ಗರ್ಭಕೋಶದ ಕ್ಯಾನ್ಸರ್ ಪತ್ತೆ ಹಚ್ಚುತ್ತೆ ಕಾಲ್ಪೋಸ್ಕೋಫಿ ತಂತ್ರಜ್ಞಾನ!

ಡಾ.ಬಿ.ರಮೇಶ್

ಮನುಷ್ಯ ದಿನ ದಿನಕ್ಕೆ ಬದಲಾವಣೆ ಕಂಡುಕೊಳ್ಳುತ್ತಾ ಬರುತ್ತಿದ್ದಾನೆ. ವೈದ್ಯ ಪದ್ಧತಿಯಲ್ಲಿ ಮೊದಲು ಎಕ್ಸರೆ ಬಂತು, ನಂತರ ಸ್ಕ್ಯಾನಿಂಗ್ ಬಂತು. ಹೀಗೆ ದಿನ ಕಳೆದಂತೆ ಹೊಸ ಹೊಸ ತಂತ್ರಜ್ಞಾನ ಬರತೊಡಗಿತು. ಅದರಲ್ಲಿಯೂ ಗರ್ಭಕೋಶ ಕೊರಳಿನ ಕ್ಯಾನ್ಸರ್ ನಂತಹ ಸೂಕ್ಷ್ಮ ರೋಗ ಪತ್ತೆ ಮಾಡಲು ಈಗ ಕಾಲ್ಪೋಸ್ಕೋಫಿ ತಂತ್ರಜ್ಞಾನಬಂದಿದೆ.

ಏನಿದು ಕಾಲ್ಪೋಸ್ಕೋಪಿ?

ಕಾಲ್ಪೋಸ್ಕೋಫಿ ಎಂಬ ಬ್ಯಾಟರಿ ಬುರುಡೆ ತರಹದ ತಂತ್ರಜ್ಞಾನವೊಂದು ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ. ಬ್ಯಾಟರಿ ಹೇಗೆ ಕತ್ತಲೆಯನ್ನು ಬೇದಿಸಿ ವಸ್ತುಗಳನ್ನು ಹುಡುಕಲು ಸಹಾಯ ಮಾಡುವುದೋ, ಹಾಗೇ ಈ ಕಾಲ್ಪೋಸ್ಕೋಫಿ. ಅಂದರೆ ಸ್ತ್ರೀಯರಿಗೆ ಬರುವ ಗರ್ಭಕೋಶ ಕೊರಳಿನ ಕ್ಯಾನ್ಸರ್ ಪತ್ತೆ ಮಾಡಲು ಇದು ಅನುವು ಮಾಡಿಕೊಡುತ್ತದೆ. ಕಾಲ್ಪ್ರೋ222 ಡಿ.ಎಕ್ಸ್ ಎಂಬ ಡಿಜಿಟಲ್ ಮಾದರಿಯ ಇದು ಆಧುನಿಕ ಮಾದರಿಯಲ್ಲಿ ರಚನೆಗೊಂಡಿರುವ ರೋಗ ಪತ್ತೆ ಹಚ್ಚುವ ತಂತಜ್ಞಾನ. ಸ್ತ್ರೀರೋಗ ತಜ್ಞರಿಗೆ ಅಥವಾ ಉದರದರ್ಶಕ ಶಸ್ತ್ರ ಚಿಕಿತ್ಸಕರಿಗೆ ಗರ್ಭಕೋಶ ಕೊರಳಿನ ಕ್ಯಾನ್ಸರ್ ಪತ್ತೆ ಹಚ್ಚುವುದು ಈಗ ಸುಲಭ.

ಕಾಲ್ಪೋಸ್ಕೋಪಿ ಹೇಗೆ ಕಾರ್ಯನಿರ್ವಹಿಸುತ್ತದೆ?

