ಮೋದಿ ದೇಶದ ಕಾವಲುಗಾರನೋ? ಭ್ರಷ್ಟರ ಭಾಗಿದಾರನೋ?

ಡಿಜಿಟಲ್ ಕನ್ನಡ ಟೀಮ್:

2014 ರ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿದ ಪ್ರಧಾನಿ ನರೇಂದ್ರ ಮೋದಿ, ನಾನು ಈ ದೇಶದ ರಾಜನಲ್ಲ, ನಾನು ಜನ ಸೇವೆ ಮಾಡಲು ಬಂದಿರುವ ಸೇವಕ, ನನ್ನ ಕೆಲಸ ಈ ದೇಶವನ್ನು ಕಾಪಾಡುವುದು, ಈ ದೇಶದ ಚೌಕಿದಾರ್ ಎಂದು ಘೋಷಣೆ ಮಾಡಿದ್ದರು. ನಿನ್ನೆ ಅದೇ ಮಾತನ್ನು ಉಲ್ಲೇಖಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಚೌಕಿದಾರ್ ಆಗಿ ಯಾವ ಕೆಲಸವನ್ನೂ ಮಾಡಿಲ್ಲ. ಅದರ ಬದಲು ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಅಂತಾ ಹೇಳಿದ್ದರು. ಜೊತೆಗೆ ಜಿಎಸ್​ಟಿಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು ಯಾಕೆ ತರಲಿಲ್ಲ? ಎಂದು ಪ್ರಧಾನಿ ಮೋದಿಗೆ ಕೇಳಿದ್ರು.

ಇದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, ದೇಶದಲ್ಲಿ ಯುಪಿಎ ಸರ್ಕಾರವಿದ್ದಾಗ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್​ಟಿಯಿಂದ ಹೊರಗಿಡೋ ಪ್ರಯತ್ನ ನೀವೇ ಮಾಡಿದ್ದಿರಿ, ಈಗ ನೀವೇ ಆರೋಪ‌ ಮಾಡ್ತಿದ್ದೀರಿ‌ ಎಂದ್ರು. ಜೊತೆಗೆ ಯಾರನ್ನೂ ಬಿಡುವುದಿಲ್ಲ, ನೀವು ಚಿಂತೆ ಮಾಡಬೇಡಿ, ಎಲ್ಲರ ವಿಷಯ ಹೇಳುತ್ತೇನೆ ಎಂದ ಪ್ರಧಾನಿ ನೀವು ಕಾವಲುಗಾರ ಅಲ್ಲ, ಪಾಲುದಾರ ಎಂದೂ ಇಲ್ಲಿ ನನ್ನ ಬಗ್ಗೆ ಹೇಳಲಾಯ್ತು. ನೀವೇಳಿದ್ದು ನಿಜ.. ನಾನು ಕಾವಲುಗಾರನೂ ಹೌದು, ಪಾಲುದಾರನೂ ಹೌದು, ಆದ್ರೆ ನಿಮ್ಮಂತೆ ಗುತ್ತಿಗೆದಾರನಲ್ಲ ಎಂದು ಕಾಂಗ್ರೆಸ್‌ಗೆ ಟಾಂಗ್ ಕೊಟ್ರು. ನಾವು ರೈತರ ಕಷ್ಟಗಳ ಪಾಲುದಾರ, ಯುವಕರ ಕಷ್ಟಗಳ ಪಾಲುದಾರ, ದೇಶದ ಜನ ಕನಸುಗಳ ಪಾಲುದಾರ, ಜನರ ದುಃಖ ಹಂಚಿಕೊಳ್ಳುವ ಪಾಲುದಾರರು ನಾವು, ನಾವು ಗುತ್ತಿಗೆದಾರರಲ್ಲ, ಜನರ ಪಾಲುದಾರರು
ನಾವು ಜನರ ಪಾಲುದಾರರು ಎಂಬ ಹೆಮ್ಮೆ ನಮಗೆ ಇದೆ ಎಂದು ಕಾಂಗ್ರೆಸ್ ಭ್ರಷ್ಟಾಚಾರದ ಪಾಲುದಾರ ಎನ್ನುವುದನ್ನು ಪರೋಕ್ಷವಾಗಿ ಹೇಳಿದ್ರು.

