ಮೋದಿ ವಿರುದ್ಧ ಪೇಜಾವರ ಶ್ರೀ ಕಿಡಿಕಾರಲು ಕಾರಣ..!?

HH Sri Vishvesha Tirtha Swamiji of Pejawar Mutt calls on the Prime Minister, Shri Narendra Modi, in New Delhi on July 22, 2014.

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಾಧು ಸಂತರು ಎಂದರೆ ತುಸು ಹೆಚ್ಚೆ ಗೌರವ ಕೊಡುತ್ತದೆ. ಅದಕ್ಕೆ ಕಾರಣ ನಾವೇನೂ ಹೊಸದಾಗಿ ಬಿಡಿಸಿ ಹೇಳಬೇಕಿಲ್ಲ, ಆ ಪಕ್ಷದ ಹಿಂದುತ್ವ ಅಜೆಂಡಾ. ಜೊತೆಗೆ ತನ್ನ ಮಾತೃ ಸಂಸ್ಥೆಯಾದ ಆರ್‌ಎಸ್‌ಎಸ್ ಅಜೆಂಡಾ ಕೂಡ ಹೌದು. ಹೀಗಾಗಿಯೇ ಸಾಕಷ್ಟು ಸಾಧು ಸಂತರು ಸಂಸತ್‌ಗೆ ಆಯ್ಕೆಯಾಗುವ ಮೂಲಕ ಸಕ್ರಿಯ ರಾಜಕಾರಣಕ್ಕೂ ಎಂಟ್ರಿಯಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿ ಆಗಿಯೇ ಆಡಳಿತ ನೀಡುತ್ತಿದ್ದಾರೆ.

ಆದ್ರೀಗ ಪೇಜಾವರ ಮಠದ ಶ್ರೀ ಗಳು ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ದಾಳಿ ಮಾಡಿದ್ದಾರೆ. ಜೊತೆಗೆ ರಾಜ್ಯ ಸರ್ಕಾರದ ಪರವಾಗಿ ಹೇಳಿಕೆ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ.

‘ಕುಮಾರಸ್ವಾಮಿ ಅನುಭವಿ ರಾಜಕಾರಣಿಯಾಗಿದ್ದು, ರಾಜ್ಯ ಸರ್ಕಾರ ಪೂರ್ಣಾವಧಿ ಅಧಿಕಾರ ಮಾಡಲಿ ಅಂತ ಹಾರೈಸುತ್ತೇನೆ.  ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ವಿಕೃತಿಯಾಗಿದ್ದು, ರಾಜಕಾರಣಿಗಳು ರೆಸಾರ್ಟ್, ಆಪರೇಷನ್‌ನಲ್ಲಿ ತಲ್ಲೀನರಾಗಿದ್ದಾರೆ. ಒಂದು ವೇಳೆ ರಾಜ್ಯ ಸರ್ಕಾರದಲ್ಲಿ ಗೊಂದಲ ನಿರ್ಮಾಣವಾದ್ರೆ ರಾಷ್ಟ್ರಪತಿ ಆಡಳಿತ ಹೇರಿಕೆ ಮಾಡೋದು ಬೇಡ, ಸರ್ವ ಪಕ್ಷ ಸರ್ಕಾರ ಜಾರಿಗೆ ಬರುವ ಮೂಲಕ ದೇಶಕ್ಕೆ ಮಾದರಿಯಾಗಬೇಕು. ಮೋದಿ ಸರ್ಕಾರ ಹಲವು ಕೆಲಸ ಮಾಡಿದೆ, ಆದ್ರೆ ಕೇಂದ್ರ ಸರ್ಕಾರದ ಬಗ್ಗೆ ಜನರಿಗೆ ಬಹಳ ನಿರೀಕ್ಷೆ ಇತ್ತು, ಹೀಗಾಗಿ ಜನರ ನಿರೀಕ್ಷೆಯ ಮಟ್ಟಕ್ಕೆ ಸಾಧನೆ ಮಾಡಲು ಆಗಲಿಲ್ಲ ಎಂಬ ಬೇಸರವಿದೆ, ರಾಮ ಮಂದಿರ ನಿರ್ಮಾಣಕ್ಕಿಂತ ಮೊದಲು ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಬೇಕು. ಗಂಗಾ ಶುದ್ಧೀಕರಣ ಕೂಡ ಸಂಪೂರ್ಣವಾಗಿ ಆಗಲಿಲ್ಲ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಬಾರಿಯೂ ರಂಜಾನ್ ಪ್ರಯುಕ್ತ ಇಫ್ತಾರ್ ಕೂಟ ಆಯೋಜನೆ ಮಾಡಬೇಕೆಂಬ ಭಾವನೆ ಇದೆ, ಮುಸಲ್ಮಾನ ನಾಯಕರು, ಪ್ರಮುಖರು ಒಪ್ಪಿದರೆ ಸತ್ಕಾರ ಕೂಟ ಮಾಡುತ್ತೇನೆ.

