ರಾಜ್ಯದಲ್ಲಿ ಸೋಲು ಗೆಲುವಿನ ಬೆಟ್ಟಿಂಗ್ ಭರಾಟೆ!

To go with story 'India-gambling-archery-tradition' In this photograph taken on February 2, 2013 an Indian bookie counts the day's earnings at an archery club in the north-eastern city of Shillong. Every weekday afternoon in the picturesque Indian city of Shillong, dozens of men meet to play with bows and arrows, place bets and gamble, keeping a centuries-old tradition alive. The origins of the game, known simply as Siat Khnam or Shoot Arrow and played by men belonging to northeast India's Khasi tribe, are unclear. AFP PHOTO/Roberto SCHMIDT (Photo credit should read ROBERTO SCHMIDT/AFP/Getty Images)

ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ನಾಳೆ ಬೆಳೆಗ್ಗೆ ಮತ ಎಣಿಕೆ ಕಾರ್ಯ ನಡೆಯಲಿದೆ. ಈಗಾಗಲೇ ಸ್ಟ್ರಾಂಗ್ ಸುತ್ತಮುತ್ತ ಬಿಗಿ ಭದ್ರತೆ ಕೈಗೊಳ್ಳಲಾಗ್ತಿದೆ. ಇನ್ನೂ ಜಿದ್ದಾಜಿದ್ದಿಗೆ ಬಿದ್ದಿರುವ ಕ್ಷೇತ್ರದಲ್ಲಿ ಗಲಾಟೆಗಳು ನಡೆಯುವ ಸಂಭವ ಇರೋದ್ರಿಂದ 144 ಸೆಕ್ಷನ್ ಜಾರಿ ಮಾಡಿದ್ದು, ಮತ ಎಣಿಕೆ ಕೇಂದ್ರಸ ಸುತ್ತಮುತ್ತ ಗುಂಪು ಸೇರಬಾರದು, ಸಂಭ್ರಮಾಚರಣೆ ಮಾಡುವಂತಿಲ್ಲ, ಪಟಾಕಿ ಸಿಡಿಸುವಂತಿಲ್ಲ ಎಂದು ಜಿಲ್ಲಾ ಚುನಾವಣಾ ಅಧಿಕಾರಿಗಳೂ ಆದ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದಾರೆ. ಅತೀ ಸೂಕ್ಷ್ಮ ಪ್ರದೇಶದಲ್ಲಿ ಮತಕೇಂದ್ರ ಸುತ್ತ ಸಿಸಿಟಿವಿ ವ್ಯವಸ್ಥೆಯನ್ನೂ ಮಾಡಲಾಗಿದೆ.

ಇನ್ನು ಚುನಾವಣಾ ಆಯೋಗ ಕ್ಷಣಕ್ಷಣದ ಫಲಿತಾಂಶ ನೀಡಲು ಸಜ್ಜಾಗಿದ್ದು, ನಾಳೆ ಬೆಳಗ್ಗೆ 11 ಗಂಟೆ ವೇಳೆಗೆ ಸರ್ಕಾರ ರಚನೆ ಮಾಡೋದು ಯಾರು ಅನ್ನೋದು ಗೊತ್ತಾಗಲಿದೆ. ಆದರೆ ಈಗಾಗಲೇ ಚುನಾವಣಾ ಫಲಿತಾಂಶ ಹೀಗೆ ಬರಲಿದೆ ಎಂದು ಅಂದಾಜಿಸಿರುವ ರಾಜಕೀಯ ಮುಖಂಡರು ಬಾಜಿ ಕಟ್ಟೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಅದರಲ್ಲೂ ಮೈಸೂರು, ಮಂಡ್ಯ ಸೇರಿದಂತೆ ಹಳೇ ಮೈಸೂರು ಭಾಗದಲ್ಲಿ ತನ್ನದೇ ಆದ ಪ್ರಾಬಲ್ಯ ಸಾಧಿಸಿರುವ ಜೆಡಿಎಸ್‌ ಪಕ್ಷ ಈ ಬಾರಿ ಭಾರೀ ಸ್ಥಾನ ಗಳಿಸುವ ವಿಶ್ವಾಸ ಇರಿಸಿಕೊಂಡಿದ್ದು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬಗ್ಗು ಬಡಿಯುವ ಮಾತನಾಡ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಕೆಲಸದಲ್ಲಿ ಹರಿದು ಹಂಚಿ ಹೋಗಿದ್ದ ಸ್ನೇಹಿತರು, ಗ್ರಾಮಸ್ಥರು, ನೆಂಟರು ಇದೀಗ ಬೆಟ್ಟಿಂಗ್ ಕಟ್ಟುವ ಹುಮ್ಮಸ್ಸಿನಲ್ಲಿದ್ದಾರೆ. ಅದೂ ಒಂದಕ್ಕೆ ಎರಡು ಪಟ್ಟು ಕೇಳ್ತಿದ್ದಾರೆ ಕಾಂಗ್ರೆಸದ ಕಾರ್ಯಕರ್ತರು.

