ಯೋಗದಿಂದ ಸಮಾಜ ಒಡೆಯುತ್ತೆ, ಕಾಶ್ಮೀರ ಸಮಸ್ಯೆಗೆ ಭಾರತ ಕಾರಣ ಎನ್ನುತ್ತಿದ್ದಾರೆ ಕಾಂಗ್ರೆಸ್ ನಾಯಕರು!

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ನಾಯಕರಿಗೆ ಏನಾಗಿದೆಯೋ ಗೊತ್ತಿಲ್ಲ. ಹಿಂದೆಮುಂದೆ ಯೋಚಿಸದೆ ಬಾಯಿಗೆ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ.

‘ಯೋಗದಿಂದ ಸಾಮಾಜಿಕ ಪ್ರಗತಿ ಅಸಾಧ್ಯ, ಸುಮ್ಮನೇ ಸಮಾಜ ಒಡೆಯುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ’ ಎಂದು ಕಾಂಗ್ರೆಸ್‌ ವಕ್ತಾರ ಪ್ರಮೋದ್‌ ತಿವಾರಿ ಆರೋಪಿಸಿದ್ದಾರೆ.

‘ಕಾಶ್ಮೀರದ ಜನರು ಪಾಕಿಸ್ತಾನದ ಜತೆ ಸೇರಲು ಇಚ್ಚಿಸುವುದಿಲ್ಲ. ಆದರೆ ಅವರ ಮೊದಲ ಆಯ್ಕೆ ಸ್ವಾತಂತ್ರ್ಯ. ಹೀಗಾಗಿ ಸದ್ಯ ಕಾಶ್ಮೀರದ ಸಮಸ್ಯೆಗೆ ಭಾರತವೇ ಕಾರಣ’ ಎಂದು ಕಾಂಗ್ರೆಸ್‌ನ ಸೈಫುದ್ದೀನ್‌ ಸೋಝ್‌ ಹೇಳಿಕೆ ನೀಡಿದ್ದಾರೆ.

ಈ ಎರಡು ಹೇಳಿಕೆಗಳು ಮುಂದಿನ ದಿನಗಳಲ್ಲಿ ವ್ಯಾಪಕ ಚರ್ಚೆಗೆ ದಾರಿ ಮಾಡಿಕೊಡುವುದರಲ್ಲಿ ಅನುಮಾನವೇ ಇಲ್ಲ. ಈ ಹಿಂದೆ ಕಾಂಗ್ರೆಸ್ ನಾಯಕ ಮಣಿಶಂಕರ್ ಐಯ್ಯರ್ ಪಾಕಿಸ್ತಾನ ಕುರಿತ ಹೇಳಿಕೆಗಳನ್ನು ನೀಡುತ್ತಲೇ ಭಾರಿ ವಿವಾದಕ್ಕೆ ಸಿಲುಕಿದ್ದರು. ಈಗ ಇತರೆ ನಾಯಕರಿಂದಲೂ ಇಂತಹ ಹೇಳಿಕೆಗಳು ಬರುತ್ತಿದ್ದು, ಇದು ಬಿಜೆಪಿಗೆ ಅಸ್ತ್ರವಾಗಲಿದೆ. ಸಹಜವಾಗಿಯೇ ಇಂತಹ ಹೇಳಿಕೆಗಳು ಕಾಂಗ್ರೆಸ್ ಗೆ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.

Leave a Reply