ವಿಶ್ವೇಶತೀರ್ಥ ಸ್ವಾಮೀಜಿ ಅಸಮಾಧಾನಕ್ಕೆ ಮೂರು ಕಾರಣ…

  • ಪ್ರಧಾನಿ ಮೋದಿ ಯಾವುದಾದರೂ ರಾಜ್ಯಕ್ಕೆ ಪ್ರವಾಸ ಕೂಗೊಂಡ ವೇಳೆ ಅಲ್ಲಿನ ದೇಗುಲ, ಮಠ ಮಾನ್ಯಗಳಿಗೆ ಭೇಟಿ ನೀಡೋದು ಸಾಮಾನ್ಯ. ಆದರೆ ಈ ಬಾರಿ ಕರ್ನಾಟಕ ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳ ಶ್ರೀ ಮಂಜುನಾಥ ಸನ್ನಿಧಿಗೆ ಭೇಟಿ ಕೊಟ್ಟಿದ್ರು. ಆದ್ರೆ ಅಲ್ಲೇ ಪಕ್ಕದಲ್ಲೇ ಇದ್ದ ಉಡುಪಿಗೆ ಭೇಟಿ ನೀಡಿ ಆರ್ಶೀವಾದ ಪಡೆಯಲು ಪ್ರಧಾನಿ ಮನಸ್ಸು ಮಾಡಲಿಲ್ಲ. ಇನ್ನೊಮ್ಮೆ ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಆಗಮಿಸಿದ್ರು, ಆ ವೇಳೆ ಉಡುಪಿಗೆ ಭೇಟಿ ನೀಡುತ್ತಾರೆ ಎಂದು ರಾಜ್ಯ ನಾಯಕರೇ ಹೇಳಿಕೊಂಡಿದ್ರು. ಆದರೆ  ಆಗಲೂ ಭದ್ರತೆಯ ನೆಪ ಹೇಳಿ ಪ್ರಧಾನಿ ಭೇಟಿ ಮಾಡಲಿಲ್ಲ. ಇದರಿಂದ ಪೇಜಾವರ ಶ್ರೀಗಳು ಮೋದಿ ವಿರುದ್ಧ ಕೋಪಿಸಿಕೊಂಡಿದ್ದಾರೆ ಅನ್ನೊ ಮಾಹಿತಿ ಇದೆ.
  • ಇನ್ನು ಎರಡನೇ ಕಾರಣ ಅಂದ್ರೆ ಉಮಾ ಭಾರತಿ, ಕಟ್ಟರ್ ಹಿಂದುತ್ವವಾದಿಯಾದ ಉಮಾ ಭಾರತಿ, ಪೇಜಾವರ ಶ್ರೀಗಳ ನೆಚ್ಚಿನ ಶಿಷ್ಯೆ. ಆದರೆ ಮೋದಿ ಸರ್ಕಾರ ರಚನೆಯಾದ ವೇಳೆ ಉಮಾ ಭಾರತಿಗೆ ಜಲಸಂಪನ್ಮೂಲ ಖಾತೆ ವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ತದನಂತ್ರ ಅವರಿಗೆ ಕುಡಿಯುವ ನೀರು