ಜೆಡಿಎಸ್ ಕಾರ್ಯಕರ್ತರು ತಮ್ಮದೇ ಅಭ್ಯರ್ಥಿ ಗೆಲ್ಲಲಿದ್ದಾರೆ ಅನ್ನೋ ವಿಶ್ವಾಸದಲ್ಲಿ ಬೆಟ್ಟಿಂಗ್‌ಗೆ ಆಹ್ವಾನ ನೀಡ್ತಿದ್ದು, ಕಾಂಗ್ರೆಸ್ ಕಾರ್ಯಕರ್ತರು ದಿಗಿಲುಗೊಳ್ಳುವಂತೆ ಮಾಡಿದೆ. ಹಳೇ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಕೂಡ ಜೆಡಿಎಸ್‌ಗೆ ಸ್ಟ್ರಾಂಗ್ ಫೈಟ್ ನೀಡಿದ್ದು, ಕೆಲವೊಂದು ಕಡೆ ಗೆಲುವು ಸಾಧಿಸಲಿದೆ. ಆದ್ರೆ ಜೆಡಿಎಸ್ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಮೆಟ್ಟಿ ನಿಲ್ಲುವ ಧೈರ್ಯ ತೋರಲಾಗ್ತಿಲ್ಲ. ಅದರಲ್ಲೂ ನಾಗಮಂಗಲ, ಕೆಆರ್ ಪೇಟೆ ಭಾಗದಲ್ಲಿ ಒಂದಕ್ಕೆ ಮೂರು ಅನ್ನೋ ಬಾಜಿ ಕೇಳಿಬರುತ್ತಿದೆ. ಒಂದು ಲಕ್ಷ ಕಾಂಗ್ರೆಸ್ ಕಾರ್ಯಕರ್ತರು ಬೆಟ್ ಕಟ್ಟಿದರೆ, ಜೆಡಿಎಸ್ ಕಾರ್ಯಕರ್ತರು ಮೂರು ಲಕ್ಷ ಕೊಡಲು ಸಿದ್ಧರಿದ್ದಾರೆ. ಜೊತೆಗೆ ಜೆಸಿಬಿ, ಬೈಕ್, ನೀರಿನ ಮೋಟರ್, ಬಿಲ್ಡಿಂಗ್ ಹಾಗೂ ಪಂಚಾಯ್ತಿ ಸದಸ್ಯತ್ವವನ್ನು ಬಾಜಿ ಕಟ್ಟಿರೋದು ರಾಜಕೀಯ ಜಿದ್ದಾಜಿದ್ದಿಯ ಪ್ರಮಾಣ ತೋರಿಸುತ್ತದೆ. ಬೆಟ್ಟಿಂಗ್ ಕಟ್ಟುವುದು ಅಪರಾಧವಾದರೂ ಈ ಬೆಟ್ಟಿಂಗ್ ಸ್ನೇಹಪರವಾಗಿ ನಡೆಯೋದ್ರಿಂದ ಪೊಲೀಸರ ಕೈಗೆ ಸಿಕ್ಕಿಬೀಳೋ ಸಾಧ್ಯತೆ ಕಡಿಮೆ. ಹಾಗಾಗಿ ಹಳ್ಳಿ ಹಳ್ಳಿಗಳಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ ಅಂತಾನೇ ಹೇಳಬಹುದು. ನಾಳೆ ಸೋಲು ಗೆಲುವಿನ ಜೊತೆ ಎಲ್ಲಾ ಬೆಟ್ಟಿಂಗ್ ಲಾಭ ನಷ್ಟಗಳು ಬಯಲಾಗಲಿವೆ.

Leave a Reply