ಕಾಂಗ್ರೆಸ್ ಕಣ್ಣಲ್ಲಿ‌ ಕಣ್ಣಿಡಲು ಪ್ರಯತ್ನಿಸಿದವರು ಏನಾದ್ರು?

ಡಿಜಿಟಲ್ ಕನ್ನಡ ಟೀಮ್:

ಕಾಂಗ್ರೆಸ್ ಮುಂದಾಳತ್ವದಲ್ಲಿ ಟಿಡಿಪಿ ಮಂಡಿಸಿದ ಅವಿಶ್ವಾಸ ನಿರ್ಣವನ್ನು ಬಿಜೆಪಿ ತುಂಬಾ ಸರಳವಾಗಿ ಗೆಲುವು ಸಾಧಿಸಿತು. ಆದರೆ ಕಾಂಗ್ರೆಸ್ ಬಿಜೆಪಿ ಜಟಾಪಟಿ ಅಷ್ಟಕ್ಕೆ ನಿಲ್ಲಲಿಲ್ಲ. ರಾಹುಲ್ ಹೇಳಿದ ಪ್ರತಿಯೊಂದು ಮಾತಿಗೂ ಪ್ರಧಾನಿ ತೀಕ್ಷ್ಣ ಉತ್ತರ ಕೊಟ್ಟು, ಮಾತಿನ ಯುದ್ಧದಲ್ಲಿ ನಾನು ಸೋಲಲಾರೆ ಅನ್ನೋದನ್ನು ಮತ್ತೆ ತೋರಿಸಿದ್ರು. ಮೊದಲು ಮಾತನಾಡಿದ್ದ ರಾಹುಲ್ ಗಾಂಧಿ‌ ಸರ್ಕಾವರನ್ನು ಹಣಿಯುವ ಕೆಲಸ ಮಾಡಿದ್ದರು, ಆದ್ರೆ ಅದೇ ಮಾತುಗಳನ್ನು ಪುನರ್ ಉಚ್ಛಾರ ಮಾಡುತ್ತಾ ಪ್ರಧಾನಿ ಎಳೆ ಎಳೆಯಾಗಿ ತಿರುಗೇಟು ಕೊಡುತ್ತಾ ಸಾಗಿದರು. ಅದರಲ್ಲಿ ಕೆಲವು ಆಯ್ದ ಭಾಗಗಳನ್ನು ನೋಡೋದಾದ್ರೆ.‌

ದೇಶದಲ್ಲಿ‌ಈಗ ಸ್ಥಿರ ಸರ್ಕಾರ ಇದೆ, ಅದನ್ನು ಅಸ್ಥಿರ ಮಾಡುವ ಪ್ರಯತ್ನ ನಡೀತಿದೆ. ಮಾಜಿ ಪ್ರಧಾನಿ ದೇವೇಗೌಡರು, ಚಂದ್ರಶೇಖರ್ ಅವರನ್ನೂ ಕೂಡ ಅವಿಶ್ವಾಸದ ಮೂಲಕ ಕೆಳಗಿಳಿಸಲಾಯ್ತು. ಮೊದಲು ದೇವೇಗೌಡರಿಗೆ ಅಪಮಾನ ಮಾಡಿದ್ರು, ನಂತರ ಐ.ಕೆ ಗುಜ್ರಾಲ್ ಸರದಿ ಬಂತು. ಆದರೆ ದೇವೇಗೌಡರಾಗಲಿ, ಮುಲಾಯಂ ಸಿಂಗ್ ಆಗಲಿ, ಕಾಂಗ್ರೆಸ್ ಮಾಡಿರೋದನ್ನ ದ್ರೋಹ ಹೇಗೆ ಮರೆಯಲು ಸಾಧ್ಯ? ರೈತ ನಾಯಕರಿಗೆ, ಜನಸಾಮಾನ್ಯರಿಂದ ಮೇಲೆ ಬಂದವರಿಗೆ ಕಾಂಗ್ರೆಸ್ ಮೋಸ ಮಾಡಿದೆ. ವೋಟಿಗಾಗಿ ನೋಟು ಯಾರಿಗೆ ತಾನೇ ಗೊತ್ತಿಲ್ಲ ಎಂದು ಕಾಂಗ್ರೆಸ್‌ನ ಅವಿಶ್ವಾಸಕ್ಕೆ ಚಾಟಿ ಬೀಸಿದ್ರು.