ಕೊಟ್ಟು ಜಲಸಂಪನ್ಮೂಲ ಖಾತೆ ಕಿತ್ತುಕೊಂಡರು. ಮೊದಲು ಸರ್ಕಾರದಲ್ಲಿ ತುಂಬಾ ಸಕ್ರಿಯವಾಗಿದ್ದ ಉಮಾ ಭಾರತಿ ಮೋದಿ ನಡೆಯಿಂದ ಬೇಸರಗೊಂಡು ತಟಸ್ಥ ನಿಲುವು ಪ್ರದರ್ಶನ ಮಾಡುತ್ತಿದ್ದಾರೆ. ಹಾಗಾಗಿ ಶಿಷ್ಯೆಯನ್ನು ಸೂಕ್ತ ರೀತಿಯಲ್ಲಿ ನಡೆಸಿಕೊಳ್ಳುವಲ್ಲಿ ಮೋದಿ ಅಸಡ್ಡೆ ಮಾಡಿದರು ಅನ್ನೋ ಕೋಪವೂ ಪೇಜಾವರ ಶ್ರೀಗಳಿಗೆ ಇದೆ ಅನ್ನಲಾಗ್ತಿದೆ.
  • ಕೊನೆಯ ಹಾಗು ಮೂರನೇ ಕಾರಣ ಅಂದ್ರೆ ವಿಶ್ವ ಹಿಂದೂ ಪರಿಷತ್ ನಾಯಕ ಪ್ರವೀಣ್ ತೊಗಾಡಿಯಾರನ್ನು ಬಿಜೆಪಿ ಮೂಲೆಗುಂಪು ಮಾಡಿದ್ದು. ಉಡುಪಿಯಲ್ಲಿ ಮಹಾ ಸಮ್ಮೇಳನ ನಡೆದ ಬಳಿಕ ರಾಜಸ್ಥಾನದಲ್ಲಿ ದೊಡ್ಡ ಹೈಡ್ರಾಮವೇ ನಡೆದು, ಪೊಲೀಸರು ಅರೆಸ್ಟ್ ಮಾಡಲು ಮನೆ ಬಳಿ ಜಮಾಯಿಸಿದ್ರು. ಈ ವೇಳೆ ತಪ್ಪಿಸಿಕೊಂಡು ಹೋಗಿದ್ದ ಪ್ರವೀಣ್ ತೊಗಾಡಿಯಾ ಒಂದು ದಿನದ ಬಳಿಕ ಆಸ್ಪತ್ರೆಯಲ್ಲಿ ಪತ್ತೆಯಾಗಿದ್ರು. ಪಾರ್ಕ್ ಒಂದರಲ್ಲಿ ಮೂರ್ಛೆ ಹೋದ ಸ್ಥಿತಿಯಲ್ಲಿ ಸಿಕ್ಕಿದ್ರು ಅಂತ ಪೊಲೀಸರು ಹೇಳಿದ್ರು. ಮೋದಿ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಕೊಲೆ ಬೆದರಿಕೆ ಇದೆ ಎಂದು ಆರೋಪಿಸಿದ್ರು. ಪ್ರವೀಣ್ ಭಾಯ್ ತೊಗಾಡಿಯಾ ಕೂಡ ಪೇಜಾವರ ಶ್ರೀಗಳಿಗೆ ಆತ್ಮೀಯರಾಗಿದ್ದು, ಇವೆಲಾ ಘಟನೆಯಿಂದ ನೊಂದು ಮಾತನಾಡಿದ್ದಾರೆ ಎನ್ನಲಾಗ್ತಿದೆ.

Leave a Reply