ರೈತರ ಸಾಲಮನ್ನಾ ವಿಚಾರದಲ್ಲಿ ನಿಲ್ಲುತ್ತಾ ತಂಟೆ ತಕರಾರು?

ಡಿಜಿಟಲ್ ಕನ್ನಡ ಟೀಮ್:

ನಾನು ಸ್ವತಂತ್ರವಾಗಿ ಸರ್ಕಾರ ರಚನೆ ಮಾಡಿದರೆ, ರೈತರ 54 ಸಾವಿರ ಕೋಟಿ ಸಂಪೂರ್ಣ ಸಾಲಮನ್ನಾ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದ ಜೆಡಿಎಸ್ ಪಕ್ಷ, ಸ್ವತಂತ್ರವಾಗಿ ಅಧಿಕಾರಕ್ಕೆ ಬಾರದಿದ್ದರೂ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದೆ. ಕುಮಾರಸ್ವಾಮಿ ಮುಖ್ಯಮಂತ್ರಿಯೂ ಆಗಿದ್ದಾರೆ. ಆದ್ರೀಗ ಹೇಳಿದಂತೆ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ವಿಚಾರದಲ್ಲಿ ಎಡವಿದ ಮುಖ್ಯಮಂತ್ರಿ ರಾಷ್ಟ್ರೀಕೃತ, ಸಹಕಾರಿ ಬ್ಯಾಂಕ್‌ನ ಸುಸ್ತಿಸಾಲ ಮನ್ನಾ ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಿದ್ರು. ಆ ಬಳಿಕ ರಾಜಕಾರಣಿಗಳು ಹಾಗೂ ರೈತಾಪಿ ವರ್ಗದಲ್ಲೂ ಸಾಕಷ್ಟು ಅಪಸ್ವರಗಳು ಕೇಳಿಬಂದಿದ್ವು. ಇದೀಗ ತಿದ್ದುಪಡಿ ಮಾಡಿಕೊಂಡಿರು ಮುಖ್ಯಮಂತ್ರಿ ಕುಮಾರಸ್ವಾಮಿ, ಸಂಪೂರ್ಣ ಸಾಲಮನ್ನಾ ಆಗದಿದ್ದರೂ ಇದೀಗ ಸಹಕಾರಿ ಸಂಘಗಳಲ್ಲಿನ 1 ಲಕ್ಷ ರೂಪಾಯಿವರೆಗಿನ ‘ಚಾಲ್ತಿ ಸಾಲ’ವನ್ನು ಮನ್ನಾ ಮಾಡೋದಾಗಿ ಘೋಷಿಸಿದ್ದಾರೆ. ಈ ಮೂಲಕ, ರೈತರ ಹೊರೆ ಇಳಿಸಿದ್ದಾರೆ. ಜೊತೆಗೆ ,5 ಕೆ.ಜಿಗೆ ಇಳಿಸಲು ಚಿಂತನೆ ನಡೆಸಿದ್ದ ಅನ್ನಭಾಗ್ಯ ಅಕ್ಕಿಯನ್ನು ಯಥಾಸ್ಥಿತಿ ಅಂತೆ 7 ಕೆ.ಜಿ ವಿತರಣೆಗೆ ನಿರ್ಧಾರ ಮಾಡಿದ್ದಾರೆ.

ಬಜೆಟ್ ಮೇಲಿನ ಚರ್ಚೆಗೆ ಉತ್ತರ ಕೊಡುತ್ತ ಮಾತನಾಡಿದ ಮುಖ್ಯಮಂತ್ರಿ, ಬಜೆಟ್‌ನಲ್ಲಿ ಅಲ್ಪ ಸಂಖ್ಯಾತರಿಗೆ ಅನ್ಯಾಯ ಆಗಿಲ್ಲ. ಉತ್ತರ ಕರ್ನಾಟಕವನ್ನ ಕಡೆಗಣಿಸಿಲ್ಲ ಅಂತ ಸ್ಪಷ್ಟ ಪಡಿಸಿದ್ರು. ಆದ್ರೆ, ವಿದ್ಯಾರ್ಥಿಗಳ ಉಚಿತ ಪಾಸ್ ಬಗ್ಗೆ ಗೊಂದಲ ವ್ಯಕ್ತವಾಗಿದೆ. ಇದೇ ವೇಳೆ, ಅಪ್ಪ-ಮಕ್ಕಳ ಬಜೆಟ್, ಅಣ್ಣತಮ್ಮಂದಿರ ಬಜೆಟ್, ರಾಮನಗರ, ಮಂಡ್ಯ, ಹಾಸನಕ್ಕೆ ಸೀಮಿತ ಬಜೆಟ್ ಅನ್ನೋ ಏನೇ ಟೀಕೆ ಬಂದರು ನಮ್ಮದು ರೈತ ಪರ ಸರ್ಕಾರ ಅಂತ ಟೀಕಾಕಾರರ ಬಾಯಿ ಮುಚ್ಚಿಸೋ ಯತ್ನ ಮಾಡಿದ್ರು. ಆದ್ರೆ, ಸಿಎಂ ಉತ್ತರಕ್ಕೆ ತೃಪ್ತಿಯಾಗದ ಬಿಜೆಪಿ ನಾಯಕರು ಮಧ್ಯೆ ಮಧ್ಯೆ ತಗಾದೆ ತೆಗಿಯುತ್ತಲೇ ಇತ್ತು. ಕೊನೆಗೆ ಸಭಾತ್ಯಾಗವನ್ನೂ ಮಾಡಿದ್ರು. ಇನ್ನು, ನಿನ್ನೆಗೆ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನ ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದ್ದು ಇಂದೂ ಕೂಡ ಮುಂದುವರಿಯಲಿದೆ.

