ಗರ್ಭನಿರೋಧಕ ವಿಧಾನಗಳಲ್ಲಿ ಕಾಪರ್-ಟಿಯ ಮಹತ್ವ ಏನು ಗೊತ್ತಾ?

ಡಾ.ಬಿ.ರಮೇಶ್

ಗರ್ಭನಿರೋಧಕ ವಿಧಾನಗಳಿಗೆ ಬಂದಾಗ ಇತ್ತೀಚಿನ ದಿನಗಳಲ್ಲಿ ಜನನ ನಿಯಂತ್ರಣ ಮಾತ್ರೆಗಳುಕಾಂಡೋಮ್‍ಗಳು ಮತ್ತು ತುರ್ತು ಮಾತ್ರೆಗಳು ಇವು ಪ್ರಸಿದ್ಧಿ ಪಡೆದ ಮಾರ್ಗಗಳಾಗಿವೆ. ಇವುಗಳೊಂದಿಗೆ ಗರ್ಭಧಾರಣೆಯನ್ನು ತಡೆಗಟ್ಟುವ ಇತರ ವಿಧಾನಗಳಿದ್ದುಇದು ಮೇಲೆ ತಿಳಿಸಿದವುಗಳಂತೆ ಹೆಚ್ಚು ಸುರಕ್ಷಿತ ಮತ್ತು ಅಗ್ಗ ವಿಧಾನವಾಗಿದೆ. ಐಯುಡಿ ಅಥವಾ ಗರ್ಭಾಶಯದ ಸಾಧನವು ಅವುಗಳಲ್ಲಿ ಒಂದಾಗಿದೆ. ಇದು ಟಿ ಆಕಾರ ಹೊಂದಿರುವ ಸಾಧನವಾಗಿದ್ದುಅವುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಕಾಪರ್-ಟಿ  ಎಂದು ಸಹ ಕರೆಯಲಾಗುತ್ತದೆ.

ಗರ್ಭನಿರೋಧಕದ ರೂಪದಲ್ಲಿ ಇದನ್ನು ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ. ಟಿ ಅಕ್ಷರದ ರೂಪದಲ್ಲಿರುವ ಚಿಕ್ಕ ಸಾಧನವಾಗಿದೆ. ಇದರಲ್ಲಿ ಸಪೂರದ ವಯರ್ ಇದ್ದುಇದನ್ನು ಗರ್ಭಾಶಯದ ನಡುವೆ ಇರಿಸಲಾಗುತ್ತದೆ. ಇದರಿಂದ ಮಹಿಳೆಗೆ ಗರ್ಭ ನಿಲ್ಲುವುದಿಲ್ಲ. ಅಲ್ಲದೇ ಯಾವಾಗ ಮಗು ಬೇಕೆನಿಸುತ್ತದೋ ಅವಾಗ ಅದನ್ನು ತೆಗೆದು ಹಾಕಲಾಗುತ್ತದೆ. ಇದನ್ನು ವೈದ್ಯರ ಸಹಾಯದಿಂದಲೇ ಹಾಕಲಾಗುವುದು ಹಾಗೂ ತೆಗೆಯುವುದು ಸಹ ವೈದ್ಯ ಸಹಾಯದಿಂದಲೇ ಮಾಡಬೇಕು.

