ಲ್ಯಾಪ್ರೋಸ್ಕೋಪಿ ಟ್ಯೂಬೆಕ್ಟಮಿ ಒಳ್ಳೆಯ ವಿಧಾನ ಏಕೆ?

– ಡಾ.ರಮೇಶ್

ಚಿಕ್ಕ ಕುಟುಂಬ ಸುಖಿ ಕುಟುಂಬಎಂಬ ಮಾತು ಅಕ್ಷರಶಃ ಸತ್ಯ. ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದರೆ ಅವರ ಯೋಗಕ್ಷೇಮದ ಬಗ್ಗೆ ಸರಿಯಾಗಿ ಗಮನಿಸಬಹುದು, ಅವರಿಗೆ ಉತ್ತಮ ಶಿಕ್ಷಣ ಕೊಡಿಸಲು ಪ್ರಯತ್ನಿಸಬಹುದು. ಆದರೆ ಕುಟುಂಬದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಗೆ ಇದ್ದರೆ ಕುಟುಂಬದ ಜವಾಬ್ದಾರಿ ನಿಭಾಯಿಸುವುದು ಕಷ್ಟವಾಗುತ್ತದೆ. ಹಾಗಾಗಿ ಮಹಿಳೆಯರು ಸೂಕ್ತ ಕಾಲದಲ್ಲಿ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆಗೆ ಒಳಗಾಗುವುದರ ಮೂಲಕ ಒಂದು ಒಳ್ಳೆಯ ನಿರ್ಧಾರಕ್ಕೆ ಅಡಿಪಾಯ ಹಾಕುತ್ತಾರೆ. ಈಗಂತೂ ಕೆಲವು ಮಹಿಳೆಯರು ಒಂದು ಮಗುವಿನ ಬಳಿಕ ಅದು ಗಂಡಾಗಿರಲಿ, ಹೆಣ್ಣಾಗಿರಲಿ, ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಿ ನೆಮ್ಮದಿಯ ಜೀವನಕ್ಕೆ ಕಾರಣೀಭೂತರಾಗುತ್ತಾರೆ.

ಯಾವ ರೀತಿಯ ಶಸ್ತ್ರಚಿಕಿತ್ಸೆ ಸೂಕ್ತ?
ಮಹಿಳೆಯರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಮೊದಲು ಓಪನ್ ಸರ್ಜರಿ ಅಂದರೆ ತೆರೆದ ಶಸ್ತ್ರಚಿಕಿತ್ಸೆ ಮಾಡುತ್ತಿದ್ದರು. ಹೀಗಾಗಿ ಶಸ್ತ್ರಚಿಕಿತ್ಸೆಯಿಂದ ಮಹಿಳೆಯರು ಬೇಗ ಗುಣಮುಖರಾಗಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಕುಟುಂಬದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುವುದು ಸಾಧ್ಯವಾಗುತ್ತಿರಲಿಲ್ಲ.  ಇತ್ತೀಚಿನ ವರ್ಷಗಳಲ್ಲಿ ಲ್ಯಾಪ್ರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಬಹಳ ಜನಪ್ರಿಯವಾಗಿದೆ. ಮಹಿಳೆಯರು ಬಹುಬೇಗ ಗುಣಮುಖರಾಗಲು, ಅವರು ಪುನಃ ತಮ್ಮ ಮೂಲ ಜವಾಬ್ದಾರಿಗಳನ್ನು ನಿಭಾಯಿಸಲು ಅನುಕೂಲ ಮಾಡಿಕೊಡುತ್ತದೆ.