ಇನ್ನು ಕಾಂಗ್ರೆಸ್​ ಪಕ್ಷಕ್ಕೆ ಒಂದೇ ಚಿಂತೆಯಾಗಿದೆ, ನಾವು ಇರ್ತೀವಿ ಇಲ್ಲಾಂದ್ರೆ ದೇಶದಲ್ಲಿ ಅಸ್ಥಿರತೆ ಇರಲಿದೆ ಎಂದು. ಯಾರ ಜೊತೆ ಏನೇನಾಯ್ತು ಅಂತ ಎಲ್ಲರಿಗೂ ಗೊತ್ತಿದೆ, ಸುಳ್ಳು ಹೇಳಲಾಗತ್ತೆ, ವದಂತಿ ಹಬ್ಬಿಸಲಾಗತ್ತೆ, ದೇಶವನ್ನ ತಪ್ಪುದಾರಿಗೆ ಎಳೆಯುವ ಎಲ್ಲಾ ಪ್ರಯತ್ನಗಳು ನಡೆಯುತ್ತಿವೆ
ಈ ಕಾಂಗ್ರೆಸ್​ನವರು ದಲಿತರು, ಶೋಷಿತರಿಗೆ ಬ್ಲ್ಯಾಕ್ ಮೇಲ್ ಮಾಡ್ತಾ ರಾಜಕೀಯ ಮಾಡ್ತಿದ್ದಾರೆ ಎಂದು ಟೀಕಿಸಿದ್ರು. ಪದೇಪದೇ ಅಂಬೇಡ್ಕರ್ ಭಾಷೆ, ದಿರಿಸು, ರಾಜಕೀಯದ ಬಗ್ಗೆ ತಮಾಷೆ ಮಾಡುವವರು ನಮಗೆ ಪಾಠ ಮಾಡ್ತಾರೆ ಎನ್ನುವ ಮೂಲಕ ಕಾಂಗ್ರೆಸ್ ಮಾಡೋದೆಲ್ಲಾ ತೋರಿಕೆಗೆ ಎನ್ನುವುದನ್ನು ತಿಳಿಸಿದ್ರು. ದೇಶದಲ್ಲಿ 1980, 1981,1989, 1999ರಲ್ಲಿ ದೇಶದಲ್ಲಿ ಸಮಯಕ್ಕೂ ಮೊದಲು ಚುನಾವಣೆಗೆ ನಡೆಸಲಾಯಿತು. ಒಂದು ಪರಿವಾರದ ವಿರುದ್ಧ ಬಂದವರಿಗೆಲ್ಲಾ ದುಸ್ಥಿತಿಯೇ ಆಗಿದೆ, ಇಷ್ಟೊಂದು ಅಹಂಕಾರ ತುಂಬಿಕೊಂಡವರು ನಮ್ಮನ್ನ ಹೇಗೆ ತಾನೇ ಒಪ್ಪಿಕೊಳ್ಳಲು ಸಾಧ್ಯ ಎಂದು ಪ್ರಶ್ನೆ ಹಾಕಿಕೊಂಡ ಪ್ರಧಾನಿ, ತಮ್ಮನ್ನ ತಾವು ದೊಡ್ಡ ವಿದ್ವಾನ್ ಎಂದು ಅಂದುಕೊಂಡವರು ಒಂದು ಮಾತು ಹೇಳಿದ್ರು ‘ಕಾಂಗ್ರೆಸ್ ಪಕ್ಷ ಬೇರೆ ಬೇರೆ ರಾಜ್ಯಗಳಲ್ಲಿ ಯಾಕೆ ಮತ್ತು ಹೇಗೆ ಬಲಹೀನವಾಯ್ತು’..? ಕಾಂಗ್ರೆಸ್ ಪಕ್ಷ ತಳಮಟ್ಟದಿಂದ ದೂರವಾಗಿ ಬಿಟ್ಟಿದೆ. ಅವರ ಜೊತೆ ಹೋಗೋರೂ ಕೂಡ ಮುಳುಗಲಿದ್ದಾರೆ ಎಂದು 1997ರ ಏಪ್ರಿಲ್ 11ರಂದು ಕಾಂಗ್ರೆಸ್ ನಾಯಕ ಚಿದಂಬರಂ ಹೇಳಿದ್ದ ಮಾತಿದು ಎಂದು ಜ್ಞಾಪಿಸಿದ್ರು.

Leave a Reply