ಸಾಲ ಮನ್ನಾ ಮಾಡದಿದ್ರೆ ನಾನೇ ರಾಜಿನಾಮೆ ಕೊಡ್ತೀನಿ: ಕುಮಾರಸ್ವಾಮಿ

ಡಿಜಿಟಲ್ ಕನ್ನಡ ಟೀಮ್:

‘ರೈತರ ಸಾಲ ಮನ್ನಾ ಮಾಡುತ್ತೇನೆ. ನನಗೆ ಸಮಯಾವಕಾಶಬೇಕು. ತಕ್ಷಮವೇ ರೈತರ ಸಾಲ ಮನ್ನಾ ಸಾಧ್ಯವಿಲ್ಲ. ರೈತರ ಸಾಲ ಮನ್ನಾ ಮಾಡದಿದ್ದರೆ, ನಾನೇ ರಾಜಿನಾಮೆ ನೀಡುತ್ತೇನೆ…’ ಇದು ರಾಜ್ಯದ ನೂತನ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಇಂದು ವಿಧಾನಸೌಧದಲ್ಲಿ ಕೊಟ್ಟ ಹೇಳಿಕೆ.
ಸಾಲ ಮನ್ನಾ ವಿಚಾರವಾಗಿ ನಾಳೆ ಬಿಜೆಪಿ ಕರೆ ನೀಡಿರುವ ರಾಜ್ಯ ಬಂದ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದು ಹೀಗೆ… ‘ಸರ್ಕಾರದಲ್ಲಿ ಇನ್ನು ಸಚಿವ ಸಂಪುಟ ವಿಸ್ತರಣೆಯಾಗಬೇಕು. ಇನ್ನು ಒಂದು ವಾರಗಳ ಕಾಲ ಇದೇ ಪ್ರಕ್ರಿಯೆ ನಡೆಯುತ್ತದೆ. ಆ ನಂತರ ಕಾಂಗ್ರೆಸ್ ನಾಯಕರೊಂದಿಗೆ ಚರ್ಚಿಸಿ ಸಾಲ ಮನ್ನಾ ಮಾಡಬೇಕಿದೆ. ಹೀಗೆ ಏಕಾಏಕಿ ಸಾಲ ಮನ್ನಾ ಮಾಡಿ ಎಂದು ಒತ್ತಡ ಹೇರುವುದು ಸರಿಯಲ್ಲ. ನಾನು ಅಧಿಕಾರಕ್ಕೆ ಅಂಟಿಕೊಂಡು ಕೂರುವವನಲ್ಲ. ಸಾಲ ಮನ್ನಾ ಮಾಡದಿದ್ದರೆ ನಾನೇ ರಾಜಿನಾಮೆ ಕೊಟ್ಟು ಹೋಗುತ್ತೇನೆ. ನನಗೆ ಸ್ವಲ್ಪ ಸಮಯಾವಕಾಶ ಬೇಕು.’
ಈ ಮಧ್ಯೆ ನಾಳೆ ಬಂದ್ ಕುರಿತಾಗಿ ನಗರ ಪೊಲಿಸ್ ಆಯುಕ್ತ ಸುನೀಲ್ ಕುಮಾರ್ ಬಂದ್ ಮಾಡುವವರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ‘ಬಂದ್ ಗೆ ಕರೆ ನೀಡಿರುವುದು ಕಾನೂನು ಹಾಗೂ ಸಂವಿಧಾನ ಬಾಹೀರ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ನಾಳೆ ಬಂದ್ ಮಾಡಿದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ವಾರ್ನಿಂಗ್ ಕೊಟ್ಟಿದ್ದಾರೆ.

Leave a Reply