ಏನಿದು ಕೀ ಹೋಲ್ ಸರ್ಜರಿ?
ಲ್ಯಾಪ್ರೊಸ್ಕೋಪಿಕ್ ಸರ್ಜರಿಯನ್ನೇ ಕೀ ಹೋಲ್ ಸರ್ಜರಿಎಂದು ಕರೆಯುತ್ತಾರೆ. ಎರಡೇ ಎರಡು ಚಿಕ್ಕ ರಂಧ್ರಗಳ ಮೂಲಕ ಒಂದು ಹೊಕ್ಕುಳಲ್ಲಿ 5 ಮಿ.ಮೀ. ಹಾಗೂ ಇನ್ನೊಂದು ಅದರ ಎಡಭಾಗದಲ್ಲಿ 7 ಮಿ.ಮೀ. ಗಾತ್ರದ ರಂಧ್ರದ ಮೂಲಕ ಉಪಕರಣಗಳನ್ನು ತೂರಿಸಿ, ಮಾನಿಟರ್ ನಲ್ಲಿ ಗರ್ಭನಾಳಗಳನ್ನು ಫೆಲೋಪ್ ರಿಂಗ್ ಉಪಯೋಗಿಸಿ ಸೀಲ್ ಮಾಡಲಾಗುತ್ತದೆ. ಇದಾದ ನಂತರ ಮಹಿಳೆ ಗರ್ಭ ಧರಿಸುವುದಿಲ್ಲ.

ಪ್ರಕ್ರಿಯೆ ಹೇಗೆ?
ಮಹಿಳೆಯರು ಇನ್ನೆಂದೂ ಗರ್ಭ ಧರಿಸದಂತೆ ಮಾಡುವ ಶಸ್ತ್ರಚಿಕಿತ್ಸೆ ಮಾಡುವ ಮುನ್ನ ವೈದ್ಯರು ದಂಪತಿಗಳನ್ನು ಕರೆದು ಅವರ ಜತೆ ಸಮಾಲೋಚನೆ ನಡೆಸುತ್ತಾರೆ. ಮಗು ಆಗದೇ ಇರಲು ನಡೆಸುವ ಈ ವಿಧಾನ ಖಾಯಂ ವಿಧಾನ. ಹಾಗಾಗಿ ಮುಂದೆ ಮಕ್ಕಳು ಬೇಡ ಅಂದರೆ ಮಾತ್ರ ಈ ನಿರ್ಧಾರಕ್ಕೆ ಬನ್ನಿ ಎಂದು ಹೇಳುತ್ತಾರೆ.

ಯಾವಾಗ ಮಾಡಿಸಿಕೊಳ್ಳುವುದು ಸೂಕ್ತ?
ಮೊದಲ ಮಗುವಿನ ನಂತರ ಇನ್ನು ನಮಗೆ ಮಕ್ಕಳು ಬೇಡ ಎಂದು ದಂಪತಿಗಳಿಗೆ ಅನ್ನಿಸಿದರೆ, ಆ ಮಗುವಿಗೆ 5 ವರ್ಷವಾದ ಬಳಿಕ ಅಂದರೆ ಆ ಮಗು ಸಂಪೂರ್ಣ ಆರೋಗ್ಯವಾಗಿದೆ ಎಂದು ಖಾತ್ರಿಯಾದರೆ ಮಾತ್ರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ನಿರ್ಧಾರಕ್ಕೆ ಬರಬೇಕು. ಇರುವ ಮಗು ಯಾವುದೊ ಕಾರಣದಿಂದ ಮೃತಪಟ್ಟಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಪುನಃ ಮಗುವನ್ನು ಪಡೆದುಕೊಳ್ಳಲು ಕಷ್ಟ.  ಎರಡನೇ ಮಗುವಿನ ಜನನದ ಬಳಿಕ ತಕ್ಷಣವೇ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯ ನಿರ್ಧಾರಕ್ಕೆ  ಬರುವ ಬದಲು ಆ ಮಗು ಚೆನ್ನಾಗಿ ಊಟ ತಿಂಡಿ ತಿನ್ನುವ ಹಂತಕ್ಕೆ ಬಂದ ನಂತರ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ಸೂಕ್ತ.

