ನಲಪಾಡ್ ಗೆ ಸಿಕ್ತು ಷರತ್ತುಬದ್ಧ ಜಾಮೀನು

ಡಿಜಿಟಲ್ ಕನ್ನಡ ಟೀಮ್:

ಯು.ಬಿ.ಸಿಟಿಯ ಫರ್ಜಿ ಕೆಫೆಯಲ್ಲಿ ಉದ್ಯಮಿ ಪುತ್ರ ವಿದ್ವತ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಬಂಧಿತನಾಗಿದ್ದ ಮೊಹಮದ್ ನಲಪಾಡ್‌ಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.

ನಾಲ್ಕು ತಿಂಗಳಿನಿಂದ ಜೈಲಿನಲ್ಲೇ ಕೊಳೆಯುತ್ತಿದ್ದ ನಾಲಪಾಡ್ ಈಗ ಕೊಂಚ ನಿರಾಳ ಸಿಕ್ಕಿದೆ. ಪ್ರಕರಣದಲ್ಲಿ ನಾಲಪಾಡ್ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರ ಏಕಸದಸ್ಯ ನ್ಯಾಯಪೀಠವು, ಕೆಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.

ಅನುಮತಿಯಿಲ್ಲದೇ ರಾಜ್ಯದಿಂದ ಹೊರಗೆ ಹೋಗಬಾರದೆಂದು ಸೂಚಿಸಿರುವ ಹೈಕೋರ್ಟ್, 2 ಲಕ್ಷ ಮೌಲ್ಯದ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ನೀಡಬೇಕು ಎಂದು ನಿರ್ದೇಶನ ನೀಡಿದೆ.

ನಲಪಾಡ್‌ ಹಾಗೂ ಆತನ ಏಳು ಸಹಚರರು 2018ರ ಫೆಬ್ರುವರಿ 17ರಂದು ವಿದ್ವತ್‌ ಮೇಲೆ ಜಗ್, ಬಾಟಲಿ ಹಾಗೂ ಕಬ್ಬಿಣದ ರಿಂಗ್‌ಗಳಿಂದ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದರು. ನಂತರ ಫೆಬ್ರುವರಿ 19ರಂದು ನಲಪಾಡ್ ಅವರನ್ನು ಪೊಲೀಸರು ಬಂಧಿಸಿದ್ದರು. ಕರ್ನಾಟಕ ವಿಧಾನಸಭಾ ಚುನಾವಣೆ ಸಂಧರ್ಭದಲ್ಲಿ ನಡೆದ ಪ್ರಕರಣ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

Leave a Reply