ನಾಳೆಯೇ ಬಹುಮತ ಸಾಬೀತು, ಸುಪ್ರೀಂ ಆದೇಶದ ಮುಖ್ಯಾಂಶಗಳೇನು?

ಡಿಜಿಟಲ್ ಕನ್ನಡ ಟೀಮ್:

ಕರ್ನಾಟಕ ರಾಜ್ಯ ರಾಜಕೀಯದಲ್ಲಿನ ಹೈಡ್ರಾಮ ನಾಳೆ ತಾರ್ಕಿಕ ಅಂತ್ಯ ಕಾಣುವ ಸೂಚನೆಗಳು ಮೂಡುತ್ತಿವೆ. ಬಿಜೆಪಿಗೆ ಸರಕಾರ ರಚಿಸಲು ಆಹ್ವಾನ ನೀಡಿ ಬಹುಮತ ಸಾಬೀತಿಗೆ 15 ದಿನಗಳ ಕಾಲಾವಾಶ ಕೊಟ್ಟಿರುವ ರಾಜ್ಯಪಾಲರ ತೀರ್ಮಾನವನ್ನು ಪ್ರಶ್ನಿಸಿ ಜೆಡಿಎಸ್ ಹಾಗೂ ಕಾಂಗ್ರೆಸ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ‘ನಿಮ್ಮ ಬಳಿ ಬಹುಮತ ಸಾಬೀತು ಮಾಡುವ ಸಾಮರ್ಥ್ಯವಿದ್ದರೆ ನಾಳೆಯೇ ಮಾಡಿ. ನಾಳೆ ಸಂಜೆ 4 ಗಂಟೆ ಹೊತ್ತಿಗೆ ಬಹುಮತ ಸಾಬೀತು ಪಡೆಸಿ’ ಎಂದು ಆದೇಶ ನೀಡಿದೆ. ಇದರೊಂದಿಗೆ ಬಹುಮತ ಸಾಬೀತಿಗೆ ಎರಡು ವಾರಗಳ ಕಾಲಾವಕಾಶವಿದೆ ಎಂದು ನಿರಾಳವಾಗಿದ್ದ ಬಿಜೆಪಿಗೆ ನಾಳೆ ಅಗ್ನಿ ಪರೀಕ್ಷೆ ಎದುರಾಗಿದೆ.
ಎರಡೂ ಬಣಗಳ ವಾದ ಆಲಿಸಿದ ಸುಪ್ರೀಂ ಕೋರ್ಟ್, ಒಟ್ಟು ಆರು ಪ್ರಮುಖ ನಿರ್ದೇಶನ ನೀಡಿದ್ದು ಅವುಗಳು ಹೀಗಿವೆ…
  • ನಾಳೆ ಸಂಜೆ ನಾಲ್ಕು ಗಂಟೆ ಹೊತ್ತಿಗೆ ಬಹುಮತ ಸಾಬೀತು ಮಾಡಬೇಕು.
  • ಬಹುಮತ ಸಾಬೀತು ಪ್ರಕ್ರಿಯೆ ಬಗ್ಗೆ ಹಂಗಾಮಿ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳಬಹುದು.
  • ಬಿಜೆಪಿ ಗೌಪ್ಯ ಮತದಾನದ ಮನವಿ ತಿರಸ್ಕಾರ.
  • ಯಡಿಯೂರಪ್ಪನವರು ಆಡಳಿತಾತ್ಮಕವಾಗಿ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ.
  • ಎಲ್ಲ ಶಾಸಕರ ರಕ್ಷಣೆ ಡಿಜಿಪಿ ಹೊಣೆ.
  • ಆಂಗ್ಲೊ ಇಂಡಿಯನ್ ಸದಸ್ಯರ ನಾಮನಿರ್ದೇಶನ ಮಾಡುವಂತಿಲ್ಲ.

Leave a Reply