ಪಿಡಿಪಿ ಜೊತೆ ಮೈತ್ರಿ ಕಡಿದುಕೊಂಡ ಬಿಜೆಪಿ‌ ಪ್ಲಾನ್ ಏನು?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ಪ್ರಚಂಡ ಹಿಂದುತ್ವದ ಆಧಾರದ ಮೇಲೆ ಜನ್ಮ ತಾಳಿರುವ ಪಕ್ಷ. ಆ ಪಕ್ಷದ ನಾಯಕರು ಮುಸ್ಲಿಮರ ಮತಗಳು ನಮಗೆ ಬೇಡವೇ ಬೇಡ ಎಂದು ನೇರವಾಗಿ ಸವಾಲು ಹಾಕುವಷ್ಟು ಹಿಂದುತ್ವ ಅಜೆಂಡ ಪಾಲಿಸ್ತಾರೆ. ಅಂತಹ ಒಂದು ಪಕ್ಷ ಜಮ್ಮು ಕಾಶ್ಮೀರದಲ್ಲಿ ಬರೋಬ್ಬರಿ 4 ವರ್ಷಗಳ ಕಾಲ ಪಿಡಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರದ ರುಚಿ ನೋಡಿ, ಇದೀಗ ಏಕಾಏಕಿ ಸರ್ಕಾರದಿಂದ ಹೊರಗೆ ಬಂದಿದ್ದು, ಬಿಜೆಪಿ ಕಾರಣಗಳನ್ನೂ ಕೊಟ್ಟಿದೆ.

* *ಮಾಧ್ಯಮ ಸ್ವತಂತ್ರ್ಯ, ಪತ್ರಕರ್ತನ ಹತ್ಯೆ*
* *ಕೇಂದ್ರ ಸರ್ಕಾರದ ಅನುದಾನ ಬಳಕೆಯಲ್ಲಿ ವಿಫಲ*
* *ಯೋಧನ ಹತ್ಯೆ ಹೀಗೆ ಹಲವಾರು ಕಾರಣ ನೀಡಿದೆ*.

ಜಮ್ಮು ಕಾಶ್ಮೀರದಲ್ಲಿ ಬಿಜೆಪಿ ಪಕ್ಷ ಸಮ್ಮಿಶ್ರ ಸರ್ಕಾರದಲ್ಲಿ ಭಾಗಿಯಾಗಿತ್ತು ಅನ್ನೋದೇ ವಿಶೇಷ. ಅದೇನೇ ಇರಲಿ ನಾಲ್ಕು ವರ್ಷದ ಬಳಿಕ ಬಿಜೆಪಿಗೆ ಜ್ಞಾನೋದಯವಾಗಿದೆ ಎಂಬ ಬಗ್ಗೆ ಇದೀಗ ಸಾಮಾಜಿಕ ಜಾಲ ತಾಣದಲ್ಲಿ ಜೋರಾಗಿ ಚರ್ಚೆಯಾಗ್ತಿದೆ. ಆದ್ರೆ ಬಿಜೆಪಿ ಅಜೆಂಡ ಇದ್ದಿದ್ದು ಇಷ್ಟೇ. ಒಂದು ಪಕ್ಷ ದೀರ್ಘ ಕಾಲ ಅಧಿಕಾರಕ್ಕೆ ಬರದೇ, ವಿರೋಧ ಪಕ್ಷದಲ್ಲಿ ಉಳಿದಿದ್ದರೆ ಆ ರಾಜ್ಯದಲ್ಲಿ ಆ ರಾಜಕೀಯ ಪಕ್ಷ ಉಳಿಯೋದು ಕಷ್ಟವಾಗುತ್ತೆ. ಯಾಕಂದ್ರೆ ಅಧಿಕಾರದಲ್ಲಿ ಇದ್ದವರಿಗೆ ಮಾತ್ರ ಹಣದ ಹೊಳೆ ಹರಿದು ಬರುತ್ತದೆ. ಅಧಿಕಾರಕ್ಕೆ ಬಂದವರು ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ಹಣ ಸಂಪಾದನೆ ಮಾಡ್ತಾರೆ ಅನ್ನೋದಕ್ಕಿಂತಲೂ ಮುಖ್ಯವಾಗಿ ರಾಜಕೀಯ ಪಕ್ಷಗಳಿಗೆ ಉದ್ಯಮಿಗಳ, ಕಂಪನಿಗಳು ದೇಣಿಗೆ ನೀಡುತ್ತವೆ. ಆ ದೇಣಿಗೆ ಹರಿದು ಬರಬೇಕು ಅಂದ್ರೆ ಪಕ್ಷ ಅಧಿಕಾರದಲ್ಲಿ ಇರಬೇಕು. ಹಾಗಾಗಿಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿ ಜೊತೆ ಹೊಂದಾಣಿಕೆ ಮಾಡಿಕೊಂಡು ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು.

