3 ತಿಂಗಳ ಬಳಿಕ ಕುಮಾರಸ್ವಾಮಿ ರಾಜೀನಾಮೆ ಬಿಎಸ್‌ವೈ ಮುಖ್ಯಮಂತ್ರಿ?

ಡಿಜಿಟಲ್ ಕನ್ನಡ ಟೀಮ್:

ರಾಜ್ಯದಲ್ಲಿ‌ ಈ ಬಾರಿ ಚುನಾವಣೆಯಲ್ಲಿ‌ ಪಕ್ಕಾ ಜಾತಿ ಲೆಕ್ಕಾಚಾರ ವರ್ಕೌಟ್ ಆಗಿದ್ದು, ಲಿಂಗಾಯತರು ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿ ಆಗಲಿ ಎಂದು ಬಯಸಿದ್ರು. ಆದ್ರೆ ಒಕ್ಕಲಿಗರು ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲೇ ಬೇಕೆಂದು ಪಣತೊಟ್ಟಿದ್ದರು. ಕೊನೆಗೆ‌ ಒಕ್ಕಲಿಗ ಸಮುದಾಯದ ನಿರೀಕ್ಷೆಯಂತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಲಿಂಗಾಯತ ಸ್ವಾಮೀಜಿಗಳು ಮಾತ್ರ ಅಲ್ಲೊಂದು ಇಲ್ಲೊಂದು ಹೇಳಿಕೆ ಕೊಡುತ್ತಲೇ ಇದ್ದಾರೆ.

ಇದೀಗ ರಂಭಾಪುರಿ ಮಠದ ಶ್ರೀಗಳು ಮಾತನಾಡಿದ್ದು ಅಕ್ಟೋಬರ್ ಎರಡನೇ ವಾರದಲ್ಲಿ ಸಮ್ಮಿಶ್ರ ಸರ್ಕಾರ ಉರುಳುತ್ತೆ, ಮತ್ತೇ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ ಎಂದು ಭವಿಷ್ಯ ಹೇಳ್ತಿದ್ದಾರೆ. ಯಡಿಯೂರಪ್ಪ ಅವರ ಜಾತಕ ಕುಂಡಲಿಯಲ್ಲಿ ಈ ಮಹಾಯೋಗ ಇದೆ. ಹೀಗಾಗಿ ಅಕ್ಟೋಬರ್ ಎರಡನೇ ವಾರದಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗ್ತಾರೆ, ಅವರ ಕುಂಡಳಿ ಪ್ರಕಾರ ಅವರಿಗೆ ಯೋಗ ಇದೆ ಎಂದಿದ್ದಾರೆ. ಅಕ್ಟೋಬರ್ ಎರಡನೇ ವಾರದ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುವ ‌ಯೋಗ ಇದೆ. ಯಡಿಯೂರಪ್ಪ ಖಂಡಿತವಾಗಿ ಮುಖ್ಯಮಂತ್ರಿಯಾಗ್ತಾರೆ, ಯಡಿಯೂರಪ್ಪರ ದಿಟ್ಟತನ ಎಲ್ಲರಿಗೂ ಮಾದರಿ, ಕಷ್ಟ ಸಹಿಸಿಕೊಂಡು ಅವರು ಮುಂದೆ ಹೋಗುತಿದ್ದಾರೆ, ಹಾಗಾಗಿ ಅವರಿಗೆ ಮುಂದೆ ಯೋಗ ಕಾದಿದೆ ಎಂದು ತುಮಕೂರಿನ ನೋಣವಿನಕೆರೆ ಕಾಡುಸಿದ್ದೇಶ್ವರ ಮಠದ ಬುಧವಾರ ರಾತ್ರಿ ಹೇಳಿದ್ದಾರೆ.

ರಂಭಾಪುರಿ ಸ್ವಾಮೀಜಿ ಹೇಳಿರುವ ಪ್ರಕಾತ ಅಕ್ಟೋಬರ್ ಮೊದಲ ವಾರದಲ್ಲಿ ಕುಮಾರಸ್ವಾಮಿ ಸರ್ಕಾರ ಪತನ ಆಗಬೇಕಿದೆ. ಆದರೆ ಲೋಕಸಭೆ ತನಕ ಸರ್ಕಾರಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಬರುವುದಿಲ್ಲ ಎಂದು ಸ್ವತಃ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ಇದನ್ನು ಕುಮಾರಸ್ವಾಮಿ ಅವರೂ ಕೂಡ ಹೇಳಿದ್ದು, ಒಂದು ವರ್ಷ ಕಾಲ ನನ್ನನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ.

ಇನ್ನೂ ಬಿಜೆಪಿ ಪಕ್ಷ ಆಪರೇಷನ್ ಕಮಲ ಮಾಡುವ ಮೂಲಕ ವಿಧಾನಸಭೆಯಲ್ಲಿ ಅವಿಶ್ವಾಸ ನಿರ್ಣಯ ಮಂಡಿಸಿ ಅಧಿಕಾರ ಹಿಡಿಯುವ ಸಂಭವ ಇದೆ ಅನ್ನೋದಕ್ಕೂ ಸಾಧ್ಯವಿಲ್ಲ. ಯಾಕಂದ್ರೆ ಒಮ್ಮೆ ಸದನದಲ್ಲಿ ವಿಶ್ವಾಸಮತ ಗೆಲುವು ಸಾಧಿಸಿದ್ರೆ ಮತ್ತೆ ಅವಿಶ್ವಾಸ ಮಂಡನೆಗೆ 6 ತಿಂಗಳ ಅಂತ ಇರಬೇಕು. ಸ್ವಾಮೀಜಿ ಹೇಳಿದ ಸಮಯ ಅದಕ್ಕೂ ಹೊಂದಾಣಿಕೆ ಆಗ್ತಿಲ್ಲ. ಒಟ್ಟಾರೆ ರಂಭಾಪುರಿ ಶ್ರೀಗಳು ಹೇಳಿದ್ದಾರೆ. ಯಡಿಯೂರಪ್ಪ ಅವರ ಕುಂಡಲಿ ನೋಡಿ ಹೇಳಿದ್ರೋ ಅಥವಾ ಯಡಿಯೂರಪ್ಪ ಅವರನ್ನು ಜಾತಿ ಆಧಾರಿತವಾಗಿ ಓಲೈಸಲು ಹೇಳಿದ್ರೋ ಅನ್ನೋದು ಮೂರು ತಿಂಗಳ ಬಳಿಕವಷ್ಟೇ ಗೊತ್ತಾಗಬೇಕಿದೆ.

Leave a Reply