ಸಂಧಾನ ಆದ್ರೆ ಸರ್ಕಾರ… ಇಲ್ಲದಿದ್ರೆ ಆಪರೇಷನ್!

ಡಿಜಿಟಲ್ ಕನ್ನಡ ಟೀಮ್:

ನಾಳಿನ ಫಲಿತಾಂಶ ಭಾರೀ ಕುತೂಹಲ ಹುಟ್ಟಿಸಿದ್ದು, ಚುನಾವಣೋತ್ತರ ಸಮೀಕ್ಷಗಳೂ ಕೂಡ ಸಮರ್ಪಕವಾಗಿಲ್ಲ. ಒಂದೊಂದು ಸಮೀಕ್ಷೆಗಳು ಒಂದೊಂದು ಪಕ್ಷಕ್ಕೆ ಹೆಚ್ಚೆಚ್ಚು ಸ್ಥಾನಗಳನ್ನು ನೀಡಿವೆ. ಒಂದು ಸಮೀಕ್ಷೆ ಬಿಜೆಪಿ ಅತೀ ದೊಡ್ಡ ಪಕ್ಷವಾಗಲಿದೆ ಎಂದರೆ, ಮೊತ್ತೊಂದು ಸಂಸ್ಥೆ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಲಿದೆ ಎಂದು ಸಮೀಕ್ಷೆಗಳು ಬಂದಿದ್ದು, ಜನರ ಗೊಂದಲವನ್ನು ಜಾಸ್ತಿ ಮಾಡಿವೆ. ಹಾಗಾಗಿ ಯಾವುದೇ ಸಮೀಕ್ಷೆಯನ್ನು ಜನಸಾಮಾನ್ಯರು ನಂಬುವ ಸ್ಥಿತಿಯಲ್ಲಿಲ್ಲ. ನೇರವಾಗಿ ಫಲಿತಾಂಶವನ್ನೇ ಜನರು ಕಾತುರತೆಯಿಂದ ಕಾಯುವಂತೆ ಮಾಡಿದೆ. ಅದರಲ್ಲೂ ಅತಂತ್ರ ಸರ್ಕಾರ ಬರುವ ಮಾತುಗಳು ದಟ್ಟವಾಗಿ ಇರೋದ್ರಿಂದ ಯಾವ ಪಕ್ಷ ದೊಡ್ಡ ಪಕ್ಷವಾಗಲಿದೆ. ಜೆಡಿಎಸ್ ಯಾರ ಜೊತೆ ಸೇರಿಕೊಂಡು ಅಧಿಕಾರ ಹಿಡಿಯಲಿದೆ ಅನ್ನೋ ಕುತೂಹಲ ಸಾಮಾನ್ಯವಾಗಿಯೇ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಕಾಂಗ್ರೆಸ್ 100 ಸ್ಥಾನಗಳ ಆಸುಪಾಸಿನಲ್ಲಿ ಬಂದು ನಿಂತರೆ, ಇನ್ನೂ 12 ಸ್ಥಾನಗಳ ಕೊರತೆ ಬೀಳಲಿದೆ. ಆಗ ಪಕ್ಷೇತರರು ಅಷ್ಟು ಪ್ರಮಾಣದಲ್ಲಿ ಇದ್ದರೆ, ಕಾಂಗ್ರೆಸ್ ಪಕ್ಷೇತರರ ಸಹಾಯದಿಂದ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ. ಒಂದು ವೇಳೆ ಪಕ್ಷೇತರರು ಅಷ್ಟೊಂದು ಪ್ರಮಾಣದಲ್ಲಿ ಇಲ್ಲದೇ ಹೋದಾಗ ಜೆಡಿಎಸ್ ಅನಿವಾರ್ಯತೆ ಉಂಟಾಗಲಿದೆ. ಕಾಂಗ್ರೆಸ್‌ಗೆ ನೇರ ಎದುರಾಳಿ ಎಂದು ಭಾವಿಸಿರುವ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಹಾಗಾಗಿ ದಾಳ ಉರುಳಿಸಲೇ ಬೇಕು. ಜೆಡಿಎಸ್ ಸಕಾರಾತ್ಮಕವಾಗಿ ಸ್ಪಂದಿಸಿದರೆ ಸರ್ಕಾರ ರಚನೆ ಮಾಡೋಣ ಎಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ. ಒಂದು ಕಾಂಗ್ರೆಸ್ ಪಕ್ಷದ ಮೇಲೆ ಸಾಕಷ್ಟು ಷರತ್ತುಗಳನ್ನು ಹಾಕಿಕೊಂಡು ಒಪ್ಪಂದಕ್ಕೆ ಬಾರದೇ ಹೋದಲ್ಲಿ, ಬೇಕಾದ ಸ್ಥಾನಗಳನ್ನು ಜೆಡಿಎಸ್ ಪಕ್ಷವನ್ನೇ ಆಪರೇಷನ್ ಮಾಡುವ ಬಗ್ಗೆಯೂ ಕಾಂಗ್ರೆಸ್‌ನಲ್ಲಿ ಚರ್ಚೆಗಳು ನಡೆದಿವೆ ಎನ್ನಲಾಗಿದೆ.