ಕಾಪರ್-ಟಿ ಎಂದರೇನು?
ಮಹಿಳೆಯರಿಗೆ ಗರ್ಭನಿರೋಧಕತೆಯ ಆಧುನಿಕ ರೂಪವಾಗಿದೆ. ಚಿಕ್ಕ ಟಿ-ಆಕಾರದ ಗರ್ಭಕೋಶದೊಳಗೆ ಅಳವಡಿಸುವ ಸಾಧನ (ಇಂಟ್ರಾ ಯೂಟೆರೈನ್ ಡಿವೈಸ್- ಐಯುಡಿ). ಇದನ್ನು ಪ್ಲಾಸ್ಟಿಕ್‍ನಿಂದ ಮಾಡಿ ಅದರ ಕಾಂಡದ ಸುತ್ತ ಸೂಕ್ಷ್ಮವಾದ ತಾಮ್ರದ ತಂತಿಯನ್ನು ಸುತ್ತಲಾಗಿರುತ್ತದೆ. ಕಾಂಡದಿಂದ ಎರಡು ಪ್ಲಾಸ್ಟಿಕ್ ದಾರಗಳು ಇಳಿಬಿದ್ದಿರುತ್ತವೆ. ಗರ್ಭಕೋಶದೊಳಗೆ ಅಳವಡಿಸಿದ ನಂತರ ಕಾಪರ್ಟಿ ಸ್ವಸ್ಥಾನದಲ್ಲಿ ಇರುತ್ತದೆ ಮತ್ತು ಗರಿಷ್ಠ 5 ವರ್ಷಗಳವರೆಗೆ ಇದು ಪರಿಣಾಮಕರಿಯಾಗಿ ಕೆಲಸ ಮಾಡುತ್ತದೆ. ಇದರಿಂದ ಯಾವುದೇ ರೀತಿಯ ಅಡ್ಡಪರಿಣಾಮವು ಇರುವುದಿಲ್ಲ. ಸುರಕ್ಷಿತ ವಿಧಾನವಾಗಿದೆ.

ಕಾಪರ್-ಟಿ ಹೇಗೆ ಕೆಲಸ ಮಾಡುತ್ತದೆ?
ವೀರ್ಯಾಣುಗಳು ಮತ್ತು ಅಂಡಾಣು ಪರಸ್ಪರ ಸಂಧಿಸದಂತೆ ತಡೆಯುವ ಮೂಲಕ ಕಾಪರ್-ಟಿ ಮುಖ್ಯವಾಗಿ ಕೆಲಸ ಮಾಡುತ್ತದೆ. ಇದು ಲೈಂಗಿಕ ಸಂಪರ್ಕದ ಸಂದರ್ಭದಲ್ಲಿ ಯೋನಿಯೊಳಗೆ ಪ್ರವೇಶಿಸುವ ವೀರ್ಯಾಣುಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಈ ತಾಮ್ರ ವೀರ್ಯದ ಜೀವವನ್ನು ಕೊಲ್ಲುತ್ತದೆ ಮತ್ತು ಮಹಿಳೆ ಗರ್ಭಧರಿಸುವುದನ್ನು ತಡೆಯುತ್ತದೆ. ಮತ್ತು ಭ್ರೂಣವು(Embryo)ಗರ್ಭಕೋಶಕ್ಕೆ ಅಂಟುವುದನ್ನು ತಡೆಗಟ್ಟುತ್ತದೆ.

ಕಾಪರ್-ಟಿ ಸಾಧನದ ಪ್ರಯೋಜನ!
ಗರ್ಭಾಶಯದೊಳಗೆ ಒಂದು ಐಯುಡಿ ಸಾಧನವನ್ನು ಹಾಕಿದ ನಂತರಇದು ಸುಮಾರು 5ವರ್ಷದ ವರೆಗೆ  ಗರ್ಭಧಾರಣೆಯಿಂದ ಮಹಿಳೆಯರನ್ನು ಯಶಸ್ವಿಯಾಗಿ ರಕ್ಷಿಸುತ್ತದೆ. ಸಾಧನದ ದೀರ್ಘಾಯುಷ್ಯವು ತಯಾರಕರ ಮೇಲೆ ಅವಲಂಬಿತವಾಗಿರುತ್ತದೆ. ಐಯುಡಿ ಸಾಧನದ ಶಾಶ್ವತ ಪರಿಣಾಮವು ಜನನ ನಿಯಂತ್ರಣಕ್ಕೆ  ಅತ್ಯಂತ ಅಗ್ಗವಾದ ವ್ಯವಸ್ಥೆಯನ್ನು ಮಾಡುತ್ತದೆ. ಸಾಮಾನ್ಯವಾಗಿಕಾಪರ್ ಟಿ 98% ನಷ್ಟು ನಿಖರತೆಯಷ್ಟು  ರಕ್ಷಣೆ ನೀಡುತ್ತದೆ. ಆದಾಗ್ಯೂ ಒಬ್ಬ ಮಹಿಳೆ ಗರ್ಭವತಿಯಾಗಲು ಬಯಸಿದಲ್ಲಿ ಅವರು ವೈದ್ಯಕೀಯ ವೃತ್ತಿಪರರ ಸಹಾಯದಿಂದ ಯಾವುದೇ ತೊಂದರೆ ಇಲ್ಲದೆ ಗರ್ಭಧಾರಣೆಗೆ ಸನ್ನದ್ಧರಾಗಬಹುದು.