ಪ್ರಾದೇಶಿಕ ಪಕ್ಷಗಳನ್ನು ಬಳಸಿಕೊಳ್ಳುತ್ತಾ ಬಿಜೆಪಿ..?

ಈ ರೀತಿಯ ಆರೋಪ ಬಿಜೆಪಿಗೆ ಹೊಸದೇನಲ್ಲ. ಪ್ರಾದೇಶಿಕ ಪಕ್ಷಗಳ ಜೊತೆ ಉಪಾಯವಾಗಿ ಮೈತ್ರಿ ಮಾಡಿಕೊಂಡು ಅಧಿಕಾರ ಹಿಡಿದು, ಸ್ವಲ್ಪ ಪಕ್ಷ ಸದೃಢ ಆದ ಬಳಿಕ ಮೈತ್ರಿಯಲ್ಲಿ ತಗಾದೆ ತೆಗೆಯುತ್ತೆ. ಆ ಬಳಿಕ ಸರ್ಕಾರದಿಂದ ಹೊರಬರುವ ದಾರಿ ಹುಡುಕುತ್ತೆ ಅಥವಾ ತಾನೇ ನೇರವಾಗಿ ಸರ್ಕಾರಕ್ಕೆ ಕೊಟ್ಟ ಬೆಂಬಲ ವಾಪಸ್ ಪಡೆಯುತ್ತೆ. ಇದೇ ರೀತಿ ಸಾಕಷ್ಟು ಉದಾಹರಣೆಗಳಿವೆ. ಕರ್ನಾಟಕದಲ್ಲಿ ಜೆಡಿಎಸ್, ಮಹಾರಾಷ್ಟ್ರದಲ್ಲಿ ಶಿವಸೇನೆ, ಆಂಧ್ರದಲ್ಲಿ ಟಿಆರ್‌ಎಸ್, ಬಿಹಾರದಲ್ಲಿ ಜೆಡಿಯು ಹೀಗೆ ಸಾಗುತ್ತದೆ. ಇದೀಗ ಜಮ್ಮು ಕಾಶ್ಮೀರದಲ್ಲಿ ಬೆಂಬಲ ವಾಪಸ್ ಪಡೆದಿರೋದಕ್ಕೆ ಪ್ರಮುಖ ಕಾರಣ ಅಂದ್ರೆ, ನಾನು ಭಯೋತ್ಪಾದನೆಯನ್ನು ಸಹಿಸಲ್ಲ ಎಂದು ಹೇಳಿಕೊಳ್ಳಬೇಕಿದೆ.

ಹಿಂದುತ್ವ ಅಜೆಂಡಾ ಅಂತೆಲ್ಲಾ ಹೇಳಿಕೊಂಡು ಚುನಾವಣೆ ಎದುರಿಸುವ ಪಕ್ಷ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದೀರಿ ಎಂದು ರಾಜಕೀಯ ಪಕ್ಷಗಳು ಆರೋಪ ಮಾಡುತ್ತವೆ. ಅದನ್ನು ಚುನಾವಣೆಯಲ್ಲಿ ಎದುರಿಸಬೇಕಾಗುತ್ತೆ. ಲೋಕಸಭಾ ಚುನಾವಣೆ ಸನಿಹವಾಗ್ತಿದ್ದು, ಒಂದು ವೇಳೆ ಜಮ್ಮು ಕಾಶ್ಮೀರದಲ್ಲಿ ಅಧಿಕಾರಕ್ಕಾಗಿ ಅಂಟಿಕೊಂಡು ಕುಳಿತರೆ ಭಯೋತ್ಪಾದನೆ ವಿರುದ್ಧ ಮಾತನಾಡಲು ಸಾಧ್ಯವಾಗಲ್ಲ.. ಹಿಂದೂಗಳ ಮತ ಕ್ರೂಢಿಕರಣೆ ಮಾಡಲು ಕಷ್ಟವಾಗಲಿದೆ. ಜೊತೆಗೆ ಪಿಡಿಪಿ ಜೊತೆ ಸಮ್ಮಿಶ್ರ ಸರ್ಕಾರ ನಡೆಸುವಾಗ ವಿರೋಧ ಪಕ್ಷಗಳು ಮುಗಿಬೀಳೋದು ಸಹಜ. ಜಮ್ಮು ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಎಲ್ಲೆ ಮೀರಿದೆ ಪಾಕಿಸ್ತಾನವನ್ಮು ಮಟ್ಟ ಹಾಕಲು ನರೇಂದ್ರ ಮೋದಿಯೇ ಸರಿಯಾದ ನಾಯಕ ಎಂದು ದೇಶಪ್ರೇಮ ವಿಚಾರದಲ್ಲಿ ಮತ ಸೆಳೆಯುವುದೂ ಕಷ್ಟವಾಗಲಿದೆ ಅನ್ನೋದು ಕಮಲ ಪಾಲಯದ ಲೆಕ್ಕಾಚಾರ ಎನ್ನಲಾಗ್ತಿದೆ.

Leave a Reply