ಜೆಡಿಎಸ್ 40 ಸ್ಥಾನಗಳನ್ನು ಗೆದ್ದುಕೊಂಡರೆ ಅದರಲ್ಲಿ 15 ಶಾಸಕರನ್ನು ಸೆಳೆದುಕೊಂಡರೆ ಕಾಂಗ್ರೆಸ್ ಅಧಿಕಾರದ ಆಸೆ ಸಲೀಸು. ಯಾಕಂದ್ರೆ 15 ಶಾಸಕರು ನೇರವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಬಹುದು. ಪಕ್ಷಾಂತರ ನಿಷೇಧ ಕಾಯಿದೆ ಪ್ರಕಾರ ಒಂದು ಅಧಿಕೃತ ಪಕ್ಷದ ಮೂರನೇ ಒಂದು ಭಾಗದಷ್ಟು ಶಾಸಕರು ಬೇರೊಂದು ಪಕ್ಷಕ್ಕೆ ವಲಸೆ ಹೋದರೆ ಅದು ಪಕ್ಷಾಂತರ ನಿಷೇಧ ಕಾಯ್ದೆ ವ್ಯಾಪ್ತಿಯಲ್ಲಿ ಬರುವುದಿಲ್ಲ. ಹಾಗಾಗಿ 15 ಶಾಸಕರನ್ನು ಸೆಳೆಯಲು ಎರಡು ಟೀಮ್ ಮಾಡಲಾಗಿದೆ. ಅದರಲ್ಲಿ‌ ಒಂದು ಕನಕಪುರದ ಸರದಾರ ಡಿ.ಕೆ ಶಿವಕುಮಾರ್ ಒಂದು ಟೀಂ ಆದ್ರೆ, ಸಿಎಂ ಸಿದ್ದರಾಮಯ್ಯ ಅವರದ್ದೇ ಒಂದು ಪಂಗಡವಾಗಿದೆ. ಡಿಕೆ ಶಿವಕುಮಾರ್ ಹಣ ಕೊಟ್ಟು ಖರೀದಿ ಮಾಡಲು ಸಜ್ಜಾಗಿದ್ರೆ, ಸಿದ್ದರಾಮಯ್ಯ ತನ್ನ ಆಡಳಿತಾವಧಿಯಲ್ಲಿ ಕೊಟ್ಟಂತ ಅನುದಾನಗಳು, ಸಹಾಯದ ಆಧಾರದಲ್ಲಿ ಕೆಲವೊಂದಿಷ್ಟು ಮಂದಿ ಪುನರಾಯ್ಕೆಯಾಗುವ ಶಾಸಕರನ್ನು ಸೆಳೆಯಲು ಮಾಸ್ಟರ್ ಪ್ಲಾನ್ ಆಗಿದೆ. ಆದ್ರೆ ಯಾರು ಸಿಎಂ ಆಗಲು ಯಾರು ಹೆಲ್ಪ್ ಮಾಡ್ತಾರೆ ಅನ್ನೋದೇ ಇಂಟರೆಸ್ಟಿಂಗ್.

Leave a Reply