ಕಾಪರ್ ಟಿ ಎಷ್ಟು ಫಲಕಾರಿ?
ಕಾಂಡೋಮ್‍ಗಳನ್ನು ಹೊರತುಪಡಿಸಿ ಕಾಪರ್-ಟಿ ಭೌತಿಕ ಅಡೆತಡೆಗಳಲ್ಲಿ ಒಂದಾಗಿದೆ. ಇದು ನೀವು ಅಸುರಕ್ಷಿತ ಲೈಂಗಿಕ ಸಂಪರ್ಕವನ್ನು ಹೊಂದಿದ್ದರೂ ಕೂಡ ಗರ್ಭಧಾರಣೆ ಹೊಂದುವ ಅವಕಾಶವನ್ನು ವಿಳಂಬಗೊಳಿಸುವಲ್ಲಿ ಅಥವಾ ಇಲ್ಲವಾಗಿಸುವಲ್ಲಿ ಉಪಯೋಗಿಸಲ್ಪಡುವ ಇಂಟ್ರಾಯುಟರೈನ್ (ಐಯುಟಿ) ಆಗಿದೆ .ಕೆಲವು ಐಯುಟಿ ಸಾಧನಗಳು ಅನಗತ್ಯ ಗರ್ಭಧಾರಣೆಯ ವಿರುದ್ಧ ವರ್ಷಗಳವರೆಗೆ ರಕ್ಷಣೆ ನೀಡುತ್ತವೆ. ಮಹಿಳೆ ಗರ್ಭಧರಿಸದಿರಲು ಇದೊಂದು ಸುರಕ್ಷಿತ ವಿಧಾನವಾಗಿದೆ.

ಕಾಪರ್- ಟಿ  ಅನ್ನು ಬಳಸುವುದರ ಧನಾತ್ಮಕ ಪ್ರಯೋಜನಗಳು

  • ಕಾಂಡೋಮ್‍ಗಳನ್ನು ಖರೀದಿಸಲು ನೀವು ನಿರಂತರವಾಗಿ ವೈದ್ಯಕೀಯ ಅಂಗಡಿಗೆ ಓಡಬೇಕಾಗಿಲ್ಲ.
  • ನೀವು ಅಸಮರ್ಪಕ ಕಾಂಡೋಮ್ ಹೊಂದಿರುವ ಬಗ್ಗೆ ಯೋಚಿಸಬೇಕಾಗಿಲ್ಲ.
  • ಮೌಖಿಕ ಮಾತ್ರೆಗಳ ಆಘಾತಕಾರಿ ಬಳಕೆಯ ಮೂಲಕ ನಿಮ್ಮ ದೇಹವನ್ನು ನೀವು ಕಳಪೆ ಮಾಡಬೇಕಾಗಿಲ್ಲ .
  • ನಿಮ್ಮ ಗರ್ಭನಿರೋಧಕಗಳ ದಾಸ್ತಾನನ್ನು (ಕಾಂಡೋಮ್ ಮತ್ತು ಮೌಖಿಕ ಗರ್ಭನಿರೋಧಕ ಎರಡೂ) ಪುನಃ ನೀವು ಭರ್ತಿ ಮಾಡಬೇಕಿಲ್ಲ .
  • ಇದು ಕಡಿಮೆ  ಖರ್ಚಿನ  ಮತ್ತು ಜನನ ನಿಯಂತ್ರಣದ ಸುರಕ್ಷಿತ ವಿಧಾನವಾಗಿದೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಡಾ.ಬಿ.ರಮೇಶ್
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರಬೆಂಗಳೂರು. 9663311128
ಶಾಖೆ :ರಾಜಾಜಿನಗರ 9900031842

Leave a Reply