ಚುನಾವಣೋತ್ತರ ಸಮೀಕ್ಷೆಯಲ್ಲಿ ಯಾರ ಭವಿಷ್ಯ ಹೇಗಿದೆ?

ಡಿಜಿಟಲ್ ಕನ್ನಡ ಟೀಮ್:

ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಲ್ಲಲ್ಲಿ ಮಳೆ ಅಡಚಣೆ, ಮತಯಂತ್ರ ತೊಂದರೆ ಹೊರತುಪಡಿಸಿದಂತೆ ಶೇ.70ರಷ್ಟು ಮತದಾನವಾಗಿದೆ. ಮತದಾನ ಮುಕ್ತಾಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆ ಫಲಿತಾಂಶ ಬಿಡುಗಡೆಯಾಗಿದ್ದು, ಈ ಸಮೀಕ್ಷಗಳು ಬಿಜೆಪಿ ಹಾಗೂ ಕಾಂಗ್ರೆಸ್ ಪರ ತಮ್ಮದೇ ಆದ ರೀತಿಯಲ್ಲಿ ಬ್ಯಾಟ್ ಬೀಸಿವೆ. ಇವುಗಳ ಮಧ್ಯೆ ಜೆಡಿಎಸ್ ಗೆ ಅದೃಷ್ಟವೇ ಗತಿ ಎಂಬುದನ್ನು ಸ್ಪಷ್ಟಪಡಿಸಿವೆ. ಹೀಗಾಗಿ ಇದೇ 15ರಂದು ನಡೆಯಲಿರುವ ಮತ ಏಣಿಕೆ ಹಾಗೂ ಫಲಿತಾಂಶ ಕಡೆಯ ಓವರ್ ಮುಕ್ತಾಯದ ಟಿ20 ಕ್ರಿಕೆಟ್ ಪಂದ್ಯದಂತೆ ಕುತೂಹಲ ಹುಟ್ಟು ಹಾಕಿದೆ. ವಿವಿಧ ಮಾಧ್ಯಮಗಳ ಸಮೀಕ್ಷೆ ಫಲಿತಾಂಶ ಹೀಗಿವೆ…

ಟೈಮ್ಸ್ ನೌ

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್ 90-103
ಬಿಜೆಪಿ 80-93
ಜೆಡಿಎಸ್+ 31-39
ಇತರೆ 2-4

 

ರಿಪಬ್ಲಿಕ್ ಟಿವಿ

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್  73-82
ಬಿಜೆಪಿ  95-114
ಜೆಡಿಎಸ್+  32-43
ಇತರೆ  2-3

 

ಇಂಡಿಯಾ ಟುಡೆ

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್ 106-118
ಬಿಜೆಪಿ  79-92
ಜೆಡಿಎಸ್+  22-30
ಇತರೆ  1-4

 

ಟುಡೆ ಚಾಣಕ್ಯ

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್ 73
ಬಿಜೆಪಿ 120
ಜೆಡಿಎಸ್+ 26
ಇತರೆ 3

 

ನ್ಯೂಸ್ ಎಕ್ಸ್

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್  72-78
ಬಿಜೆಪಿ  102-110
ಜೆಡಿಎಸ್+  35-39
ಇತರೆ  3-4

 

ಆ್ಯಕ್ಸಿಸ್ – ಮೈ ಇಂಡಿಯಾ

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್  106-118
ಬಿಜೆಪಿ  79-92
ಜೆಡಿಎಸ್+  22-30
ಇತರೆ  1-4

 

ಸಿ-ವೋಟರ್

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್  93
ಬಿಜೆಪಿ  103
ಜೆಡಿಎಸ್+  25
ಇತರೆ  1

 

ಸಿಎನ್ಎಕ್ಸ್

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್  75
ಬಿಜೆಪಿ  106
ಜೆಡಿಎಸ್+  32
ಇತರೆ  4

 

ಜನ್ ಕೀ ಬಾತ್

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್  73-82
ಬಿಜೆಪಿ  95-114
ಜೆಡಿಎಸ್+  32-43
ಇತರೆ  2-3

 

ನ್ಯೂಸ್ 18

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್  95-100
ಬಿಜೆಪಿ  92-98
ಜೆಡಿಎಸ್+  36-42
ಇತರೆ  3-5

 

ನ್ಯೂಸ್ ನೇಷನ್

ಪಕ್ಷ ಪಡೆಯಬಹುದಾದ ಸಂಖ್ಯೆ
ಕಾಂಗ್ರೆಸ್  73
ಬಿಜೆಪಿ  107
ಜೆಡಿಎಸ್+  38
ಇತರೆ  4

 

Leave a Reply