ಜಯನಗರ ಕ್ಷೇತ್ರದಲ್ಲಿ ರವಿಕೃಷ್ಣರೆಡ್ಡಿ ಪಾತ್ರ ಏನು ಗೊತ್ತಾ!

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಶಾಸಕರಾಗಿದ್ದ ಬಿ.ಎನ್ ವಿಜಯ್ ಕುಮಾರ್ ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ನಿಧನರಾದರು. ಹೀಗಾಗಿ ಚುನಾವಣೆ ರದ್ದಾಗಿತ್ತು. ಆ ಬಳಿಕ ಜೂನ್ 11ರಂದು ಮತದಾನ ಹಾಗೂ ಜೂನ್ 13 ರಂದು ಮತ ಎಣಿಕೆ ಕಾರ್ಯ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿತ್ತು. ಅದರಂತೆ ಇಂದು ಮತದಾನ ಶಾಂತಿಯುತವಾಗಿ ನಡೆದಿದ್ದು, ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾಗಿದ್ದ ಮತದಾನ ಪ್ರಕ್ರಿಯೆ ಸಂಜೆ 6 ಗಂಟೆಗೆ ಅಂತ್ಯವಾಗಿದ್ದು, ಸುಮಾರು 53ರಷ್ಟು ಮತದಾನವಾಗಿದೆ. ಕಳೆದ ಬಾರಿ ಶೇಕಡಾ 55.93 ರಷ್ಟು ಮತದಾನ ನಡೆದಿತ್ತು. ಈ ಬಾರಿ ಮತದಾನ ಪ್ರಮಾಣ ಕಡಿಮೆ ಆಗಿದೆ. ಜೂನ್ 13 ರಂದು ಎಣಿಕೆ ಕಾರ್ಯ ನಡೆಯಲಿದೆ.

ಈ ಬಾರಿ ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಕಾಂಗ್ರೆಸ್‌ನಿಂದ ಅಖಾಡಕ್ಕೆ ಇಳಿದಿದ್ರೆ, ಬಿಜೆಪಿಯಿಂದ ದಿವಂಗತ ವಿಜಯ್ ಕುಮಾರ್ ಸಹೋದರ ಪ್ರಹ್ಲಾದ್ ಬಾಬು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ತಂದೆಯ ಅಭಿವೃದ್ಧಿ ಕಾರ್ಯಗಳನ್ನೇ ನೋಡಿ ನನಗೆ ಮತ ನೀಡ್ತಾರೆ ಅಂತ ಸೌಮ್ಯಾ ರೆಡ್ಡಿ ಹೇಳ್ತಿದ್ರೆ, ನಮ್ಮ ಅಣ್ಣ ಮೇಲಿನ ಅಭಿಮಾನ ಹಾಗೂ ಕ್ಷೇತ್ರವನ್ನು ಅಭಿವೃದ್ಧಿ ಮಾಡಿರೋದ್ರಿಂದ ಜನ ಗೆಲ್ಲಿಸ್ತಾರೆ ಅನ್ನೋ ಭರವಸೆಯಲ್ಲಿ ಬಿಜೆಪಿ ಅಭ್ಯರ್ಥಿ ಇದ್ದಾರೆ. ಇವರಿಬ್ಬರ ನಡುವೆ ಭ್ರಷ್ಟಾಚಾರ ನಿರ್ಮೂಲನೆ ಹೋರಾಟಗಾರ ಮಾಜಿ ಆಮ್ ಆದ್ಮಿ ಪಕ್ಷದ ಮುಖಂಡ ರವಿಕೃಷ್ಣ ರೆಡ್ಡಿ ಕಣದಲ್ಲಿದ್ದಾರೆ. ಭ್ರಷ್ಟಾಚಾರ ನಡೆಯುವ ಸ್ಥಳಕ್ಕೆ ಹೋಗಿ ಪ್ರತಿಭಟನೆ ಮಾಡೋದು, ಆಸ್ಪತ್ರೆ ಸ್ಟೇಷನ್‌ಗಳಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡೋದನ್ನೇ ಕಾಯಕ ಮಾಡಿಕೊಂಡು ಜನಸೇವೆಯ ಕನಸು ಕಾಣ್ತಿದ್ದಾರೆ. ಆದ್ರೆ ಈ ಬಾರಿ ರವಿಕೃಷ್ಣ ರೆಡ್ಡಿ ಅವರೇ ಸೋಲು ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸ್ತಾರೆ ಅಂದ್ರೆ ತಪ್ಪಾಗುವುದಿಲ್ಲ.

