ ಅಲ್ಲಿ ನಮ್ಮ ಪರವಾಗಿ ಪ್ರಚಾರ ಮಾಡಿಕೊಳ್ಳಬಹುದು ಅನ್ನೋ ಉದ್ದೇಶವೇ ಅವರ ನಿರ್ಧಾರಕ್ಕೆ ಕಾರಣವಾಗಿರುತ್ತದೆ. ಇನ್ನೂ ಕೆಲವೊಮ್ಮೆ ಅಂಧ ಅಭಿಮಾನಿಗಳು ನಮ್ಮ ಸ್ಟಾರ್ ಯಾತಿಗೆ ಹೇಳ್ತಾನೋ ಅದೇ ಅಭ್ಯರ್ಥಿಗೆ ಮತ ಹಾಕುವ ನಿರ್ಧಾರ ಮಾಡಿದ್ರೂ ಯಾವುದೇ ಅಚ್ಚರಿಯಿಲ್ಲ. ನನ್ನ ಪರವಾಗಿ ಇಂತಹವರು ಪ್ರಚಾರ ಮಾಡಿದ್ರು ಅಂತಾ ಹೇಳಿಕೊಳ್ಳುವುದೂ ಒಂದು ರೀತಿಯ ಸ್ಟೇಟಸ್ ಆಗಿದೆ. ಹಾಗಾಗಿ ಸ್ಟಾರ್ ಪ್ರಚಾರಕರನ್ನು ಕರೆಸಿ ತಮ್ಮ ಪರ ಮತಭಿಕ್ಷೆ ಕೇಳುವ ಕೆಲಸ ಮಾಡ್ತಿದ್ದಾರೆ. ಜನರು ಅದ್ಯಾವ ಸ್ಟಾರ್ ಪ್ರಚಾರಕ ಮಾತಿಗೆ ಮರುಳಾಗಿ ಮತ ಹಾಕ್ತಾರೋ ಅನ್ನೋದು ಮಾತ್ರು ಮೇ 15 ರಂದು ಗೊತ್ತಾಗುತ್ತದೆ..

Leave a Reply