ಒಳ ಭಾಗದಲ್ಲಿ ಸುಮಾರು 50 ಸೆಂ.ಮೀ. ಉದ್ದದ ಆಟೋ ಫೋಕಸ್ ಅಳವಡಿಕೆ ಹೊಂದಿದ್ದು, ಇದರ ಸಹಾಯದಿಂದ ನಿರ್ದಿಷ್ಟ ಭಾಗವನ್ನು ತೀರಾ ಸಮೀಪದಿಂದ ನೋಡಬಹುದು. ಗರ್ಭಾಶಯದ ಕೊರಳಿನ ಸೂಕ್ಷ್ಮ ಪದರಗಳನ್ನು ಕೂಡಾ ಸುಲಭವಾಗಿ ಪರೀಕ್ಷಿಸಬಹುದು. ಮತ್ತೊಂದು ವಿಶೇಷವೆಂದರೆ, ಕಾಲ್ಪೋಸ್ಕೋಫಿಯ ಒಳಭಾಗದಲ್ಲಿ ಹಸಿರು ಬಣ್ಣದ ವಿದ್ಯುನ್ಮಾನ ಜಾಳಿಗೆ ಇರುತ್ತದೆ. ಇದರಿಂದ ಅಗತ್ಯವಾದಷ್ಟು ಬೆಳಕನ್ನು ಮಾತ್ರ ಬಳಕೆ ಮಾಡಲು ಸಾಧ್ಯ. ಈ ಬೆಳಕು ಒಳಭಾಗದಲ್ಲೆಲ್ಲೂ ನೆರಳನ್ನು ಚೆಲ್ಲುವುದಿಲ್ಲ. ಹೀಗಾಗಿ ನಿರ್ದಿಷ್ಟ ಅಂಗಗಳು ನೇರವಾಗಿ ಕಾಣಿಸುತ್ತವೆ. ಮತ್ತು ಇದರ ಮುಖಾಂತರ ಬಯಾಪ್ಸಿಯನ್ನು ತೆಗೆದುಕೊಳ್ಳಬಹುದು.

ಇದರ ಜೊತೆಗೆ ಕಾಲ್ಪೋಸ್ಕೋಪಿಯಲ್ಲಿ ಅಳವಡಿಕೆಯಾಗಿರುವ ಸಾಫ್ಟ್ ವೇರ್(256 ಎಂ.ಬಿ. ಆರ್.ಎ.ಎಂ) ಸಹಾಯದಿಂದ ಕ್ಯಾನ್ಸರ್ ನ ಲಕ್ಷಣ ಹಾಗೂ ತೀವ್ರತೆಯನ್ನು ತಿಳಿಯಬಹುದು. ಈ ಎಲ್ಲಾ ಅಂಶಗಳನ್ನು ದಾಖಲು ಮಾಡುವುದು ಇದರ ಮುಖ್ಯ ಉದ್ದೇಶ. ವೇಗವಾದ ದಾಖಲು ಹಾಗೂ ಸಮರ್ಪಕ ವಿವರಗಳ ಪಟ್ಟಿಯನ್ನು ಮಾಡುವ ಕಾಲ್ಪೋಸ್ಕೋಫಿ ತಂತ್ರಜ್ಞಾನ. ವೈದ್ಯರಿಗೆ ನಿಖರವಾದ ವಿವರವನ್ನು ಸಲ್ಲಿಸುತ್ತದೆ. ಇದರಿಂದ ವೈದ್ಯರು ಕ್ಯಾನ್ಸರ್ ನ ತೀವ್ರತೆ, ವಿಸ್ತಾರ ಅರಿಯಲು ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಆಯಾ ವಿಧಾನಗಳನ್ನು ಅನುಸರಿಸಲು ಸಹಾಯವಾಗುತ್ತದೆ. ಈ ತಂತಜ್ಞಾನದ ಮತ್ತೊಂದು ಪ್ರಮುಖ ಲಾಭ. ಇದು ಬೇರೆ ಬೇರೆ ಕೋನಗಳಿಂದ ನಿರ್ದಿಷ್ಟ ಭಾಗವನ್ನು ಸೆರೆ ಹಿಡಿಯುತ್ತದೆ. ಇದರಿಂದ ವೈದ್ಯರು ಅಂತಿಮವಾಗಿ ರೋಗ ವಿವರಗಳನ್ನು ಸಮರ್ಪಕವಾಗಿ ನೀಡಲು ಸಾಧ್ಯವಾಗುತ್ತದೆ.