ರಾಹುಲ್ ಹೇಳಿದ್ದ ಮಾತನ್ನು ಹೇಳುತ್ತಾ.. ಇವತ್ತು ಇಲ್ಲಿ ಒಂದು ವಿಷಯ ಪ್ರಸ್ತಾಪ ಆಯ್ತು, ಪ್ರಧಾನಿ ತನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಲಾರರು ಎಂದು ಹೇಳಿದ್ರು. ನಿಜ, ನಾವ್ಯಾರು ನಿಮ್ಮ ಕಣ್ಣಲ್ಲಿ ಕಣ್ಣಿಟ್ಟು ನೋಡಲು..? ನೀವು ನಾಮ್​ದಾರ್ ಆಗಿದ್ದೀರಾ, ನಾವು ಕೆಲಸ ಮಾಡುವವರಾಗಿದ್ದೇವೆ.

ನಾವು ನಿಮ್ಮ ಕಣ್ಣಲ್ಲಿ ಕಣ್ಣು ಇಟ್ಟು ನೋಡಲು ಸಾಧ್ಯವೇ ಇಲ್ಲ. ಯಾಕಂದ್ರೆ ಇದಕ್ಕೆ ಇತಿಹಾಸವೇ ಸಾಕ್ಷಿಯಾಗಿದೆ, ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಸುಭಾಷ್ ಚಂದ್ರ ಬೋಸ್ ಅವರ ಪರಿಸ್ಥಿತಿ ಏನಾಯ್ತು? ಜೆಪಿ, ಚೌದ್ರಿ ಚರಣ್ ಸಿಂಗ್, ಪಟೇಲ್ ಅವರಿಂದ ಇತ್ತೀಚಿನ ಪ್ರಣಬ್ ಮುಖರ್ಜಿ ಹಾಗೂ ಶರದ್ ಪವಾರ್ ಸೇರಿದಂತೆ ಹಲವು ನಿಮ್ಮ ಕಣ್ಣಲ್ಲಿ ಕಣ್ಣಿಡೋ ಪ್ರಯತ್ನ ಮಾಡಿದ್ರು, ಆದ್ರೆ ಈ ಎಲ್ಲರ ಸ್ಥಿತಿ ಏನಾಯ್ತು ಎಂದು ಎಲ್ಲರಿಗೂ ಗೊತ್ತಿದೆ. ಹೀಗಾಗಿ ಕಣ್ಣಲ್ಲಿ ಕಣ್ಣಿಡುವವರಿಗೆ ಹೇಗೆ ಅಪಮಾನ ಮಾಡಲಾಗುತ್ತೆ ಅನ್ನೊದು ಗೊತ್ತಿದೆ
ನಾವು ಕೆಲಸ ಮಾಡುವವರು, ನಾಮ್​ದಾರ್ ಕಣ್ಣಲ್ಲಿ ಹೇಗೆ ಕಣ್ಣಿಡಲು ಸಾಧ್ಯ? ಅಲ್ಲದೇ ಕಣ್ಣಲ್ಲಿ ಕಣ್ಣಿಡೋರ ಕಣ್ಸನ್ನೆ ಆಟವನ್ನ ಇಡೀ ದೇಶ ನೋಡ್ತಿದೆ, ಹೀಗಾಗಿ‌ ನಾನು ನಿಮ್ಮ ಕಣ್ಣಲ್ಲಿ‌ ಕಣ್ಣಿಟ್ಟು ನೋಡುವ ಸಾಹಸ ಮಾಡಲಾರೆ. ಎಂದು ತುಂಬಾ ಮಾರ್ಮಿಕವಾಗಿ ಕಾಂಗ್ರೆಸ್ ಗುಣ ಎಂತಹದ್ದು ಎಂದು ಚುಚ್ಚಿದ್ರು. ಜೊತೆಗೆ ಕಣ್ಸನ್ನೆ ಮಾಡಿ ಟೀಕಾಕಾರರ ದೃಷ್ಟಿಗೆ ಬಿದ್ದ ರಾಹುಲ್‌ಗೆ ತಿರುಗೇಟು ಕೊಟ್ರು. ಒಟ್ಟಾರೆ ಕಾಂಗ್ರೆಸ್ ಪಕ್ಷವನ್ನು ಎದಿರು ಹಾಕಿಕೊಂಡ್ರೆ ಉಳಿಗಾಲವಿಲ್ಲ ಅಂತಾ ಸಂಸತ್‌ನಲ್ಲಿ ಸಾರಿ‌..ಸಾರಿ‌.. ಹೇಳಿದ್ರು.

Leave a Reply