ಗರ್ಭಕೋಶದ ಎಂಡೋಮೆಟ್ರಿಯೋಸಿಸ್ ಸಮಸ್ಯೆ ಬಗ್ಗೆ ನಿಮಗೇಷ್ಟು ಗೊತ್ತು?

 ಡಾ.ಬಿ.ರಮೇಶ್

ಗರ್ಭಕೋಶದ ಒಳಪದರದ ಅಥವಾ ಗೋಡೆಗೆ ವೈದ್ಯಭಾಷೆಯಲ್ಲಿ ಎಂಡೊಮೆಟ್ರಿಯಂಎಂದು ಕರೆಯುತ್ತಾರೆ. ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಎಂಡೊಮೆಟ್ರಿಯಂ ಗೋಡೆಯ ಪದರು ರಚನೆಗೊಳ್ಳುತ್ತದೆ.

ಎಂಡೊಮೆಟ್ರಿಯಂ ಗೋಡೆಯ ಪದರ ರಚನೆಗೊಂಡಾಗ ಅಲ್ಲಿ ಭ್ರೂಣ ಬಂದು ಸೇರದೇ ಇದ್ದಾಗ ದೇಹ ಎಂಡೊಮೆಟ್ರಿಯಂನ ಆ ಭಾಗವನ್ಶು ಯೋನಿ ಮೂಲಕ ಹೊರ ಹಾಕುತ್ತದೆ. ಪ್ರತಿ ತಿಂಗಳು ತಪ್ಪದೇ ಉಂಟಾಗುವ ಈ ಕ್ರಿಯೆಯನ್ನು ಮುಟ್ಟು ಎಂದು ಹೇಳುತ್ತೇವೆ. ಕೆಲವೊಮ್ಮೆ ರಕ್ತಸ್ರಾವ ಉಂಟಾಗಿ ಫೆಲೋಫಿಯನ್ ಟ್ಯೂಬ್‍ಗಳ ಮೂಲಕ ಹಿಮ್ಮುಖವಾಗಿ ಚಲಿಸಿ ಅಲ್ಲಿ ತೊಂದರೆಗೆ ಕಾರಣವಾಗುತ್ತದೆ. ಈ ತೊಂದರೆಯನ್ನೇ ಎಂಡೊಮೆಟ್ರಿಯೋಸಿಸ್ಎಂದು ಕರೆಯಲಾಗುತ್ತದೆ.

ಗರ್ಭಕೋಶದ ಹೊರಗಡೆ ಉಂಟಾದ ರಕ್ತಸ್ರಾವ ಅಲ್ಲಿಯೇ ಹೆಪ್ಪುಗಟ್ಟುತ್ತದೆ. ಮೊದಲು ಕೆಂಪುವರ್ಣವಿದ್ದ ಟಿಶ್ಯೂಗಳು ಬಳಿಕ ಕಂದುವರ್ಣ ತಾಳುತ್ತವೆ. ಇದನ್ನೇ ಚಾಕ್ಲೆಟ್ ಸಿಸ್ಟ್ಎಂದು ಕರೆಯುತ್ತಾರೆ. ಇದು ಪ್ರಮುಖವಾಗಿ ಅಂಡಾಶಯದಲ್ಲಿ ಉಂಟಾಗುತ್ತದೆ. ಚಾಕ್ಲೆಟ್ ಸಿಸ್ಟ್ಬೇರೆ ಬೇರೆ ಅಂಗಗಳು ಪರಸ್ಪರ ಅಂಟಿಕೊಳ್ಳುವಂತಹ ಸ್ಥಿತಿ ಉತ್ಪನ್ನ ಮಾಡುತ್ತದೆ. ಈ ಕಾರಣದಿಂದ ವಿಪರೀತ ನೋವು ಶುರುವಾಗುತ್ತದೆ.

ಮುಖ್ಯ ಲಕ್ಷಣಗಳು…

  • ಮುಟ್ಟಿನ ಸಂದರ್ಭದಲ್ಲಿ ವಿಪರೀತ ಹೊಟ್ಟೆನೋವು ಉಂಟಾಗುತ್ತದೆ.
  • ಕೆಲವರಿಗೆ ವಿಪರೀತ ರಕ್ತಸ್ರಾವ ಉಂಟಾಗುತ್ತದೆ.
  • ಸಮಾಗಮದ ಸಂದರ್ಭದಲ್ಲೂ ಅತಿಯಾದ ನೋವು ಉಂಟಾಗುತ್ತದೆ.
  • ಮುಟ್ಟಿನ ಸಂದರ್ಭದಲ್ಲಿ ಮಲವಿಸರ್ಜನೆ ಮಾಡುವಾಗ ನೋವು ಅನಿಸುತ್ತದೆ.
  • ಮೂತ್ರದಲ್ಲೂ ರಕ್ತ ಬರಬಹುದು.
  • ಬಂಜೆತನಕ್ಕೂ ಇದು ಪ್ರಮುಖ ಕಾರಣ.
  • ಶ್ವಾಸಕೋಶ ಭಾಗದಲ್ಲಿ ರಕ್ತಸ್ರಾವ ಆಗಿದ್ದರೆ, ಕೆಮ್ಮಿದಾಗ ಕಫದ ಜತೆ ರಕ್ತವೂ ಬರಬಹುದು.

ಪರೀಕ್ಷೆ ಹೇಗೆ?

