ನಿಲ್ಲದ ಅಸಮಾಧಾನ! ಸಿದ್ದು ಮುಂದೆ ಎಂ.ಬಿ ಪಾಟೀಲ್ ಕಣ್ಣೀರು

ಡಿಜಿಟಲ್ ಕನ್ನಡ ಟೀಮ್:

ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಲಾಭಿ ನಡೆಸಿದ್ದ ಮಾಜಿ ಸಚಿವ ಎಂ.ಬಿ ಪಾಟೀಲ್ ಅವರಿಗೆ ಸಚಿವ ಸಂಪುಟದಿಂದಲೇ ಕೈಬಿಟ್ಟಿರುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಂಪುಟ ಸಚಿವ ಸ್ಥಾನದ ಪಟ್ಟಿಯಲ್ಲಿ ತಮ್ಮ ಹೆಸರು ಮುಂಚೂಣಿಯಲ್ಲಿದ್ದರೂ ತಮ್ಮನ್ನು ಕೈಬಿಟ್ಟಿದ್ದು ಯಾಕೆ ಎಂಬ ಪ್ರಶ್ನೆ, ಬೇಸರ ಅವರನ್ನು ಕಾಡುತ್ತಿದೆ. ಪರಿಣಾಮ ಎಂ.ಬಿ. ಪಾಟೀಲ್‌ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಕಣ್ಣೀರಿಟ್ಟಿದ್ದಾರೆ.

ಗುರುವಾರ ಬೆಳಿಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ನಿವಾಸ ಕಾವೇರಿಗೆ ಬಂದ ಎಂ.ಬಿ. ಪಾಟೀಲ್‌, ಕಣ್ಣೀರು ಹಾಕುತ್ತಲೇ ಭೇಟಿ ಮಾಡಿ ಅಲ್ಲಿಂದ ತೆರಳಿದ್ದಾರೆ. ‘ಪಕ್ಷಕ್ಕಾಗಿ ಶ್ರಮಿಸಿದ್ದ. ನನ್ನನ್ನು ಕಡೆಗಣಿಸಿದ್ದು ಯಾಕೆ?’ ಎಂದು ಪಾಟೀಲ್‌ ಭಾವುಕರಾಗಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಸಿಗದೇ ಮುನಿಸಿಕೊಂಡಿರುವವರ ಸಂಖ್ಯೆ ದೊಡ್ಡದಾಗಿಯೇ ಇದೆ. ಅತೃಪ್ತ ನಾಯಕರು ಎಂ.ಬಿ ಪಾಟೀಲ್ ನಿವಾಸದಲ್ಲಿ ಸಭೆ ನಡೆಸಿದ್ದಾರೆ. ಈ ಸಭೆ ಅಸಮಾಧಾನಗೊಂಡ ನಾಯಕರ ಮುಂದಿನ ನಡೆ ಬಗ್ಗೆ ಕುತೂಹಲ ಮೂಡಿಸಿದೆ. ಸದ್ಯ ಬಾಕಿ ಉಳಿಸಿಕೊಂಡಿರುವ 6 ಸಚಿವ ಸ್ಥಾನಗಳಲ್ಲಿ ತಮಗೆ ದಲಿತ ಕೋಟಾದಲ್ಲಿ ಅವಕಾಶ ನೀಡಬೇಕು ಎಂದು ಧರ್ಮಸೇನಾ ಅವರು ಒತ್ತಾಯಿಸಿದ್ದಾರೆ.

ಬಾಕಿ ಇರುವ ಕೆಲವೇ ಸ್ಥಾನಗಳಿಗೆ ಅತೃಪ್ತರ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಅಂತಿಮ ಪ್ರಯತ್ನವಾಗಿ ಒತ್ತಡದ ತಂತ್ರ ಮುಂದುವರಿಯುತ್ತಿದೆ.

Leave a Reply