ಮೊದಲು ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಹಾಗೂ ಪಕ್ಷೇತರ ಅಭ್ಯರ್ಥಿ ರವಿಕೃಷ್ಣ ರೆಡ್ಡಿ ಸೇರಿದಂತೆ ಹಲವು ನಾಮಪತ್ರ ಸಲ್ಲಿಸಿದ್ರು‌ ಆ ಬಳಿಕ ಬಿಜೆಪಿ ಅಭ್ಯರ್ಥಿ ನಿಧರಾದ ಬಳಿಕ ಅಖಾಡ ಬದಲಾಗಿದ್ದು, ಕೇವಲ ಕಾಂಗ್ರೆಸ್ ಬಿಜೆಪಿ ನಡುವಿನ ಕದನವಾಗಿ ಮಾರ್ಪಟ್ಟಿದೆ. ಪಕ್ಷೇತರ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ನೀಡ್ತಾರೆ ಎನ್ನಲಾಗಿದ್ದ ರವಿಕೃಷ್ಣ ರೆಡ್ಡಿ ಕೂಡ ತಟಸ್ಥರಾದಂತೆ ಕಂಡು ಬಂದ್ರು. ಇದಕ್ಕೆ ಕಾರಣ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ. ಯಾವುದೇ ಪಕ್ಷಕ್ಕೆ ಬಹುಮತ ಬಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಸೇರಿ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ್ದಾರೆ. ಹೀಗಿರುವಾಗ ವಿರೋಧ ಪಕ್ಷವಾದ ಬಿಜೆಪಿ ಯಾವುದೇ ಕಾರಣಕ್ಕೂ ಗೆಲ್ಲಬಾರದು ಅನ್ನೋ ಕಾರಣಕ್ಕೆ‌ ಜೆಡಿಎಸ್‌ ಅಭ್ಯರ್ಥಿ ಕಣದಿಂದ ಸ್ವಯಂ ನಿವೃತಿ ಹೊಂದಿ ಕಾಂಗ್ರೆಸ್ ಬೆಂಬಲಿಸಿದರು. ಇನ್ನು ಕಳೆದ ರಾತ್ರಿ ಎಂಇಪಿ‌ ಅಭ್ಯರ್ಥಿ ಕೂಡ ಕಣದಿಂದ ಹಿಂದೆ ಸರಿದು ಕಾಂಗ್ರೆಸ್ ಬೆಂಬಲಿಸಿದ್ರು. ಇನ್ನುಳಿದಿದ್ದು ರವಿಕೃಷ್ಣ ರೆಡ್ಡಿ ಒಬ್ಬರು. ಅವರು ಕಣದಿಂದ ಹಿಂದೆ ಸರಿಯದೆ ಕಾಂಗ್ರೆಸ್ ಗೆಲುವಿಗೆ ಸಹಕಾರಿಯಾಗಿದ್ದಾರೆ.

ಕಾಂಗ್ರೆಸ್‌ಗೆ ಸಾಂಪ್ರದಾಯಿಕ ಮತಗಳು ಎಂದರೆ ಬಡವರು ದೀನ ದಲಿತರು, ಕೂಲಿ ಕಾರ್ಮಿಕರು ಸ್ಲಂ ನಿವಾಸಿಗಳು. ಬಿಜೆಪಿಗೆ ಸ್ವಲ್ಪ ವಿದ್ಯಾವಂತರು, ಯುವ ಜನತೆ ಮತ ನೀಡ್ತಾರೆ ಅನ್ನೋದು ರಾಜಕೀಯ ಪಂಡಿತರ ಲೆಕ್ಕಾಚಾರ. ಆದ್ರೆ ಜಯನಗರದಲ್ಲಿ ಈಗ ಪ್ರಜ್ಞಾವಂತ ಮತದಾರರಾದ ವಿದ್ಯಾರ್ಥಿಗಳು, ಉದ್ಯೋಗಿಗಳಹ, ಕಾಲೇಜು ವಿದ್ಯಾರ್ಥಿಗಳನ್ನು ಸಾಧ್ಯವಾದಷ್ಟರ ಮಟ್ಟಿಗೆ ರವಿಕೃಷ್ಣ ರೆಡ್ಡಿ ಸೆಳೆದಿದ್ದಾರೆ. ಹೀಗಾಗಿ ಅನಾಯಾಸವಾಗಿ ಬಿಜೆಪಿ ಪಾಲಾಗುತ್ತಿದ್ದ ಮತಗಳನ್ನು ಛಿದ್ರ ಮಾಡಿದ್ದಾರೆ. ಜೆಡಿಎಸ್‌ಗೆ ಬೀಳುತ್ತಿದ್ದ ಮತಗಳೂ ಕೂಡ ಕಾಂಗ್ರೆಸ್ ಅಭ್ಯರ್ಥಿಗೆ ಸಿಕ್ಕಿರೋದ್ರಿಂದ ಸೌಮ್ಯಾ ರೆಡ್ಡಿ ಗೆಲುವು ಸುಲಭ ಎನ್ನುವ ಮಾತುಗಳು ಕೇಳಿಮದಿವೆ. ಜೊತೆಗೆ ವಿಜಯ್ ಕುಮಾರ್ ಬದುಕಿದ್ದಾರೆ ರಾಜಕೀಯಕ್ಕೆ ಎಂಟ್ರಿಯನ್ನೇ ಕೊಡದ ಪ್ರಹ್ಲಾದ್ ಬಾಬು ಈಗ ಗೆಲ್ಲಿಸಿದರೂ ಏನು ಅಭಿವೃದ್ಧಿ ಮಾಡುತ್ತಾರೆ ಅನ್ನೋ ಗೊಂದಲ ಜನರನ್ನು ಕಾಡುತ್ತಿದೆಯಂತೆ. ಹಾಗಾಗಿ ರಾಜರಾಜೇಶ್ವರಿ ನಗರ ಗೆಲುವಿನ ಬಳಿಕ ಜಯನಗರಸಲ್ಲಿ ಗೆಲುವು ಸಾಧಿಸುವ ಮೂಲಕ‌ ವಿರೋಧ ಪಕ್ಷ ಮಣಿಸಿ ಸರ್ಕಾರ ಸಂಭ್ರಮಿಸೋದ್ರಲ್ಲಿ ನೋ ಡೋಟ್ ಎನಿಸುತ್ತದೆ.. ಉತ್ತರ ಬುಧವಾರ ಬರುಲಲಿದ್ದು ಅಧಿಕೃತ ಮುದ್ರೆಗಾಗಿ ಕಾಯಲೇ ಬೇಕು.

Leave a Reply