ಚೀನಾದಲ್ಲಿ ಮೋದಿ! ವ್ಯಾಪಾರ ಅಸಮತೋಲನ ತಗ್ಗಿಸಲು ಭಾರತದಿಂದ ಮೂರು ಹೊಸ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್:

ಕಳೆದ ಆರು ವಾರಗಳಲ್ಲಿ ಮೋದಿ ಎರಡನೇ ಬಾರಿಗೆ ಚೀನಾ ಪ್ರವಾಸ ಕೈಗೊಂದಿದ್ದಾರೆ. ಕಳೆದ ಬಾರಿ ಅನೌಪಚಾರಿಕ ಸಭೆಗಾಗಿ ಪ್ರವಾಸ ಮಾಡಿದ್ದ ಮೋದಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆಗೆ ಒತ್ತು ನೀಡಿದ್ದರು. ಈ ಬಾರಿಯ ಮೋದಿ ಚೀನಾ ಪ್ರವಾಸ ಮತ್ತಷ್ಟು ಮಹತ್ವ ಪಡೆದುಕೊಂಡಿವೆ. ಕಾರಣವೇನೆಂದರೆ…

ವ್ಯಾಪಾರ ಅಸಮತೋಲನ ಸರಿತೂಗಿಸಲು: ಹೌದು, ಭಾರತ ಹಾಗೂ ಚೀನಾ ನಡುವಣ ವ್ಯಾಪಾರ ಅಸಮತೋಲನ ಭಾರಿ ಪ್ರಮಾಣದಲ್ಲಿದೆ. ಚೀನಾಕ್ಕೆ ರಫ್ತು ಪ್ರಮಾಣಕ್ಕಿಂತ ಆಮದು ಪ್ರಮಾಣ ಹೆಚ್ಚಾಗಿದ್ದು ಇದರಿಂದ ಟ್ರೇಡ್ ಡೆಫಿಸಿಟ್ (ವ್ಯಾಪಾರ ಅಸಮತೋಲನ) ಹೆಚ್ಚಾಗಿದೆ. 2013ರಲ್ಲಿ 38.72 ಬಿಲಿಯನ್ ಡಾಲರ್ ನಷ್ಟಿದ್ದ ಇದರ ಪ್ರಮಾಣ 2017ರಲ್ಲಿ 51 ಬಿಲಿಯನ್ ಡಾಲರ್ ಗೆ ಏರಿತ್ತು. 2018ರಲ್ಲಿ 62.94 ಬಿಲಿಯನ್ ಡಾಲರ್ ಗೆ ವಿಸ್ತತರಣೆಯಾಗಬಹುದು.

ಭಾರತದಿಂದ ಹೊಸ ಅಸ್ತ್ರ ಪ್ರಯೋಗ: ಉಭಯ ರಾಷ್ಟ್ರಗಳ ನಡುವಣ ವ್ಯಾಪಾರ ಅಸಮತೋಲನ ತಗ್ಗಿಸಲು ಭಾರತ ಈ ಬಾರಿ ಮೂರು ಹೊಸ ಅಸ್ತ್ರ ಪ್ರಯೋಗಿಸಲಿದೆ. ಅದುವೇ ಕೃಷಿ, ಐಟಿ ಮತ್ತು ಫಾರ್ಮಸಿಟಿಕಲ್. ಸದ್ಯ ಭಾರತ ಐಟಿ ಮತ್ತು ಫಾರ್ಮಸಿಟಿಕಲ್ ಕ್ಷೇತ್ರದಲ್ಲಿ ಚೀನಾ ನಿಗದಿ ಪಡಿಸಿರುವ ಟಾರಿಫ್ (ಸುಂಕ) ಪ್ರಮಾಣ ಹೆಚ್ಚಾಗಿದ್ದು, ಇದನ್ನು ತೆರವುಗೊಳಿಸಬೇಕು ಎಂದು ಭಾರತ ಚೀನಾ ಮುಂದೆ ಪ್ರಸ್ತಾಪ ಇಟ್ಟಿದೆ.

ಭಾರತ ಕೃಷಿ ಕ್ಷೇತ್ರದಲ್ಲಿ ಅಕ್ಕಿ ಹಾಗೂ ಇತರೆ ಪ್ರಮುಖ ಉತ್ಪನ್ನಗಳನ್ನು ಚೀನಾ ಮಾರುಕಟ್ಟೆಗೆ ರಫ್ತು ಮಾಡಲಾರಂಭಿಸಿದರೆ ಭಾರತದ ರಫ್ತು ಪ್ರಮಾಣ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಇನ್ನು ಐಟಿ ಹಾಗೂ ಫಾರ್ಮಸಿಟಿಕಲ್ ಕ್ಷೇತ್ರದಲ್ಲೂ ಭಾರತದ ರಫ್ತು ಆರಂಭವಾದರೆ ಚೀನಾ ಜತೆಗಿನ ವ್ಯಾಪಾರ ಅಸಮತೋಲನ ಸಹಜವಾಗಿಯೇ ನಿಯಂತ್ರಣಕ್ಕೆ ಬರುತ್ತದೆ.

ಹೀಗಾಗಿ ಮೋದಿ ಅವರ ಈ ಬಾರಿಯ ಚೀನಾ ಪ್ರವಾಸದಲ್ಲಿ ಉಭಯ ದೇಶಗಳ ವ್ಯಾಪಾರ ಸುಧಾರಣೆಗೆ ಭಾರತ ಈ ಮೂರು ಅಸ್ತ್ರಗಳನ್ನು ಬಳಸುತ್ತಿದೆ.

Leave a Reply