ಇದರ ಸಹಾಯದಿಂದ ನಿಗೂಢವಾಗಿ ಉಳಿಯಬಹುದಾದ ಗರ್ಭಕೋಶ ಕೊರಳಿನ ಕ್ಯಾನ್ಸರ್ ರೋಗದ ಆರಂಭಿಕ ಹಂತವನ್ನು ಪತ್ತೆ ಮಾಡುವುದು ಸಾಧ್ಯವಾಗಿದೆ. ಎಷ್ಟೋ ಸಲ ರೋಗದ ತೀವ್ರತೆ ಹೆಚ್ಚಾದ ಮೇಲೆ ವೈದ್ಯಕೀಯ ಪರೀಕ್ಷೆಯಿಂದ ಕಂಡು ಬಂದರೆ, ಚಿಕಿತ್ಸೆ ಮಾಡಿದರೂ ಫಲ ಸಿಗದೇ ಹೋಗಬಹುದು. ಅದಕ್ಕಾಗೇ ರೋಗದ ಆರಂಭ ಗುರುತಿಸುವುದು ಮುಖ್ಯ. ಇದರಿಂದ ರೋಗ ಪತ್ತೆ ಹಚ್ಚುವುದು ಮೊದಲಿಗಿಂತ ಸುಲಭವಾಗಿದೆ.

ಹೇಗೆ ಈ ವಿಧಾನ?

“ಸ್ತ್ರೀಯರ ಗುಪ್ತಾಂಗದ ಮೂಲಕ ಈ ಉಪಕರಣವನ್ನು ಬಳಸಿ ಕ್ಯಾನ್ಸರ್ ಪರೀಕ್ಷೆ ಮಾಡಲಾಗುತ್ತದೆ. ಇದು ಕೇವಲ 20-30 ನಿಮಿಷಗಳ ಪರೀಕ್ಷೆ. ಯಾವುದೇ ಅಡ್ಡ ಪರಿಣಾಮ ಇಲ್ಲದ ಹಾಗೂ ನೋವಿನಿಂದ ಮುಕ್ತವಾದ ಪರೀಕ್ಷೆ ಇದಾಗಿದೆ.

ಸ್ತ್ರೀಯರಿಗೆ ಸಲಹೆ:

ಸ್ತ್ರೀಯರು ಗರ್ಭಕೋಶಕ್ಕೆ ಸಂಬಂಧಪಟ್ಟ ಯಾವುದೇ ರೀತಿಯ ಸಮಸ್ಯೆ ಕಂಡುಬಂದಲ್ಲಿ ಮುಂಚಿತವಾಗಿಯೇ ಸೂಕ್ತ ಚಿಕಿತ್ಸೆ ಪಡೆಯುವುದು ಸೂಕ್ತ. ನಿರ್ಲಕ್ಷ್ಯ ತೋರಿಸಿದರೆ ಮುಂದೆ ಅನೇಕ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಆದ್ದರಿಂದ ಸಕಾಲಿಕವಾಗಿ ವೈದ್ಯರಿಂದ ಚಿಕಿತ್ಸೆ ಪಡೆಯುವುದರ ಮೂಲಕ ನೆಮ್ಮದಿಯ ಜೀವನ ಸಾಗಿಸಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಆಲ್ಟಿಯಸ್ ಲಾಪ್ರೋಸ್ಕೋಪಿ ಸೆಂಟರ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಆಲ್ಟಿಯಸ್ ಹಾಸ್ಪಿಟಲ್
#6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873
altiushospital@yahoo.com, www.altiushospital.com

Leave a Reply