ಸ್ಕ್ಯಾನ್ ಮಾಡುವುದರ ಮೂಲಕ ಎಂಡೊಮೆಟ್ರಿಯೊಸಿಸ್ನ ಸ್ಥಿತಿಗತಿಯನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬಹುದು. ಲ್ಯಾಪ್ರೊಸ್ಕೋಪಿಯಿಂದ ಗರ್ಭಕೋಶ ಹಾಗೂ ಅದರ ಅಕ್ಕಪಕ್ಕದ ಅಂಗಗಳ ಸ್ಪಷ್ಟ ಚಿತ್ರಣ ದೊರೆಯುತ್ತದೆ. ಎಂಡೊಮೆಟ್ರಿಯೊಸಿಸ್ ಸಮಸ್ಯೆ ಇರುವ ಮಹಿಳೆಗೆ ಗರ್ಭಕೋಶದ ಹೊರಭಾಗದಲ್ಲಿ ರಕ್ತಸ್ರಾವ ಆಗಿರುತ್ತದೆ. ಅಂಡಾಣು ಮತ್ತು ವೀರ್ಯಾಣುವಿಗೆ ಮಿಲನಗೊಳ್ಳಲು ಅಲ್ಲಿ ಸೂಕ್ತ ಅವಕಾಶವೇ ಇರುವುದಿಲ್ಲ. ಹೀಗಾಗಿ ಗರ್ಭಧಾರಣೆ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ.

ಒಂದುವೇಳೆ ಅಂಡಕೋಶದಲ್ಲಿ ರಕ್ತಹೆಪ್ಪುಗಟ್ಟಿದ್ದರೆ ಅಂಡಗಳ ಸಂಖ್ಯೆ ಹಾಗೂ ಅವುಗಳ ಗುಣಮಟ್ಟ ಭಾರಿಪ್ರಮಾಣದಲ್ಲಿ ಕುಸಿಯುತ್ತದೆ. ಎಂಡೊಮೆಟ್ರಿಯೋಸಿಸ್ ಸಮಸ್ಯೆ ಇರುವ ಮಹಿಳೆಯರು ಮಗು ಪಡೆಯುವ ಅಭಿಲಾಷೆ ಇದ್ದರೆ ತಡಮಾಡಬಾರದು. ತಡಮಾಡಿದರೆ ನಿರಾಸೆ ಉಂಟಾಗಬಹುದು.

ಚಿಕಿತ್ಸೆ ಹೇಗೆ?

ಎಂಡೊಮೆಟ್ರಿಯೊಸಿಸ್ ಸಮಸ್ಯೆ ಇರುವ ಮಹಿಳೆಗೆ ಲ್ಯಾಪ್ರೊಸ್ಕೋಪಿಯೇ ಸೂಕ್ತಚಿಕಿತ್ಸೆ. ಒಂದಕ್ಕೊಂದು ಅಂಟಿಕೊಂಡಿರುವ ಅಂಗಗಳನ್ನು ಲ್ಯಾಪ್ರೊಸ್ಕೋಪಿಯಿಂದ ಬೇರ್ಪಡಿಸಲಾಗುತ್ತದೆ. ಇದಕ್ಕಾಗಿ ಅಬ್ಲೇಷನ್ ಕ್ರಿಯೆ ಅನುಸರಿಸಲಾಗುತ್ತದೆ. ಟ್ಯೂಬ್ ಬ್ಲಾಕ್ ಆಗಿದ್ದರೆ ಅದನ್ನು ನಿವಾರಿಸಿ ಗರ್ಭಕೋಶದಲ್ಲಿ ಎಂಡೊಮೆಟ್ರಿಯೊಸಿಸ್ ಸ್ಪಾಟ್ಗಳಿದ್ದರೆ ಅವನ್ನೂ ಬರ್ನ್ ಮಾಡಲಾಗುತ್ತದೆ.

ಅಂಡಾಶಯದಲ್ಲಿ ಉಂಟಾಗಿರುವ ಚಾಕ್ಲೆಟ್ ಸಿಸ್ಟ್ ಅನ್ನು ತೆಗೆದು ಅಂಡಾಶಯವನ್ನು ಮರುಜೋಡಣೆ ಮಾಡಲಾಗುತ್ತದೆ. ಲ್ಯಾಪ್ರೋಸ್ಟ್ಕೋಪಿ ಚಿಕಿತ್ಸೆಯಿಂದ ಮಹಿಳೆಗೆ ನೋವು ಕಡಿಮೆ ಆಗುತ್ತದೆ ಮತ್ತು ಬಂಜೆತನ ಇರುವ ಮಹಿಳೆಯರಲಿ 60% ರಷ್ಟು ಮಹಿಳೆಯರು ಗರ್ಭ ಧರಿಸುತ್ತಾರೆ. ಲ್ಯಾಪ್ರೋಸ್ಕೋಪಿ ನಂತರ ರೋಗಿಗೆ 3-6 ತಿಂಗಳು Gnrh anolognes ಚಿಕಿತ್ಸೆ ನೀಡಬೇಕು.

ಹೆಚ್ಚಿನ ಮಾಹಿತಿಗೆ:

ಆಲ್ಟಿಯಸ್ ಲಾಪ್ರೋಸ್ಕೋಪಿ ಸೆಂಟರ್
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಆಲ್ಟಿಯಸ್ ಹಾಸ್ಪಿಟಲ್
#6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

altiushospital@yahoo.com, www.altiushospital.com

Leave a Reply