ಮೋದಿ ಹತ್ಯೆಗೆ ಮಾವೋವಾದಿಗಳ ಸಂಚು!

ಡಿಜಿಟಲ್ ಕನ್ನಡ ಟೀಮ್:

ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರನ್ನು ಹತ್ಯೆ ಮಾಡಿದಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿರುದ್ಧ ಹತ್ಯೆ ಸಂಚು ರೂಪಿಸಲಾಗಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಪುಣೆ ಪೊಲೀಸರು ಬಹಿರಂಗ ಪಡಿಸಿದ್ದಾರೆ.

ನಿಷೇಧಿತ ಮಾವೋವಾದಿ ಸಿಪಿಐ(ಎಂ) ಸಂಘಟನೆಗೆ ಸೇರಿದ ಐವರನ್ನು ಪೊಲೀಸರು ಬುಧವಾರವಷ್ಟೇ ಬಂಧಿಸಿದ್ದರು. ಈ ಬಂದಿತರ ಪೈಕಿ ಓರ್ವನ ಮನೆಯಲ್ಲಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಪತ್ರ ದೊರೆತಿದೆ.

ದಲಿತ ಸಂಘಟನೆ ನಾಯಕ ಸುಧೀರ್‌ ಧವಳೆ, ವಕೀಲ ಸುರೇಂದ್ರ ಗಾಡ್ಲಿಂಗ್‌, ಸಂಘಟನೆ ಕಾರ್ಯಕರ್ತರಾದ ಮಹೇಶ್‌ ರೌತ್‌, ಶೋಮ ಸೆನ್‌ ಹಾಗು ರೋನಾ ವಿಲ್ಸನ್‌ರನ್ನು ಭೀಮಾ- ಕೋರೆಗಾಂವ್‌ ಗಲಭೆ ಮತ್ತು ಈಲ್ಗರ್‌ ಪರಿಶದ್‌ ಸಂಬಂಧ ಬಂಧಿಸಲಾಗಿತ್ತು.

ಮೋದಿ ಹತ್ಯೆಗೆ ಎಂಟು ಕೋಟಿ ರು ವೆಚ್ಚ ತಗುಲಲಿದ್ದು ಎಂ-4 ರೈಫಲ್‌ ಹಾಗು ನಾಲ್ಕು ಲಕ್ಷ ಸುತ್ತು ಗುಂಡುಗಳನ್ನು ಖರೀದಿ ಮಾಡಬೇಕು. ರಾಜೀವ್‌ ಗಾಂಧಿ ಹತ್ಯೆ ಮಾದರಿಯಲ್ಲಿ ಮೋದಿ ರೋಡ್ ಶೋ ನಡೆಸುವಾಗ ಆತ್ಮಹತ್ಯೆ ಬಾಂಬ್ ದಾಳಿ ನಡೆಸಬೇಕು ಎಂದು ಪತ್ರದಲ್ಲಿ ಉಲ್ಲೆಖ ಮಾಡಲಾಗಿದೆ.

Leave a Reply