325 ಮತಗಳೊಂದಿಗೆ ತನ್ನ ಸಾಮಾರ್ಥ್ಯ ಸಾಬೀತುಪಡಿಸಿದ ಮೋದಿ ಸರ್ಕಾರ!

ಡಿಜಿಟಲ್ ಕನ್ನಡ ಟೀಮ್:

ವಿರೋಧ ಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಮಂಡಿಸಿದ್ದ ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಮೋದಿ ಸರ್ಕಾರ 325 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿ, ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಇನ್ನು ವಿರೋಧ ಪಕ್ಷಗಳ ಸಂಖ್ಯೆ 126ಕ್ಕೆ ನಿಂತಿತು. ಅದರೊಂದಿಗೆ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಈ ಪರೀಕ್ಷೆಯಲ್ಲಿ ಯಶಸ್ವಿಯಾಗಿ ಪಾಸ್ ಆಗಿದೆ. ಅವಿಶ್ವಾಸ ನಿರ್ಣಯದ ಕುರಿತ ಪ್ರಶ್ನೆಗೆ ಮಾಧ್ಯಮಗಳ ಮುಂದೆ ‘ನಮ್ಮ ಬಳಿ ಸಂಖ್ಯಾಬಲವಿಲ್ಲ ಎಂದು ಹೇಳಿದವರಾರು?’ ಎಂದು ಉತ್ತರಿಸಿದ್ದ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ಗೆ ತೀವ್ರ ಮುಖಭಂಗವಾಗಿದೆ.

ಅವಿಶ್ವಾಸ ನಿರ್ಣಯ ಮಂಡನೆಗೂ ಮುನ್ನ ಸಂಖ್ಯಾಬಲದ ಲೆಕ್ಕಾಚಾರದಲ್ಲಿ ಎನ್ ಡಿಎ ಸರ್ಕಾರದ ಒಟ್ಟು ಬಲ 315ರಷ್ಟಿತ್ತು. ವಿರೋಧ ಪಕ್ಷಗಳ ಬಲ 147ರಷ್ಟಿತ್ತು. ಅಂತಿಮ ಫಲಿತಾಂಶ ಬಂದಾಗ ಎನ್ ಡಿಎ ಬಲ ನಿರೀಕ್ಷೆಗಿಂತ ಹೆಚ್ಚಾಗಿದ್ದು, ವಿರೋಧ ಪಕ್ಷಗಳ ಬಲ ಕುಸಿದಿತ್ತು. ಯುಪಿಎ ಮಿತ್ರಪಕ್ಷಗಳ ಜತೆಗೆ ಮೋದಿ ವಿರೋಧಿಗಳ ಸಂಖ್ಯಾಬಲವನ್ನು ನೋಡಿದರೆ, ವಿರೋಧ ಪಕ್ಷಗಳ ಸಂಖ್ಯೆ 130ಕ್ಕೂ ಹೆಚ್ಚಿರಬೇಕಾಗಿತ್ತು. ಇದರೊಂದಿಗೆ ಈ ಅವಿಶ್ವಾಸ ನಿರ್ಣಯದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಬಟಾಬಯಲು ಮಾಡಿದೆ.

Leave a Reply