ಸಹಕಾರಿ ಸಂಘಗಳ ಚಾಲ್ತಿ ಸಾಲಮನ್ನಾ

  • ಸಹಕಾರಿ ಸಂಘಗಳ ಬೆಳೆ ಸಾಲ – 10,723 ಕೋಟಿ ಬಾಕಿ.
  • ಸದ್ಯ ಸಹಕಾರಿ ಸಂಘಗಳಿಂದ ಪಡೆಡಿರುವ 1 ಲಕ್ಷದವರೆಗಿನ ಚಾಲ್ತಿ ಮನ್ನಾ.
  • ಈಗಾಗಲೇ ಎಲ್ಲಾ ಬ್ಯಾಂಕ್‌ಗಳ 2 ಲಕ್ಷದವರೆಗೆ ಸುಸ್ತಿ ಸಾಲಮನ್ನಾ ಘೋಷಣೆ.
  • 4 ಹಂತಗಳಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲಮನ್ನಾ ಹಣ ಪಾವತಿಗೆ ನಿರ್ಧಾರ.
  • ಸರ್ಕಾರದಿಂದ ಈ ವರ್ಷ 6,500 ಕೋಟಿ ಸಾಲ ಮನ್ನಾ ಪಾವತಿ.
  • ಋಣಮುಕ್ತ ಪತ್ರದ ಜತೆಗೆ ರೈತರಿಗೆ ಹೊಸ ಸಾಲ ಸೌಲಭ್ಯ.

ಬಜೆಟ್ ಮೇಲಿನ ಚರ್ಚೆಗೆ ಸಿಎಂ ಹೆಚ್.ಡಿ ಕುಮಾರಸ್ವಾಮಿ ಉತ್ತರ ನೀಡುವಾಗ ಸ್ವಲ್ಪ ಭಾವನಾತ್ಮಕವಾಗಿ ಮಾತನಾಡಿದ್ರು. ನಮ್ಮ ಬಜೆಟ್ ಬಗ್ಗೆ ವ್ಯಂಗ್ಯ ಮಾಡಲಾಗಿತ್ತು,
ನಮ್ಮದು ದೊಡ್ಡ ಮಟ್ಟದ ಟೀಕೆಗಳಿಗೆ ಒಳಗಾದ ಬಜೆಟ್, ಎಲ್ಲ ಟೀಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ, ಅಪ್ಪ ಮಕ್ಕಳ ಬಜೆಟ್, ಅಣ್ಣತಮ್ಮಂದಿರ ಬಜೆಟ್ ಎಂದು ಟೀಕೆ ಮಾಡಿದ್ದೀರಿ. ರಾಮನಗರ, ಮಂಡ್ಯ, ಹಾಸನಕ್ಕೆ ಸೀಮಿತ ಬಜೆಟ್ ಅಂತಾಲೂ ಟೀಕೆ ನಡೆದಿದೆ. ನಮ್ಮ ಸರ್ಕಾರ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದ್ಮೇಲೆ ಸಂಪೂರ್ಣ ಸಾಲಮನ್ನಾ ಮಾಡ್ತೀನಿ ಅಂತಾ ಹೇಳಿದ್ದು ನಿಜ. ಆದರೆ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬರಲಿಲ್ಲ. ಆದರೂ ಸಾಲಮನ್ನಾ ಮಾಡಲು ನಿರ್ಧಾರ ಮಾಡಿದೆ. ಹೀಗಿದ್ದರೂ ಇದು ದ್ರೋಹ, ಮೋಸ ಮೋಸ ಅಂತಾ ಟೀಕೆ ಮಾಡಿದ್ದಾರೆ. ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಅನ್ನೋದು ಗೊತ್ತಿದ್ರೂ ಏಕೆ ಈಡೇರಿಸಲಾಗದ ಭರವಸೆ ಕೊಟ್ಡಿದ್ದು ಅಂತಾನೂ ಟೀಕಿಸಿದ್ದಾರೆ.

ಆದ್ರೆ ಜನ ನನಗೂ ಒಂದು ಅವಕಾಶ ಕೊಡಬಹುದು ಎಂಬ ಆಶಾಭಾವನೆ ನನ್ನಲ್ಲಿತ್ತು. ರಾಜಕಾರಣ ಅಂದ್ರೇನೇ ಆಶಾಭಾವನೆ, ಹಾಗಾಗಿ ನಾನು ನನ್ನ ದೃಷ್ಟಿಕೋನದ ಬಗ್ಗೆ ಹೇಳಿಕೊಂಡಿದ್ದೆ. ಪ್ರತಿಯೊಬ್ಬರೂ ಆಶಾಭಾವನೆಯನ್ನ ಇಟ್ಟುಕೊಂಡು ರಾಜಕೀಯ ಮಾಡ್ತಾರೆ, ನಾನು ನಮ್ಮ ಭಾವನೆ, ಕಲ್ಪನೆಗೆ ಅನುಗುಣವಾಗಿ ಕೆಲಸ ಮಾಡುತ್ತೇನೆ. ಜನಗಳ ಭಾವನೆಗಳಿಗೆ ಅನುಗುಣವಾಗಿ ಸರ್ಕಾರ ನಡೆಸಬೇಕೆಂದುಕೊಂಡಿದ್ದೇನೆ ಅಂತ ಉತ್ತರಿಸಿದ್ರು.

Leave a Reply