ಸ್ಟಾರ್ ಗಳ ಹೆಸರಲ್ಲಿ ಅಭಿಮಾನಿಗಳ ಕೀಳು ಮಟ್ಟದ ಕಿತ್ತಾಟ

ಡಿಜಿಟಲ್ ಕನ್ನಡ ಟೀಮ್:

ಚಿತ್ರರಂಗ ಬೆಳೀಬೇಕು ಅಂದರೆ ಅಲ್ಲಿ ಸ್ಟಾರ್ ನಟರ ನಡುವೆ ಆರೋಗ್ಯಕರ ಸ್ಪರ್ಧೆ, ಸ್ನೇಹ, ವಿಶ್ವಾಸ ಎಲ್ಲವೂ ಬೇಕು. ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಡುವೆ ಪೈಪೋಟಿ ಇದೆಯೋ ಇಲ್ಲವೋ ಆದ್ರೆ ನಟರ ಅಭಿಮಾನಿಗಳ ನಡುವೆ ಬೇರೆ ನಟನಿಗೆ ಅಪಮಾನ ಮಾಡಲು ತೀವ್ರ ಪೈಪೋಟಿ ಇರುವುದು ನಿಜ.

ದರ್ಶನ್, ಸುದೀಪ್ ಹಾಗೂ ಯಶ್ ಅಭಿಮಾನಿಗಳ ನಡುವೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಯುದ್ಧವೇ ನಡೆಯುತ್ತಿದ್ದು, ಇದು ಅತ್ಯಂತ ಕೀಲುಮಟ್ಟಕ್ಕೆ ಇಳಿದಿದೆ. ತಮ್ಮ ನೆಚ್ಚಿನ ನಟನಿಗೆ ಅಭಿಮಾನ ತೋರುವ ಭರದಲ್ಲಿ ಅಭಿಮಾನಿಗಳು ಬೇರೆ ನಟರನ್ನು ಅಣಕಿಸುವ ಮೂಲಕ ತಮ್ಮ ಸ್ಟಾರ್ ಗಳ ಮಾನ ಹರಾಜು ಹಾಕುತ್ತಿದ್ದಾರೆ.

ಇತ್ತೀಚೆಗೆ ಫಿಟ್ನೆಸ್ ಚಾಲೆಂಜ್ ಪ್ರಕರಣದಲ್ಲಿ ಯಶ್ ಹಾಗೂ ಸುದೀಪ್ ಅಭಿಮಾನಿಗಳ ದುರ್ವರ್ತನೆ ಎಲ್ಲೆ ಮೀರಿತ್ತು. ಈ ಬಗ್ಗೆ ಯಶ್ ಕೂಡ ಅಭಿಮಾನಿಗಳಿಗೆ ವಾರ್ನಿಂಗ್ ಕೊಟ್ಟರು.

ಈ ಸ್ಟಾರ್ ನಟರ ಅಭಿಮಾನಿಗಳ ಸಮರ ಫೇಸ್ಬುಕ್ ಪೇಜ್ ಗಳಲ್ಲಿ ಮುಂದುವರಿಯುತ್ತಲೇ ಇದೆ. ದರ್ಶನ್, ಸುದೀಪ್ ಹಾಗೂ ಯಶ್ ಅಭಿಮಾನಿಗಳು ತಮ್ಮ ನೆಚ್ಚಿನ ನಟರ ಫ್ಯಾನ್ ಪೇಜ್ ಗಳಲ್ಲಿ ಬೇರೆ ನಟರನ್ನು ಅವಮಾಣಿಸುತ್ತಲೇ ಇದ್ದಾರೆ. ಅಭಿಮಾನಿಗಳ ಕಿತ್ತಾಟ ಕೀಲುಮಟ್ಟಕ್ಕೆ ಇಳಿದಿರುವುದಕ್ಕೆ ಈ ಚಿತ್ರಗಳೇ ಸಾಕ್ಷಿ…

ಅಭಿಮಾನ ಇರಬೇಕು. ಆ ಅಭಿಮಾನ ತಾವು ಇಷ್ಟಪಡುವ ನಟರ ಗೌರವ ಹೆಚ್ಚಿಸಬೇಕೇ ಹೊರತು ಕಳೆಯಬಾರದು. ನಿಮ್ಮ ಅಭಿಮಾನ ಕೇವಲ ನಟರಿಗೆ ಸೀಮಿತವಾಗದೆ ಚಿತ್ರರಂಗಕ್ಕೂ ಸಿಕ್ಕರೆ ಅದು ನಿಜವಾದ ಅಭಿಮಾನವಾಗುತ್ತೆ. ಇಲ್ಲವಾದರೆ ನಿಮ್ಮ ನೆಚ್ಚಿನ ನಟ ರ ಮೇಲೆ ನಿಮಗಿರುವುದು ದುರಾಭಿಮಾನ.

Leave a Reply