ಮದ್ಯಪಾನ ಅಥವಾ ಸ್ತ್ರಿ ಆಸಕ್ತಿಯಿಂದ ಶೀರೂರು ಶ್ರೀ ಸತ್ತಿರಬಹುದು! ಲಕ್ಷ್ಮೀವರ ಶ್ರೀಗಳ ವಿರುದ್ಧ ಮುಂದುವರಿದ ಪೇಜಾವರ ಶ್ರೀಗಳ ಅಸಮಾಧಾನ!

ಡಿಜಿಟಲ್ ಕನ್ನಡ ಟೀಮ್:

ಉಡುಪಿಯ ಅಷ್ಟ ಮಠಗಳ ಆಂತರಿಕ ಜಗಳ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರ ನಿಧನದ ನಂತರ ರಸ್ತೆಗೆ ಬಂದು ನಿಂತಿದೆ.

ಶೀರೂರು ಶ್ರೀಗಳ ಸಾವು ಅಸಹಜ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದ್ದು, ಇತರೆ ಮಠಗಳ ಮೇಲೆ ಅನುಮಾನ ಮೂಡುತ್ತಿರುವ ಬೆನ್ನಲ್ಲೇ ಶುಕ್ರವಾರ ಪೇಜಾವರ ಶ್ರೀಗಳು ಈ ಪ್ರಕರಣದ ಬಗ್ಗೆ ನೀಡಿರುವ ಹೇಳಿಕೆ ಮಠಗಳ ಮೇಲೆ ಭಕ್ತರು ಹೊಂದಿದ್ದ ಗೌರವಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ಬಿದ್ದಿದೆ. ಸುದ್ದಿಗೋಷ್ಠಿಯಲ್ಲಿ ಶೀರೂರು ಶ್ರೀಗಳ ವಿರುದ್ಧ ತಮ್ಮ ಅಸಮಾಧಾನವನ್ನು ಹೊರಹಾಕುವುದನ್ನು ಮುಂದುವರಿಸಿರುವ ಪೇಜಾವರ ಶ್ರೀಗಳು ಹೇಳಿದ್ದಿಷ್ಟು…

‘ನಾನು ಬೇರೆ ಊರಿನಲ್ಲಿದ್ದ ಕಾರಣ ಅವರ ಅಂತಿಮ ಸಂಸ್ಕಾರಕ್ಕೆ ಬರಲಿಲ್ಲ. ಶೀರೂರು ಶ್ರೀಗಳ ಸಾವಿಗೆ ಇತರೆ ಮಠಗಳು ಕಾರಣವಲ್ಲ. ಅವರದ್ದೇ ಮಠದವರಿಂದ ಈ ಕೃತ್ಯ ನಡೆದಿರಬಹುದು. ನನ್ನ ಪ್ರಕಾರ ಅವರದ್ದು ಕೊಲೆಯಲ್ಲ. ಯಾವ ಸ್ವಾಮಿಗಳು ವಿಷ ಹಾಕಲು ಸಾಧ್ಯವಿಲ್ಲ. ಅವರಿಗೆ ಮೊದಲೇ ಅನಾರೋಗ್ಯವಿತ್ತು. ಅನ್ನದಲ್ಲಿ ವಿಷ ಸೇರಿಸುವ ಅನುಮಾನ ವ್ಯಕ್ತವಾಗಿದೆ.  ಅವರು ಇತರೆ ಮಠಗಳ ಸ್ವಾಮಿಗಳ ವಿರುದ್ಧ ಆರೋಪ ಮಾಡಿದ್ದರು. ನನ್ನ ಮೇಲೂ ಆರೋಪ ಮಾಡಿದ್ದರು. ಅವರಿಗೆ ಮಕ್ಕಳಿದ್ದಾರೆ ಎಂಬ ಬಗ್ಗೆ ಅವರೇ ಒಪ್ಪಿಕೊಂಡಿದ್ದರು. ಹೀಗಾಗಿ ಅವರನ್ನು ಸ್ವಾಮಿ ಎಂದು ಕರೆಯಲು ಹೇಗೆ ಸಾಧ್ಯ. ನೀವು ಅಷ್ಟ ಮಠಾಧೀಶರಲ್ಲ ಎಂದು ನೇರವಾಗಿ ಹೇಳಿದ್ದೆ. ಅವರು ಹೆಚ್ಚಾಗಿ ಮದ್ಯಪಾನ ಮಾಡುತ್ತಿದ್ದರು. ಅದರಿಂದಲೂ ಸಾವು ಸಂಭವಿಸಿರಬಹುದು. ಅವರಿಗೆ ಸ್ತ್ರೀಯರ ಸಂಪರ್ಕವಿತ್ತು. ಹೊಸ ಸ್ತ್ರೀಯರೊಂದಿಗೆ ಅವರಿಗೆ ಸಂಪರ್ಕ ಇತ್ತು ಎಂಬ ಮಾತು ಕೇಳಿಬಂದಿದೆ. ಅವರು ತಮ್ಮ ತಪ್ಪುಗಳನ್ನು ತಿದ್ದುಕೊಳ್ಳಬೇಕಿತ್ತು. ಈ ಹಿನ್ನೆಲೆಯಲ್ಲೂ ಜಗಳ ನಡೆದಿರಬಹುದು.’

Leave a Reply