ಮೋದಿ ಟೂರ್: 42 ಪ್ರವಾಸ, 52 ದೇಶ, 165 ದಿನ, 355 ಕೋಟಿ ವೆಚ್ಚ!

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸ ಮಾಡೋದು ಬಿಟ್ಟು ಇನ್ನೇನೂ ಮಾಡಿಲ್ಲ ಎಂಬುದು ವಿರೋಧ ಪಕ್ಷಗಳ ಆರೋಪ. ಈಗ ಮೋದಿ ಕಳೆದ ನಾಲ್ಕು ವರ್ಷಗಳಲ್ಲಿ ಎಷ್ಟು ಪ್ರವಾಸ ಮಾಡಿದ್ದಾರೆ ಎಷ್ಟು ಖರ್ಚು ಮಾಡಿದ್ದಾರೆ ಎಂಬುದು ಬಹಿರಂಗವಾಗಿದೆ.

ಆರ್ ಟಿಐ ಕಾರ್ಯಕರ್ತ ಭೀಮಪ್ಪ ಗಡಾದ್ ಮೋದಿ ವಿದೇಶಿ ಪ್ರವಾಸದ ಕುರಿತಂತೆ ಆರ್ ಟಿಐ ಅರ್ಜಿ ಹಾಕಿ ಪ್ರಧಾನ ಮಂತ್ರಿ ಕಚೇರಿಯಿಂದ ಮಾಹಿತಿ ಪಡೆದಿದ್ದು, ಅದರ ಪ್ರಕಾರ 2014ರಲ್ಲಿ ಪ್ರಧಾನಿಯಾದ ಬಳಿಕ ಮೋದಿ 42 ವಿದೇಶಿ ಪ್ರವಾಸ ಮಾಡಿದ್ದು, 52 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಮೋದಿ ಅವರು 162 ದಿನಗಳ ವಿದೇಶಿ ಪ್ರವಾಸ ಮಾಡಿದ್ದು, 355 ಕೋಟಿ ಖರ್ಚು ಮಾಡಲಾಗಿದೆ.

ಮೋದಿ ವಿದೇಶಿ ಪ್ರವಾಸ…

– ಚೀನಾಗೆ ಹೆಚ್ಚು ಭೇಟಿ: ಮೋದಿ ಪ್ರಧಾನಿಯಾದ ಬಳಿಕ ಚೀನಾಗೆ ಆರು ಬಾರಿ ಭೇಟಿ ಮಾಡಿದ್ದು, ಈ ವರ್ಷ ಎರಡು ಬಾರಿ ಭೇಟಿ ನೀಡಿದ್ದಾರೆ.
– ಏಪ್ರಿಲ್ 9ರಿಂದ 15ರವರೆಗೆ ಫ್ರಾನ್ಸ್, ಜರ್ಮನಿ ಮತ್ತು ಕೆನಡಾ ಪ್ರವಾಸ ಅತ್ಯಂತ ದುಬಾರಿ ಪ್ರವಾಸವಾಗಿದ್ದು, ಈ ಪ್ರವಾಸಕ್ಕೆ ₹ 31.25 ಕೋಟಿ ವೆಚ್ಚವಾಗಿದೆ.
– 2014ರ ಜೂನ್ ತಿಂಗಳಲ್ಲಿ ಭೂತಾನ್ ಗೆ ತೆರಳಿದ್ದು, ಅತಿ ಕಡಿಮೆ ವೆಚ್ಚವಾಗಿದ್ದು ಒಟ್ಟು ₹2.45 ಕೋಟಿ ಖರ್ಚಾಗಿದೆ.

ಮೋದಿ ಪ್ರಾದೇಶಿಕ ಪ್ರವಾಸ…
– ಏಷಿಯಾ ಟೈಮ್ಸ್ ವರದಿ ಪ್ರಕಾರ ಮೋದಿ 313 ದಿನಗಳ ಕಾಲ ದೇಶವನ್ನು ಸುತ್ತಿದ್ದಾರೆ.
– ಉತ್ತರ ಪ್ರದೇಶದಲ್ಲಿ 53 ಹಾಗೂ ಗುಜರಾತಿನಲ್ಲಿ 49 ದಿನ ಪ್ರವಾಸ ಮಾಡಿರುವುದು ಗರಿಷ್ಠ.
– ಮೋದಿ ಈವರೆಗೂ ಒಮ್ಮೆಯೂ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಭೇಟಿಯಾಗಿಲ್ಲ.

Leave a Reply