ಧೋನಿಗೆ ಮತ್ತೆ ಟೀಮ್ ಇಂಡಿಯಾ ನಾಯಕ ಪಟ್ಟ! ಹೀಗೆ ಹೇಳಿರೋದು ಸ್ವತಃ ಬಿಸಿಸಿಐ!

ಡಿಜಿಟಲ್ ಕನ್ನಡ ಟೀಮ್:

ಟೀಮ್ ಇಂಡಿಯಾ ನಾಯಕ ಸ್ಥಾನಕ್ಕೆ ಮಹೇಂದ್ರ ಸಿಂಗ್ ಧೋನಿ ರಾಜೀನಾಮೆ ನೀಡಿ ವರ್ಷಗಳೇ ಕಳೆದಿವೆ. ಆದರೆ ಬಿಸಿಸಿಐ ಪಾಲಿಗೆ ಧೋನಿಯೇ ಇನ್ನು ನಾಯಕನಾಗಿದ್ದಾನೆ. ಧೋನಿಯನ್ನು ನಾಯಕ ಎಂದು ತನ್ನ ವೆಬ್ ಸೈಟಿನಲ್ಲಿ ಬಿಸಿಸಿಐ ತಿಳಿಸಿದ್ದು, ಟ್ವಿಟ್ಟರ್ ನಲ್ಲಿ ಅಭಿಮಾನಿಗಳಿಂದ ಟ್ರೋಲ್ ಆಗಿದೆ.

ಕೆಲವರು ಬಿಸಿಸಿಐ ಹಾಲಿ ನಾಯಕ ವಿರಾಟ್ ಕೊಹ್ಲಿಯನ್ನು ಮರೆತಿದೆ ಎಂದು ಲೇವಡಿ ಮಾಡಿದರೆ, ಮತ್ತೆಕೆಲವರು ಧೋನಿ ನಿವೃತ್ತಿ ಬಗ್ಗೆ ಚರ್ಚೆ ನಡೆಯುತ್ತಿರೋ ಹೊತ್ತಲ್ಲಿ ಬಿಸಿಸಿಐ ಧೋನಿಗೆ ನಾಯಕತ್ವ ನೀಡಲು ಹೊರಟಿದೆ ಎಂದು ಲೇವಡಿ ಮಾಡಿದ್ದಾರೆ. ಒಟ್ಟಿನಲ್ಲಿ ಉಗುರಿನಷ್ಟು ಅವಕಾಶ ಸಿಕ್ಕಿದರೆ ಸಾಕು ಅಸ್ತವನ್ನೇ ನುಂಗಲು ಕಾಯುವವರು ಈಗ ಬಿಸಿಸಿಐನ ತಪ್ಪನ್ನು ಲೇವಡಿ ಮಾಡಿ ಆನಂದಿಸುತ್ತಿದ್ದಾರೆ.

 

Leave a Reply