ಕುಮಾರಸ್ವಾಮಿ ಬಜೆಟ್‌ನಲ್ಲಿ ರೈತರಿಗೆ ಸಿಕ್ಕಿದ್ದೇನು?

ಡಿಜಿಟಲ್ ಕನ್ನಡ ಟೀಮ್:

ರೈತರಿಗೆ ಈ ಬಾರಿ ಬಜೆಟ್‌ನಲ್ಲಿ ಬಂಪರ್ ಸಿಗಲಿಗೆ ಅನ್ನೋ ಮಾತು ಚುನಾವಣೆ ಮುಗಿದು ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಿದ್ದ ಹಾಗೆ ಪ್ರಚಲಿತಕ್ಕೆ ಬಂದಿತ್ತು. ಅದೇ ರೀತಿ ಇಂದು ಕುಮಾರಸ್ವಾಮಿ ಮಂಡಿಸಿದ ಬಜೆಟ್‌ನಲ್ಲಿ 2 ಲಕ್ಷ ರೂಪಾಯಿವರೆಗೆ ರೈತರ ಬೆಳೆ ಸಾಲಮನ್ನಾ ಮಾಡುವ ಘೋಷಣೆ ಹೊರಬಿದ್ದಿದೆ.

ಸರ್ಕಾರದ ಸಾಲಮನ್ನಾ ಯಾರಿಗೆಲ್ಲಾ ಅನ್ವಯ ಆಗುತ್ತೆ ಅಂತಾ ನೋಡೋದಾದ್ರೆ..

 • ಡಿಸೆಂಬರ್​ 31, 2017ರವರೆಗೆ ಪಡೆದ ಎಲ್ಲಾ ರೈತರ ಬೆಳೆಸಾಲ ಮನ್ನಾ.
 • ಒಟ್ಟು 2 ಲಕ್ಷ ರೂಪಾಯಿಗಳ ಬೆಳೆ ಸಾಲಮನ್ನಾ.
 • ಸಿದ್ದರಾಮಯ್ಯ ಮಾಡಿದ್ದ ಸಾಲಮನ್ನಾ ಫಲಾನುಭವಿಗಳಿಗೆ 1.5 ಲಕ್ಷ ಮಾತ್ರ ಮನ್ನಾ.
 • ಸಹಕಾರಿ ಸಂಘಗಳ 50 ಸಾವಿರ ರೂಪಾಯಿ ಸಾಲಮನ್ನಾ ಮಾಡಿದ್ದ ಸಿದ್ದರಾಮಯ್ಯ.
 • ಹೆಚ್​ಡಿಕೆ ಮತ್ತು ಸಿದ್ದರಾಮಯ್ಯ ಅವಧಿ ಎರಡೂ ಸೇರಿ 2 ಲಕ್ಷ ಸಾಲಮನ್ನಾ.
 • ನಿಗದಿತ ದಿನಾಂಕದೊಳಗೆ ಸಾಲ ಪಾವತಿಸಿ ಸುಸ್ತಿದಾರರಾಗಿಲ್ಲದಿದ್ದರೆ 25 ಸಾವಿರ ರೂ. ವಾಪಸ್ ಜಮೆ.
 • ರೈತರ ಅಕೌಂಟ್​ಗಳಿಗೆ ನೇರವಾಗಿ ಸರ್ಕಾರದ ವತಿಯಿಂದ ಹಣ ಜಮೆ

ಸಾಲಮನ್ನಾ ಬಳಿಕ ಕೃಷಿ ಕ್ಷೇತ್ರಕ್ಕೆ ಬಜೆಟ್ ಸಿಕ್ಕಿದ್ದೇನು? ಅಂತಾ ನೋಡೋದಾದ್ರೆ..

 • ಇಸ್ರೇಲ್ ಮಾದರಿ ನೀರಾವರಿ ಸೌಲಭ್ಯಕ್ಕೆ 150 ಕೋಟಿ ರೂಪಾಯಿ.
 • ಆಂಧ್ರ ಮಾದರಿಯ ಶೂನ್ಯ ಬಂಡವಾಳ ಕೃಷಿ ಯೋಜನೆಗೆ 50 ಕೋಟಿ ರೂಪಾಯಿ.
 • ಅಂತರಗಂಗೆ ಸೂಕ್ಷ್ಮ ನೀರಾವರಿ ನಿಗಮಕ್ಕೆ 2 ಕೋಟಿ ರೂಪಾಯಿ.
 • ರೈತರ ಸಂಕಷ್ಟ ಪರಿಹಾರಕ್ಕೆ ಕೃಷಿ ಸಮನ್ವಯ ಸಮಿತಿ ರಚನೆ ಮಾಡಲು ನಿರ್ಧಾರ.
 • ತೋಟಗಾರಿಕಾ ವಲಯದಲ್ಲಿ ಇಸ್ರೇಲ್ ಮಾದರಿ ಕೃಷಿಗೆ ಒತ್ತು.
 • ಎಪಿಎಂಸಿ ವತಿಯಿಂದ 10 ಸ್ಥಳಗಳಲ್ಲಿ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ.
 • ಮೈಸೂರಿನಲ್ಲಿ 3 ಕೋಟಿ ವೆಚ್ಚದಲ್ಲಿ ರೇಷ್ಮೆಗೂಡು ಮಾರುಕಟ್ಟೆ.
 • ಹಾಸನದಲ್ಲಿ ಮೆಗಾ ಡೈರಿ ಸ್ಥಾಪನೆ 50 ಕೋಟಿ ರೂಪಾಯಿ ಮೀಸಲು ಮಾಡಲು ಕುಮಾರಸ್ವಾಮಿ ನಿರ್ಧಾರ ಮಾಡಿದ್ದಾರೆ

Leave a Reply