ರಾಜ್ಯದಲ್ಲಿ ಶುರುವಾಯ್ತು ಜಾತಿ ಲೆಕ್ಕಾಚಾರ

ಡಿಜಿಟಲ್ ಕನ್ನಡ ಟೀಮ್:

ಬಹುಮತ ಸಾಬೀತು ಮಾಡಲು ರಾಜ್ಯ ಬಿಜೆಪಿ ನಾಯಕರ ಜೊತೆ ಕೇಂದ್ರ ಸರ್ಕಾರವೇ ಪರದಾಡ್ತಿದೆ. ಬಿಜೆಪಿ ಲೆಕ್ಕಾಚಾರ ಎಂದರೆ ಲಿಂಗಾಯತ ಶಾಸಕರನ್ನು ಸೆಳೆದು ರಾಜೀನಾಮೆ ಕೊಡಿಸಬಹುದು ಎನ್ನುವುದು. ಬಿಜೆಪಿ ಸಮುದಾಯ ಕಾಂಗ್ರೆಸ್‌ನ ಧರ್ಮ ರಾಜಕಾರಣದ ವಿರುದ್ಧ ಸೆಟೆದು ನಿಂತಿದ್ದು, ಚುನಾವಣೆಯಲ್ಲೂ ನಮ್ಮ ಬೆಂಬಲಕ್ಕೆ ನಿಂತಿದೆ. ನಾವು ನೂತನ ಶಾಸಕರು ಅಥವಾ ಕಾಂಗ್ರೆಸ್ ವಿರುದ್ಧ ಸ್ವಲ್ಪ ಅಸಮಾಧಾನ ಇರುವ ಶಾಸಕರಿಗೆ ಗಾಳ ಹಾಕಿದರೆ ಬಹುಮತ ಸಾಬೀತಿಗೆ ಯಾವುದೇ ಸಮಸ್ಯೆ ಆಗೋದಿಲ್ಲ ಅನ್ನೋ ಲೆಕ್ಕಾಚಾರ ಬಿಜೆಪಿ ನಾಯಕರ ಭರವಸೆ.

ಲೆಕ್ಕಾಚಾರ ಮನದಟ್ಟು ಮಾಡಿಕೊಂಡಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ, ಜಾತಿ‌ ಆಧಾರಿತವಾದ ತಿರುಗೇಟು ನೀಡಲು ಪ್ಲಾನ್ ಮಾಡಿದ್ದಾರೆ. ಬಿಜೆಪಿ ನಾಯಕರು ಲಿಂಗಾಯತ ಶಾಸಕರನ್ನು ಸೆಳೆಯಲು ಸಂಚು ರೂಪಿಸಿದ್ದಕ್ಕೆ ತಕ್ಕ ಶಾಸ್ತಿ ಮಾಡಲೇ ಬೇಕೆಂದು ಕುಮಾರಸ್ವಾಮಿ ಕೂಡ ಟೊಂಕ ಕಟ್ಟಿ ನಿಂತಿದ್ದಾರೆ.. ಜಾತಿ ಲೆಕ್ಕಾಚಾರ ಅಸ್ತ್ರವನ್ನೇ ತಿರುಗುಬಾಣ ಮಾಡ್ತಿದ್ದು, ಚುನಾವಣೆಯಲ್ಲಿ ಅಭೂತಪೂರ್ವವಾಗಿ ಬೆಂಬಲ ನೀಡಿದ ಒಕ್ಕಲಿಗ ಸಮುದಾಯದ ಕಾರ್ಡ್ ಪ್ಲೇ ಮಾಡಲು ನಿರ್ಧಾರ ಮಾಡಲಾಗಿದೆ. ಬಿಜೆಪಿ ನಾಯಕರು ಲಿಂಗಾಯತ ಶಾಸಕರನ್ನು ಸೆಳೆದರೇ ಅದೇ ಬಿಜೆಪಿಯಲ್ಲಿರುವ ಒಕ್ಕಲಿಗ ಶಾಸಕರನ್ನು ಸೆಳೆದು ಟಾಂಗ್ ಕೊಡೋದು ಪಕ್ಕಾ ಆಗಿದೆ.

ಈಗಾಗಲೇ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾಗಿದ್ದು, ಉಳಿದಂತೆ ಬೇರೆ ಸಮುದಾಯಕ್ಕೆ ಸೇರಿದ ಅಭ್ಯರ್ಥಿಗಳೂ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಹಾಗೂ ಜೆಡಿಎಸ್‌ನಲ್ಲಿರುವ ಲಿಂಗಾಯತ ಶಾಸಕರು ಬಿಜೆಪಿ ಬೆಂಬಲಕ್ಕೆ ನಿಂತರೆ, ಒಕ್ಕಲಿಗ ಸಮುದಾಯದ ನಾಯಕರು ಬಿಜೆಪಿಯಲ್ಲಿದ್ದರೂ ಜೆಡಿಎಸ್ ಬೆಂಬಲಿಸಿಸೋದು ಶತಸಿದ್ಧ. ಯಾಕಂದ್ರೆ ಬಿಜೆಪಿ ಲಿಂಗಾಯತ ನಾಯಕರನ್ನು ಸೆಳೆದು ಬಿಜೆಪಿ ಲಿಂಗಾಯತರ ದರ್ಬಾರ್ ಜಾಸ್ತಿಯಾಗುವ ಭೀತಿಯಲ್ಲಿ‌ ಒಕ್ಕಲಿಗ ಶಾಸಕರು ಅನಿವಾರ್ಯವಾಗಿ ಜೆಡಿಎಸ್ ಬೆಂಬಲಿಸಲಿದ್ದಾರೆ‌. ಈಗಾಗಲೇ ಈ ಪ್ರಕ್ರಿಯೆಗೆ ಚಾಲನೆ ಸಿಕ್ಕಿದ್ದು, ಹಾಸನದಿಂದ ಆಯ್ಕೆಯಾಗಿರುವ ಪ್ರೀತಂಗೌಡ ಅವರಿಗೆ ಕುಮಾರಸ್ವಾಮಿ ಗಾಳ ಹಾಕಿದ್ದು, ಮಾರುಕತೆ ಕೂಡ ನಡೆಸಲಾಗಿದೆ. ಪ್ರೀತಂ ಗೌಡ ಕೂಡ ಜೆಡಿಎಸ್ ಸೇರ್ಪಡೆಗೆ ಒಲವು ತೋರಿಸಿದ್ದು, ಒಂದು ವೇಳೆ ಜಾತಿ ಆಧಾರಿತವಾಗಿ ಶಾಸಕರನ್ನು ಸೆಳೆದು ಬಿಟ್ಟರೆ, ಒಕ್ಕಲಿಗ ಶಾಸಕರು ಬಿಜೆಪಿಯಿಂದ ದೂರ ಆಗೋದು ಕೂಡ ಅಷ್ಟೇ ಸತ್ಯ ಎನ್ನಲಾಗ್ತಿದೆ..

Leave a Reply