ಮರುಜೋಡಣೆ ಕಷ್ಟವಲ್ಲ!
ಸಂತಾನಹರಣ ಚಿಕಿತ್ಸೆಯ ಬಳಿಕ ಯಾವುದೊ ಕಾರಣದಿಂದ ಮಗು ಮೃತಪಟ್ಟಲ್ಲಿ, ದಂಪತಿಗಳಿಗೆ ಪುನಃ ಮಗು ಬೇಕು ಎನ್ನಿಸಿದರೆ, ಲ್ಯಾಪ್ರೊಸ್ಕೋಪಿ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಲ್ಲಿ ಸೀಲ್ ಮಾಡಿದ ಗರ್ಭನಾಳಗಳನ್ನು ಪುನಃ ಜೋಡಿಸುವುದು ಕಷ್ದ ಕೆಲಸ ಏನಲ್ಲ. ಹಾಗಾಗಿ ಶಸ್ತ್ರಚಿಕಿತ್ಸೆಗೂ ಮುನ್ನ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ.

ಲ್ಯಾಪ್ರೊಸ್ಕೋಪಿ ಸುರಕ್ಷಿತ
ಲ್ಯಾಪ್ರೊಸ್ಕೋಪಿ ವಿಧಾನದಲ್ಲಿ ಶಸ್ತ್ರಚಿಕಿತ್ಸೆಯನ್ನು ಅತ್ಯಂತ ನೈರ್ಮಲ್ಯಕರ ವಾತಾವರಣದಲ್ಲಿ ಯಾವುದೇ ಅವಘಡಗಳಿಗೆ ಅವಕಾಶ ಕೊಡದ ರೀತಿಯಲ್ಲಿ ನೆರವೇರಿಸಲಾಗುತ್ತದೆ. ಹೀಗಾಗಿ  ಶಸ್ತ್ರಚಿಕಿತ್ಸೆಯ ಬಳಿಕ ರಕ್ತ ಹೆಪ್ಪುಗಟ್ಟುವುದಾಗಲಿ, ಅಂಗಗಳು ಪರಸ್ಪರ ಅಂಟಿಕೊಳ್ಳುವ ಸಾಧ್ಯತೆ ಇರುವುದಿಲ್ಲ.

ತೆರೆದ ಶಸ್ತ್ರಚಿಕಿತ್ಸೆ ವಿಧಾನದಲ್ಲಿ ರಕ್ತ ಹೆಪ್ಪುಗಟ್ಟುವ, ಅಂಗಗಳು ಪರಸ್ಪರ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಸೋಂಕು ಉಂಟಾಗುವ ಸಾಧ್ಯತೆಗಳು ಕೂಡ ಇರುತ್ತವೆ. ಲ್ಯಾಪ್ರೊಸ್ಕೋಪಿ ವಿಧಾನದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಯಾವುದೇ ಕಲೆ ಕೂಡ ಉಳಿಯುವುದಿಲ್ಲ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಆಲ್ಟಿಯಸ್ ಹಾಸ್ಪಿಟಲ್:
#915, 1ನೇ ಮಹಡಿ, ಧನುಷ್ ಪ್ಲಾಜಾ,
ಐಡಿಯಲ್ ಹೋಮ್ಸ್ ಟೌನ್‍ಶಿಪ್,
ಗೋಪಾಲನ್ ಮಾಲ್ ಸಮೀಪ,
ರಾಜರಾಜೇಶ್ವರಿನಗರ, ಬೆಂಗಳೂರು.
9663311128/ 080-28606789

ಶಾಖೆ: #6/63, 59ನೇ ಅಡ್ಡರಸ್ತೆ,
4ನೇ ಬ್ಲಾಕ್, ರಾಜಾಜಿನಗರ ಎಂಟ್ರೆನ್ಸ್,
ಎಂ.ಇ.ಐ.ಪಾಲಿಟೆಕ್ನಿಕ್ ಎದುರು,
ರಾಮಮಂದಿರದ ಹತ್ತಿರ, ರಾಜಾಜಿನಗರ,
ಬೆಂಗಳೂರು-10,
9900031842/ 080-23151873

ಇಮೇಲ್ ವಿಳಾಸ: altiushospital@yahoo.com, www.altiushospital.com

Leave a Reply