ದೆಹಲಿ ಬಿಜೆಪಿಯಿಂದ 1800 ವಾಟ್ಸಾಪ್ ಗ್ರೂಪ್! ಎಲ್ಲಾ ಗುಂಪಿನಲ್ಲೂ ಇದ್ದಾರೆ ಅಮಿತ್ ಶಾ!

ಡಿಜಿಟಲ್ ಕನ್ನಡ ಟೀಮ್:

2019ರ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಎಚ್ಚರಿಕೆ ವಹಿಸಲು ಹೊಸ ಕ್ರಮ ಕೈಗೊಂಡಿದೆ. ದೆಹಲಿ ಬಿಜೆಪಿ 1800 ವಾಟ್ಸಾಪ್ ಗ್ರೂಪ್ ಸೃಷ್ಟಿ ಮಾಡಿದ್ದು, ಈ ಎಲ್ಲಾ ಗ್ರೂಪ್ ನಲ್ಲೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸದಸ್ಯರಾಗಿದ್ದು ನೇರವಾಗಿ ನಾಯಕರು ಹಾಗೂ ಕಾರ್ಯಕರ್ತರಿಗೆ ನಿರ್ದೇಶನ ನೀಡಲಿದ್ದಾರೆ.

ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಮಂಡಲ ಮಟ್ಟದ ಕಾರ್ಯಕರ್ತರ ಜತೆ ನೇರ ಸಂಪರ್ಕ ಸಾಧಿಸಲು ಬಿಜೆಪಿ ಅಧ್ಯಕ್ಷರು ಸಾಮಾಜಿಕ ಜಾಲತಾಣ ಬಳಸಿಕೊಳ್ಳಲು ಮುಂದಾಗಿದ್ದರು.

ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಬಿಜೆಪಿ ಸಾಮಾಜಿಕ ಜಾಲತಾಣ ಉಸ್ತುವಾರಿ ಅಧಿಕಾರಿ ನೀಲಕಂಠ ಭಕ್ಷಿ ಹೇಳಿದ್ದಿಷ್ಟು… ‘ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಒಟ್ಟಾಗಿ ಸೇರಿಸಲು ಪ್ರಯತ್ನಿಸುತ್ತಿದ್ದೇವೆ. ಈವರೆಗೂ 1800 ವಾಟ್ಸಾಪ್ ಗ್ರೂಪ್ ಸೃಷ್ಟಿಸಿದ್ದು ಈ ಸಂಖ್ಯೆ ಹೆಚ್ಚುತ್ತಿದೆ. ಸುಳ್ಳು ಮಾಹಿತಿ ಹರಡುವುದನ್ನು ತಪ್ಪಿಸಲು ಎಲ್ಲ ಗುಂಪಿನಲ್ಲೂ ಅಮಿತ್ ಶಾ ಅವರು ಸದಸ್ಯರಾಗಿದ್ದು ಅವರೇ ನೇರವಾಗಿ ನಿರ್ದೇಶನ ನೀಡಲಿದ್ದಾರೆ.’

Leave a Reply